ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.ಉಚಿತ ಪ್ರಯಾಣ ಶುರುವಾಗಿದ್ದೇ ಆಗಿದ್ದು ಮಹಿಳೆಯರ ಕಾಲು ಮನೆಯಲ್ಲಿ ನಿಲ್ಲುತ್ತಿಲ್ಲ. ದಿನದಿಂದ ದಿನಕ್ಕೆ ಮಹಿಳೆಯರ ಪ್ರವಾಸ ಜೋರಾಗಿದೆ.ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನ ಜಾರಿಗೊಳಿಸಿ ಇವತ್ತಿಗೆ ಹದಿನೈದು ದಿನವಾಗಿದ್ದು, ಮೊದಲ ವೀಕೆಂಟ್ ಕ್ಕಿಂತ ಇವತ್ತಿನ ವೀಕೆಂಡ್ಗೆ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಯ್ತು. ಹಾಗಾದ್ರೆ ಸೆಕೆಂಟ್ ವೀಕೆಂಡ್ ನಲ್ಲಿ ಹೇಗಿತ್ತು ಶಕ್ತಿಗೆ ಡಿಮ್ಯಾಂಡ್ ಬನ್ನಿ ನೋಡಿಕೊಂಡು ಬರೋಣ…
ಶಕ್ತಿ ಸ್ತ್ರೀಯರ ಪ್ರಯಾಣಕ್ಕೆ ಬಲ ತುಂಬಿದ ಯೋಜನೆ.ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಆರಂಭವಾದ ಜೂನ್ 11ರಿಂದ ತುಂಬಿ ತುಳುಕಿದ ಬಸ್ಗಳು ಈಗಲೂ ರಶ್ ಆಗಿಯೇ ಓಡಾಡ್ತಿವೆ. ಸದ್ಯ, ಜನರ ಅಂತೂ ಮಹಿಳೆಯರ ಆತುರ ಕಡಿಮೆ ಆಗಿದೆ. ಪ್ರಯಾಣಿಕರ ಒತ್ತಡವನ್ನ ನಿಭಾಯಿಸುವ ಶಕ್ತಿ ಕೂಡ ಕೆಎಸ್ಆರ್ಟಿಸಿಗೆ ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಸ್ತ್ರೀಯರು ಸಾರಿಗೆ ಬಸ್ಗೆ ಶಕ್ತಿ ತುಂಬಿದ್ದಾರೆ. ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ ಅವಕಾಶ ನೀಡಿದ ಪರಿಣಾಮ ಬಸ್ ಗಳೆಲ್ಲಾ ಫುಲ್ ರಶ್ ಆಗ್ತಿದೆ.ಕಳೆದ ವಾರಕ್ಕಿಂತ ಈ ವಾರವೂ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಪ್ರಯಾಣದಲ್ಲಿ ಏರಿಕೆ ಕಂಡಿದೆ
ಹೌದು.. ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ ಇವತ್ತಿಗೆ ಎರಡು ವಾರ ಆಯ್ತು. ಎರಡು ವಾರದಲ್ಲಿ ಕೋಟ್ಯಾಂತರ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಮಹಿಳೆಯರು ತವರು ಮನೆ, ಗಂಡನ ಮನೆ, ಬಂಧು ಬಳಗದವರು, ಪ್ರವಾಸಿ ತಾಣ, ಮತ್ತು ಪುಣ್ಯ ಕ್ಷೇತ್ರಗಳಲ್ಲಿ ದೇವರ ದರ್ಶನ ಮಾಡ್ತಿದ್ದಾರೆ.ಕಳೆದ ವೀಕೆಂಡ್ ಗೆ ಹೋಲಿಕೆ ಮಾಡಿದ್ರೆ ಈ ವಾರದ ವೀಕೆಂಡ್ ನಲ್ಲಿ ಅತಿ ಹೆಚ್ಚು ಮಹಿಳೆಯರು ಬಸ್ ಗಳಲ್ಲಿ ಓಡಾಟ ನಡೆಸಿದ್ದಾರೆ, ನಾಲ್ಕು ಸಾರಿಗೆ ನಿಗಮಗಳ ಬಸ್ ಗಳಲ್ಲಿ ಪ್ರಯಾಣಿಕೆರ ಸಂಖ್ಯೆ ಹೆಚ್ಚಿದ್ದು, ಶಕ್ತಿ ಯೋಜನೆ ಜಾರಿಯಾದ ಎರಡನೇ ವೀಕೆಂಡ್ ನಲ್ಲೂ ಮಹಿಳೆಯರ ಪ್ರಯಾಣ ಜೋರಾಗಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದ್ರೆ ಈ ವಾರ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಕಳೆದ ಶನಿವಾರ 54 ಲಕ್ಷ 30 ಸಾವಿರದ 150 ಮಹಿಳೆಯರು ಪ್ರಯಾಣ ಮಾಡಿದ್ರು. ನಿನ್ನೆ 58 ಲಕ್ಷ ಮಹಿಳಾ ಪ್ರಯಾಣಿಕರು ಸಂಖ್ಯೆ ದಾಟಿತ್ತು.
ಕಳೆದ ಶನಿವಾದ ಅಂದ್ರೆ ಜೂನ್ 17 ರ ವೀಕೆಂಡ್ ರಂದು KSRTC ಬಸ್ ನಲ್ಲಿ -15 ಲಕ್ಷ ,47,ಸಾವಿರ 020 ಮಹಿಳಾ ಪ್ರಯಾಣಿಕರು ಓಡಾಟ ಮಾಡಿದ್ರೆ, ಬಿಎಂಟಿಸಿಯಲ್ಲಿ BMTC-18,09,833,NWKSRTC ನಲ್ಲಿ-13,36,125 ಹಾಗೂ KKRTC ಬಸ್ ಗಳಲ್ಲಿ 7,37,172 ಸಂಚಾರ ಮಾಡಿದ್ದಾರೆ,ಒಟ್ಟು ಒಂದೇ ದಿನ 54,ಲಕ್ಷ 30 ಸಾವಿರ,150ಮಹಿಳೆಯರು ಓಡಾಟ ಮಾಡಿದ್ರು. ಒಟ್ಟು ಟಿಕೆಟ್ ಮೊತ್ತ ;12 ಕೋಟಿ,88 ಲಕ್ಷದ,01 ಸಾವಿರದ.618 ರೂ . ಇನ್ನೂ ಎರಡನೇ ವೀಕೆಂಟ್ ಅಂದ್ರೆ ನಿನ್ನೆ ನಾಲ್ಕು ಸಾರಿಗೆ ನಿಗಮಗಳಲ್ಲಿ ಒಟ್ಟು 58 ಲಕ್ಷ ,14,ಸಾವಿರದ 524 ಮಹಿಳಾ ಪ್ರಯಾಣಿಕರು ಓಡಾಟ ಮಾಡಿದ್ದಾರೆ. ಕಳೆದ ಶನಿವಾರಕ್ಕಿಂತ ಈ ಶನಿವಾರ ನಾಲ್ಕು ಲಕ್ಷಕ್ಕೂ ಹೆಚ್ಚು ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ ಅನ್ನೋದನ್ನ ಕೆಎಸ್ಆರ್ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಒಟ್ಟಿನಲ್ಲಿ ಫ್ರೀ ಬಸ್ ಘೋಷಣೆ ಬಳಿಕ ವೀಕೆಂಡ್ ನಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗ್ತಿದೆ. ಹೀಗಾಗಿ ಬಸ್ ನಲ್ಲಿ ದಟ್ಟನೆ ಹೆಚ್ಚಾಗಿ, ಮಹಿಳೆಯರನ್ನ ನಿಯಂತ್ರಣ ಮಾಡೋದು ನಿಗಮಗಳಿಗೆ ತಲೆನೋವು ತಂದಿದೆ. ವೀಕೆಂಡ್ ನಲ್ಲಿ ಬಸ್ ಗಳಲ್ಲಿ ರಶ್ ಬ್ರೇಕ್ ಹಾಕೋಕ್ಕೆ ಹೊಸ ರೂಲ್ಸ್ ಜಾರಿಯಾಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ,