ಬಿಸಿಯೂಟದಲ್ಲಿ ಹುಳಪತ್ತೆ ಹಿನ್ನೆಲೆ: ತಟ್ಟೆಸಮೇತಾ ವಾರ್ಡ್ ಸಭೆಗೆ ಬಂದ ವಿಧ್ಯಾರ್ಥಿಗಳು

ಜಿಲ್ಲೆ

ಬಿಸಿಯೂಟದಲ್ಲಿ ಹುಳ ಪತ್ತೆಯಾಗೋದು, ಹಲ್ಲಿ ಬೀಳೋದು ಕಾಮನ್. ಹಲವೆಡೆ ನೂರಾರು ಮಕ್ಕಳು ಆಸ್ಪತ್ರೆಗೆ ಸೇರಿದ್ರೂ, ಯಾರಿಗೂ ಬುದ್ಧಿ ಬಂದಂತಿಲ್ಲ. ಈಗ ವಿದ್ಯಾರ್ಥಿಗಳೇ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ವಿಜಯನಗರ ಜಿಲ್ಲೆ ಹರಪ್ಪನಹಳ್ಳಿ ತಾಲೂಕಿನ ಹಲುವಾಗಲುವಿನಲ್ಲಿ ಅನಪೇಕ್ಷಿತ ಘಟನೆಯೊಂದು ನಡೆದಿದೆ. ಆಳುವ ವರ್ಗದ ಗಮನ ಸೆಳೆಯಲು ವಿದ್ಯಾರ್ಥಿಗಳ ಭಿನ್ನ ಪ್ರತಿಭಟನೆ ನಡೆಸಿದ್ದಾರೆ.

ತಿನ್ನೋ ಬಿಸಿಯೂಟದಲ್ಲಿ ಹುಳಗಳು ಪತ್ತೆಯಾಗ್ತಿದ್ರಿಂದ ರೋಸಿ ಹೋಗಿದ್ದ ವಿದ್ಯಾರ್ಥಿಗಳು, ತಟ್ಟೆ ಸಮೇತ ವಾರ್ಡ್ ಸಭೆಗೆ ಮುತ್ತಿಗೆ ಹಾಕಿದ್ದಾರೆ. ಅಧಿಕಾರಿಗಳು ಜನಪ್ರತಿನಿಧಿಗಳು ಇದ್ದ ವಾರ್ಡ್ ಸಭೆಯಲ್ಲಿ ಮಕ್ಕಳು ತಟ್ಟೆಯಲ್ಲಿದ್ದ ಹುಳಗಳನ್ನ ಪ್ರದರ್ಶನ ಮಾಡಿದ್ಧಾರೆ. ವಿದ್ಯಾರ್ಥಿಗಳ ಆಕ್ರೋಶಕ್ಕೆ ಬೆಚ್ಚಿಬಿದ್ದ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶಾಲೆಯ ಅಡುಗೆ ಸಿಬ್ಬಂದಿಯ ಮೇಲೆ ಗರಂ ಆದ್ರು.

ವಾರ್ಡ್ ಸಭೆ ಮುಗಿದ ಬಳಿಕ ಅಧಿಕಾರಿಗಳು ನೇರವಾಗಿ ಜನಪ್ರತಿನಿಧಿಗಳೊಂದಿಗೆ ಶಾಲೆಗೆ ಭೇಟಿ ನೀಡಿದ್ರು. ಆಹಾರ ಧಾನ್ಯಗಳನ್ನ ಶುಚಿಗೊಳಿಸಿ ಗುಣಮಟ್ಟದ ಆಹಾರ ಒದಗಿಸುವಂತೆ ಶಿಕ್ಷಕರಿಗೆ ಹಾಗು ಬಿಸಿಯೂಟ ಸಿಬ್ಬಂದಿಗೆ ಫುಲ್ ಕ್ಲಾಸ್ ತಗೊಂಡ್ರು. ತೊಗರಿಬೆಳೆ ಹಾಗು ಬಿಸಿಯೂಟ ತಯಾರಿಸುವ ಅಕ್ಕಿಯಲ್ಲಿ ನುಸಿ ಇರುವುದು ಪತ್ತೆಯಾಗಿದ್ದು, ತಕ್ಷಣವೇ ಉತ್ತಮ ಆಹಾರ ಧಾನ್ಯಗಳನ್ನು ಒದಗಿಸುವಂತೆ, ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ರುದ್ರಪ್ಪ ಶಾಲಾ ಸಿಬ್ಬಂದಿಗೆ ತಾಕೀತು ಮಾಡಿದ್ರು.