ಒಂದರ ಹಿಂದೊಂದರಂತೆ ವೈರಸ್ ಗಳು ಹರಡುತ್ತಿದ್ದು ಇದರಿಂದ ಜನ ಕಂಗಾಲಾಗಿದ್ದಾರೆ. ಈ ಮಧ್ಯೆ ಚೀನಾದಲ್ಲಿ ಇನ್ನೊಂದು ವೈರಸ್ ಪತ್ತೆಯಾಗಿದೆ, H3N8 ಹೆಸರಿನ ಈ ವೈರಸ್ ಹಕ್ಕಿ ಜ್ವರದಿಂದ ಉಂಟಾದ ಮಾರಣಾಂತಿ ವೈರಸ್ ಎಂದು ಹೇಳಲಾಗಿದೆ.
ಕೊರೊನಾ ನಂತರ ಅನೇಕ ವೈರಸ್ಗಳು ಮಾನವನ ಮೇಲೆ ಭಾರಿ ಪರಿಣಾಮವನ್ನು ಉಂಟು ಮಾಡುತ್ತಿದೆ. ಈ H3N8 ಮೊದಲ ಬಾರಿಗೆ ಚೀನಾದ 56 ವರ್ಷದ ಮಹಿಳೆಯಲ್ಲಿ ಕಂಡುಬಂದಿದೆ. H3N8 ಹಕ್ಕಿ ಜ್ವರದಿಂದ ಸಾವು ಕೂಡ ವರದಿಯಾಗಿದೆ. ಇಲ್ಲಿಯವರೆಗೆ, H3N8 ನ ಮಾನವ ಸೋಂಕಿನಿಂದ ಒಟ್ಟು ಮೂರು ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಎರಡು ಮಕ್ಕಳು ಕೋಳಿಯನ್ನು ತಿಂದು ಸಾವನ್ನಪ್ಪಿದ್ದಾರೆ. ಏವಿಯನ್ ಫ್ಲೂ ವೈರಸ್ ಎಂದಿಗೂ ಸಾವು ಉಂಟು ಮಾಡುವ ವೈರಸ್ ಅಲ್ಲ ಎಂದು ಹೇಳಲಾಗಿತ್ತು. ಆದರೆ ಇಂದು ಈ ವೈರಸ್ನಿಂದ ಮೂರು ಜನರು ಸಾವನ್ನಪ್ಪಿದ್ದಾರೆ. ಇದೀಗ ಈ ವೈರಸ್ ಸಾವಿನ ಆತಂಕ ಉಂಟು ಮಾಡಿದೆ.
H3N8 ಏವಿಯನ್ ಇನ್ಫ್ಲುಯೆನ್ಸದ ಉಪತಳಿಯಾಗಿದ್ದು, ಮೊದಲು 1960ರ ಸುಮಾರಿಗೆ ಕಾಡು ಪಕ್ಷಿಗಳಲ್ಲಿ ಕಂಡುಹಿಡಿಯಲಾಯಿತು. ಇದು ನಂತರ ಇತರ ಪಕ್ಷಿಗಳಲ್ಲಿ ಕಂಡುಬಂದಿತು. 2022ರಲ್ಲಿ ಇದು ಮತ್ತೆ ಕಾಣಿಸಿಕೊಂಡಿದ್ದು, ಕ್ರಮೇಣ ಕುದುರೆಗಳು ನಾಯಿಗಳಿಗೂ ಹರಡಲು ಶುರುವಾಗಿದೆ. H3N8 ಹಕ್ಕಿ ಜ್ವರ ಪ್ರಕರಣಗಳು ಸತ್ತ ಕೋಳಿ ಮತ್ತು ಕಲುಷಿತ ಪರಿಸರದಿಂದ ಉಂಟಾಗಿದೆ ಎಂದು ವರದಿಯಾಗಿದೆ. WHO ಪ್ರಕಾರ ಏವಿಯನ್ ಇನ್ಫ್ಲುಯೆನ್ಸ ವೈರಸ್ಗಳೊಂದಿಗಿನ ಮಾನವ ಸೋಂಕಿನ ಪ್ರಕರಣಗಳು ಸಾಮಾನ್ಯವಾಗಿ ಸೋಂಕಿತ ಜೀವಂತ ಅಥವಾ ಸತ್ತ ಕೋಳಿ, ಕಲುಷಿತ ಪರಿಸರದಿಂದ ನೇರ ಅಥವಾ ಪರೋಕ್ಷವಾಗಿ ಹರಡುತ್ತದೆ ಎಂದು ಹೇಳಿದೆ.