ಬೆಂಗಳೂರು ;- ಗಿರಿನಗರ ಠಾಣಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಂತರ್ ರಾಜ್ಯ ಡ್ರಗ್ ಪೆಡ್ಲರ್ಸ್ ಅನ್ನು ಅರೆಸ್ಟ್ ಮಾಡಿದ್ದಾರೆ.
ಸೈಯ್ಯದ್ ಸಾಧಿಕ್ ಹಾಗೂ ಮಹಾರಾಷ್ಟ್ರ ಮೂಲದ ಸಹೋದರರಾದ ಅಮೂಲ್, ಆಕಾಶ್, ರಾಹುಲ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 50 ಲಕ್ಷ ಮೌಲ್ಯದ 96 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರದ ಜಾಲ್ನಾದಲ್ಲಿ ಗ್ಯಾರೇಜ್ ಹೊಂದಿರುವ ಆರೋಪಿಗಳು ಸೈಯದ್ ಸಾಧಿಕ್ ಎಂಬಾತನ ಜೊತೆಗೂಡಿ ಗಾಂಜಾ ಮಾರಾಟ ದಂಧೆ ಮಾಡುತ್ತಿದ್ದರು. ಒಡಿಶಾದಿಂದ ಗಾಂಜಾವನ್ನು ಬೆಂಗಳೂರಿಗೆ ತಂದು ಮಾರಾಟ ಮಾಡಿಸುತ್ತಿದ್ದರು.
ಸಾಯಿ ರಾಮ್ ಎಂಬಾತನನ್ನು ಬಂಧಿಸಿದ್ದ ಗಿರಿನಗರ ಠಾಣಾ ಪೊಲೀಸರು ಬಳಿಕ ಸೈಯ್ಯದ್ ಸಾಧಿಕ್ ನನ್ನು ಬಂಧಿಸಿದ್ದರು. ಸಾಧಿಕ್ ನೀಡಿದ ಮಾಹಿತಿ ಆಧರಿಸಿ ಮಹಾರಾಷ್ಟ್ರದ ಜಾಲ್ನಾಕ್ಕೆ ತೆರಳಿದ್ದರು. ಬಳಿಕ ಆರೋಪಿ ಸಹೋದರರನ್ನು ಬಂಧಿಸಿ ಕರೆ ತರುವಾಗ ಅವರ ಕುಟುಂಬಸ್ಥರ ಹೈಡ್ರಾಮಾ ನಡೆಸಿದ್ದಾರೆ. ಬಂದು ಆರೋಪಿಗಳನ್ನು ಬಂಧಿಸಿದ್ದವರು ಕರ್ನಾಟಕ ಪೊಲೀಸರು ಎಂದು ತಿಳಿದಿದ್ದರೂ ಸಹ ತಮ್ಮವರನ್ನು ಯಾರೋ ಅಪಹರಿಸಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿದ್ದರು.
ನಂತರ ನಾವು ಕರ್ನಾಟಕ ಪೊಲೀಸರು ಎಂದು ಐಡಿ ಕಾರ್ಡ್ ತೋರಿಸಿ, ತಾವು ಆರೋಪಿಗಳನ್ನು ಬಂಧನ ಮಾಡಲು ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ. ಬಳಿಕ ಈ ಪ್ರಕರಣ ಇತ್ಯರ್ಥವಾಗಿದೆ.