ಚಾಮರಾಜನಗರ: ಚಾಮರಾಜನಗರ ಜಿಲ್ಲಾದ್ಯಂತ ಕಳೆದ 3 ದಿನಗಳಿಂದ ತುಂತುರು ಮಳೆಯಾಗುತ್ತಿದ್ದು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲೂ(Bandipur Tiger Reserve is a forest area) ಬಿರುಸಿನ ಮಳೆಯಾಗುತ್ತಿದೆ. ಬಂಡೀಪುರದ ಹುಲಿಯೊಂದು ಸಫಾರಿವಲಯದ ರಸ್ತೆಯಲ್ಲಿ ಶೇಖರಣೆಗೊಂಡ ಸುರಿಯುವ ಮಳೆ ನೀರನ್ನು ಕುಡಿದು ಧಣಿವರಿಸಿಕೊಂಡಿದೆ. ಹುಲಿಯೊಂದು ದಣಿವಾರಿಸಿಕೊಂಡ ದೃಶ್ಯ ಬಂಡೀಪುರ ಸಫಾರಿಗೆ(For Bandipur Safari) ತೆರಳಿದ್ದ ವೇಳೆ ಸೆರೆಯಾಗಿದ್ದು ಸದ್ಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ.
ಸುರಿಯುತ್ತಿದ್ದ ಮಳೆಯಿಂದ ರಸ್ತೆ ಮಧ್ಯದ ಹಳ್ಳದಲ್ಲಿ ನಿಂತಿದ್ದ ನೀರನ್ನು ಹುಲಿಯೊಂದು ಕುಸಿಯುತ್ತಿರುವುದನ್ನು ಸಫಾರಿಗೆ ತೆರಳಿದವರು ಸೆರೆ ಹಿಡಿದಿದ್ದು ವ್ಯಾಘ್ರನನ್ನು ಕಂಡ ಸಫಾರಿಗರು ರೋಮಾಂಚಿತರಾಗಿದ್ದಾರೆ. ಇನ್ನು, ವೀಡಿಯೋ ಬಂಡೀಪುರ ಸಫಾರಿಯಲ್ಲಿ ತೆಗೆದಿದ್ದಾಗಿದೆ ಎಂದು ಸಿಎಫ್ಒ ರಮೇಶ್ ಕುಮಾರ್ ದೃಢಪಡಿಸಿದ್ದಾರೆ.