ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹಾಗೂ ನಟಿ ಝಹೀರ್ ಇಕ್ಬಾಲ್ ಎರಡು ದಿನಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್ 23ರಂದು ಆಪ್ತರ ಸಮ್ಮುಖದಲ್ಲಿ ಸಿಂಪಲ್ ಆಗಿ ಜೋಡಿ ಮದುವೆಯಾಗಿದ್ದಾರೆ. ಈ ಬೆನ್ನಲ್ಲೇ ನಟಿಗೆ ಪತಿ ಝಹೀರ್ ದುಬಾರಿ ಕಾರ್ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಮದುವೆಯಾದ ಎರಡೇ ದಿನಕ್ಕೆ ಪತ್ನಿ ಸೋನಾಕ್ಷಿಗೆ BMW i7 ಕಾರನ್ನು ಝಹೀರ್ ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರಿನ ಬೆಲೆ 2 ಕೋಟಿ ರೂ.ಗಿಂತ ಅಧಿಕ ಮೌಲ್ಯದಾಗಿದ್ದು, ಪತಿಯ ಗಿಫ್ಟ್ ನೋಡಿ ಸೋನಾಕ್ಷಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸೋನಾಕ್ಷಿ ಹಾಗೂ ಝಹೀರ್ ಇಬ್ಬರೂ ಬೇರೆ ಬೇರೆ ಧರ್ಮವಾಗಿರುವ ಕಾರಣ ಕಾನೂನಾತ್ಮಕವಾಗಿ ವಿವಾಹ ನೋಂದಣಿ ಮಾಡಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ 7 ವರ್ಷಗಳಿಂದ ಪ್ರೀತಿಸುತ್ತಿದ್ದ ಸೋನಾಕ್ಷಿ , ಝಹೀರ್ ಇದೀಗ ಇಬ್ಬರ ಮನೆಯಲ್ಲೂ ಒಪ್ಪಿಗೆ ಪಡೆದು ಸತಿ ಪತಿಗಳಾಗಿದ್ದಾರೆ.
“ಏಳು ವರ್ಷಗಳ ಹಿಂದೆ (23.06.2017) ಇದೇ ದಿನ, ನಾವು ಪರಸ್ಪರರ ಕಣ್ಣುಗಳಲ್ಲಿ ಪ್ರೀತಿಯನ್ನು ಅದರ ಶುದ್ಧ ರೂಪದಲ್ಲಿ ನೋಡಿದ್ದೇವೆ ಮತ್ತು ಅದನ್ನು ಹಿಡಿದಿಡಲು ನಿರ್ಧರಿಸಿದ್ದೇವು. ಇಂದು ಆ ಪ್ರೀತಿಯು ಎಲ್ಲಾ ಸವಾಲುಗಳು ಮತ್ತು ವಿಜಯಗಳ ಮೂಲಕ ನಮಗೆ ಮಾರ್ಗದರ್ಶನ ನೀಡಿದೆ . ನಮ್ಮ ಎರಡೂ ಕುಟುಂಬಗಳು ಮತ್ತು ನಮ್ಮ ಎರಡೂ ದೇವರುಗಳ ಆಶೀರ್ವಾದದೊಂದಿಗೆ ನಾವು ಈಗ ಗಂಡ-ಹೆಂಡತಿಯಾಗಿದ್ದೇವೆ. ಇಲ್ಲಿ ಪ್ರೀತಿ, ಭರವಸೆ ತುಂಬಿದೆ. ಇಂದಿನಿಂದ ಶಾಶ್ವತವಾಗಿ ಸೋನಾಕ್ಷಿ ಜಹೀರ್ 23.06.2024.” ಎಂದು ನಟಿ ಸೋನಾಕ್ಷಿ ಸೋಶಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ.
‘ಎರಡು ಕುಟುಂಬದವರ ಮತ್ತು ದೇವರ ಆಶೀರ್ವಾದದಿಂದ ನಾವು ಇಂದು ಸತಿ-ಪತಿ ಆಗಿದ್ದೇವೆ’ ಎಂದು ಬರೆದುಕೊಳ್ಳುವ ಮೂಲಕ ಸೋನಾಕ್ಷಿ ಸಿನ್ಹಾ ಮತ್ತು ಝಹೀರ್ ಇಖ್ಬಾಲ್ ಅವರು ತಮ್ಮ ಮದುವೆಯ ಸಿಹಿ ಸುದ್ದಿಯನ್ನು ಫೋಟೋ ಸಮೇತ ಶೇರ್ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಪತಿಯ ದುಬಾರಿ ಗಿಫ್ಟ್ ನೋಡಿ ನಟಿ ಮತ್ತಷ್ಟು ಖುಷಿಯಾಗಿದ್ದಾರೆ.