ಕೋಲಾರ: ಕೋಲಾರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುವುದಿಲ್ಲ ಎಂದು ನನಗೆ ಮೊದಲೇ ಗೊತ್ತಿತ್ತು ಎಂದು ಮಾಜಿ ಶಾಸಕ ಆರ್ ವರ್ತೂರು ಪ್ರಕಾಶ್ ಅವರು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾತನಾಡಿದ ಅವರು ಬಹಳ ದಿನಗಳ ನಂತರ ಸರ್ವೆ ವರದಿ ಪೋಲಿಸ್ ವರದಿಗಳ ಪರಿಶೀಲಿಸಿ ಕೋಲಾರ ಕ್ಷೇತ್ರ ಪೂರಕವಾಗಿಲ್ಲ ಗೆಲ್ಲಕ್ಕೆ ಆಗುವುದಿಲ್ಲ ಎಂದು ಹೇಳಿ ತೀರ್ಮಾನವನ್ನು ಹೈಕಮಾಂಡ್ ಗೆ ಬಿಟ್ಟಿದ್ದಾರೆ. ಸಿದ್ದು ವಿಚಾರದಲ್ಲಿ ಸಿದ್ದರಾಮಯ್ಯನೆ ಹೈಕಮಾಂಡ್ ಕಾಂಗ್ರೆಸ್ ಅಲ್ಲ ಅವರು ಎಲ್ಲಿ ಸ್ಪರ್ಧೆ ಮಾಡು ಬೇಕು ಅಂತ ಅವರಿಗೆ ಗೊತ್ತಿದೆ ಅಂತಹ ಶಕ್ತಿ ಸಿದ್ದರಾಮಯ್ಯರಿಗೆ ಇದೆ.
ಹಾಗಾಗಿ ಕೋಲಾರದಲ್ಲಿ ಗೆಲ್ಲುವುದು ಕಷ್ಟ ಅಂತ ತಿಳಿದು ಬೇರೆ ಕಡೆ ಸ್ಪರ್ಧೆ ಮಾಡುತ್ತಾರೆ ಸಿದ್ದರಾಮಯ್ಯ ಬಂದರೆ ಅಹಿಂದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬರುತ್ತದೆ ಎಂದು ತಿಳಿದು ಕೊಂಡು ಘಟಬಂಧನ ನಾಯಕರು ಅವರನ್ನ ಕರೆದುಕೊಂಡು ಬಂದಿದ್ದರು ಘಟಬಂದನ್ ಪ್ಲಾನ್ ಎಲ್ಲವು ಪ್ಲಾಪ್ ಆಗಿ ಹೋಗಿದೆ.
ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ದೊಡ್ಡವರು ಅಂತವರೆ ನನ್ನ ವಿರುದ್ದ ಸ್ಪರ್ಧೆ ಮಾಡುವುದಕ್ಕೆ ಹಾಗದೆ ಹೋಗಿದ್ದಾರೆ ಇನ್ನು ನನಗೆ ಬ್ಯಾಲಹಳ್ಳಿ ಗೋವಿಂದಗೌಡ ಯಾವ ಲೆಕ್ಕ ಕಾಂಗ್ರೆಸ್ ಪಕ್ಷದಲ್ಲಿ ಯಾರೇ ಅಭ್ಯರ್ಥಿಯಾದರು ನಮಗೆ ತೊಂದರೆಯಿಲ್ಲ ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ನೆಲಕಚ್ಚಿದೆ.
ಆ ಕಾರಣದಿಂದಾಗಿ ಸಿದ್ದರಾಮಯ್ಯ ಕೋಲಾರಕ್ಕೆ ಬಂದಿಲ್ಲ ಇದರಿಂದಾಗಿ ಸಿದ್ದರಾಮಯ್ಯನೆ ಕೋಲಾರಕ್ಕೆ ಬಂದಿಲ್ಲ ಇನ್ನು ಬ್ಯಾಲಹಳ್ಳಿ ಗೋವಿಂದಗೌಡರು ಎಲ್ಲಿ ಎಂದು ಟಾಂಗ್ ನೀಡಿದ್ರು ಸಿದ್ದರಾಮಯ್ಯ ಆಕಾಶ ಭೂಮಿ ಇದ್ದ ಹಾಗೆ ಅಲ್ಲದೆ ಕಾಂಗ್ರೆಸ್ ಮುಖಂಡರು ಹಾಗೂ ಜೆಡಿಎಸ್ ಮುಖಂಡರು ನಿರಂತರವಾಗಿ ನನ್ನ ಸಂಪರ್ಕದಲ್ಲಿ ಇದ್ದಾರೆ.
ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ನಮ್ಮ ಶಕ್ತಿ ಜಾಸ್ತಿಯಾಗುತ್ತದೆ ಎಂದು ತಿಳಿಸಿದರು.