ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಜಲಾಂತರ್ಗಾಮಿಯಲ್ಲಿ ತೆರಳಿದ್ದ ಐವರು ಶ್ರೀಮಂತರು ದಾರುಣವಾಗಿ ಮೃತಪಟ್ಟಿದ್ದರು. ಜಲಾಂತರ್ಗಾಮಿ ಸ್ಫೋಟದ ತೀವ್ರತೆಯಿಂದಾಗಿ ಮೃತಪಟ್ಟ ಯಾರ ದೇಹವೂ ಸಿಕ್ಕಿರಲಿಲ್ಲ. ಇದೀಗ ಜಲಾಂತರ್ಗಾಮಿ ಅವಶೇಷಗಳು ಪತ್ತೆಯಾಗಿದ್ದು, ಅದರ ಜೊತೆಯಲ್ಲಿ ಟೈಟಾನಿಕ್ ಹಡಗು ನೋಡಲು ತೆರಳಿದ್ದ ಮನುಷ್ಯರ ದೇಹದ ಭಾಗಗಳು ಪತ್ತೆಯಾಗಿವೆ.
ಪೈಲಟ್ ಸೇರಿ ಐದು ಮಂದಿ ಜಲಾಂತರ್ಗಾಮಿಯಲ್ಲಿ ಟೈಟಾನಿಕ್ ಅವಶೇಷಗಳನ್ನು ನೋಡಲು ತೆರಳಿದ್ದರು. ನಾಲ್ಕುದಿನಗಳು ಜಲಾಂತರ್ಗಾಮಿಯ ಪತ್ತೆಗಾಗಿ ಸಾಕಷ್ಟು ಪ್ರಯತ್ನ ನಡೆದಿತ್ತು. ಆದರೆ ಜಲಾಂತರ್ಗಾಮಿಯಲ್ಲಿ ಆಕ್ಸಿಜನ್ ಖಾಲಿ ಆದ ನಂತರ ಎಲ್ಲರೂ ಮೃತಪಟ್ಟಿದ್ದಾರೆ. ನಂತರ ಜಲಾಂತರ್ಗಾಮಿ ನೀರಿನಲ್ಲಿಯೇ ಭಯಾನಕವಾಗಿ ಸ್ಫೋಟಗೊಂಡಿದೆ. ಟೈಟಾನಿಕ್ ಅವಶೇಷಗಳಿಂದ ಒಟ್ಟಾರೆ ೧೬೦೦ ಅಡಿ ದೂರದಲ್ಲಿ ಜಲಾಂತರ್ಗಾಮಿ ಅವಶೇಷಗಳು ಪತ್ತೆಯಾಗಿವೆ. ಅದರ ಜೊತೆಯಲ್ಲಿ ಮಾನವ ಅವಶೇಷಗಳೂ ಪತ್ತೆಯಾಗಿರುವ ಬಗ್ಗೆ ಇದೀಗ ಮಾಹಿತಿ ಸಿಕ್ಕಿದೆ.