ಬೆಂಗಳೂರು: ಸಿಎಂ ರಾಜೀನಾಮೆ ನೀಡುವ ಅಗತ್ಯವಿಲ್ಲ ನಾನು ಕೂಡ ಸ್ಪಷ್ಟಪಡಿಸುತ್ತಿದ್ದೇನೆ 40 ವರ್ಷಗಳಿಂದ ರಾಜಕೀಯ ಜೀವನದಲ್ಲಿ ಯಾವುದೇ ಆರೋಪ ಇರಲಿಲ್ಲ ಈಗ ಅಹಜವಾಗಿ ಅವರಿಗೆ ನೋವಾಗುತ್ತದೆ..ಡಬಲ್ ಬೆಂಚ್ ನಲ್ಲಿ ಈಗ ಪ್ರಶ್ನೆ ಮಾಡ್ತೇವೆ ಎಂದು ಗೃಹ ಸಚಿವ ಡಾ.ಜಿ.
ಪರಮೇಶ್ವರ್ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯಪಾಲರು ಸಚಿವ ಸಂಪುಟದ ನಿರ್ಣಯ ಪಾಲಿಸಬೇಕೆಂಬ ಮಾತಿದೆ ವಿವೇಚನೆ ಬಳಸಬಹುದು ಎಂದೂ ಹೇಳಿದೆ -ಡಾ.ಜಿ.ಪರಮೇಶ್ವರ್ ಕೋರ್ಟ್ ತೀರ್ಪಿನಿಂದ ರಾಜ್ಯಪಾಲರಿಗೆ ಬಲ ಬಂದಿದೆ ಎನ್ನಬಹುದು ಆದ್ರೆ ಇದು ಎಲ್ಲರಿಗೂ ಅನ್ವಯ ಅಗಬೇಕಿತ್ತು ಎಂದು ಹೇಳಿದರು.
ಸಿಎಂ ವಿರುದ್ದ ತನಿಖೆಗೆ ಹೈಕೋರ್ಟ್ ಆದೇಶ ವಿಚಾರ ಬಗ್ಗೆಯೂ ಮಾತನಾಡಿ, ಮುಡಾ ಪ್ರಕರಣದಲ್ಲಿ ಸಿಎಂ ಯಾವುದಕ್ಕೂ ಸಹಿ ಹಾಕಿಲ್ಲ ಅವರ ಪಾತ್ರ ಇಲ್ಲ ಅಂತಾ ನ್ಯಾಯಾಲಯಕ್ಕೆ ಹೋಗಿದ್ವಿ.ಆದರೆ ನಮಗೆ ಹಿನ್ನಡೆ ಆಗಿದೆನ್ಯಾಯಾಲಯ ತೀರ್ಪನ್ನ ನಾವು ಗೌರವಿಸುತ್ತೇವೆಸಿಎಂ ರಾಜೀನಾಮೆ ಕೊಡುವ ಅಗತ್ಯ ಇಲ್ಲನಮಗೆ ಖಂಡಿತವಾಗಿ ನ್ಯಾಯ ಸಿಕ್ಕಿಲ್ಲ,ಸಮಾಧಾನ ಆಗಿಲ್ಲ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ತೀರ್ಪು ಏನ್ ಬರುತ್ತೋ ಗೊತ್ತಿಲ್ಲ ನೋಡೋಣ ಎಂದರು.
ಹಾಗೆ ಸಿಎಂ ರಾಜೀನಾಮೆಗಾಗಿ ಬಿಜೆಪಿ ಹೋರಾಟ ವಿಚಾರ ಬಗ್ಗೆಯೂ ಮಾತನಾಡಿ, ಅವರ ಉದ್ದೇಶವೇ ರಾಜೀನಾಮೆ ಆಗ್ರಹ. ಹೀಗಾಗಿ ಅವರು ಹೋರಾಟ ಮಾಡಿಕೊಳ್ಳಲಿ.ನಾವು ಈಗಾಗಲೇ ಸಿಎಂ ಗೆ ಹೇಳಿದ್ದೇವೆ.ರಾಜೀನಾಮೆ ಕೊಡಬೇಡಿ ಅಂತಾ ಈಗಾಗಲೇ ವೇಣುಗೋಪಾಲ್ & ಸುರ್ಜೇವಾಲಾ ಇಬ್ಬರೂ ಹೇಳಿದಾರೆ..ಹೈಕಮಾಂಡ್ ಸಿದ್ದರಾಮಯ್ಯ ಜೊತೆಗಿದೆ ಎಂದುಹೈಕಮಾಂಡ್ ಈಗಾಗಲೇ ಸ್ಪಷ್ಟಪಡಿಸಿದೆ. ಸಿದ್ದರಾಮಯ್ಯ ವೀಕ್ ಆದಂತೆ ಕಾಣಿಸ್ತಾರಾ..? .ಸಿಎಂ ಗುಂಡುಕಲ್ಲು ಇದ್ದಂತೆ ಇದ್ದಾರೆ ನಾವೆಲ್ಲಾ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದೇವೆಗವರ್ನರ್ ಅವ್ರು ಬಲವನ್ನ ಕುಮಾರಸ್ವಾಮಿ, ನಿರಾಣಿ ವಿಚಾರದಲ್ಲೂ ತೋರಿಸಬೇಕು
ಮಹಾಲಕ್ಷ್ಮಿ ಕೊಲೆ ಕೇಸ್ ವಿಚಾರ ಒಬ್ಬ ವ್ಯಕ್ತಿ ಒರಿಸ್ಸಾದಲ್ಲಿ ಇದಾನೆ ಎಂದು ಗುರುತಿಸಲಾಗಿದೆಈಗಾಗಲೇ ನಮ್ಮ ಪೊಲೀಸರು ಅಲ್ಲಿಗೆ ಹೋಗಿದಾರೆಆತನ ಮೇಲೆ ಸಂದೇಹ ಇದೆ ಅವನ ವಿಚಾರಣೆ ಬಳಿಕ ಮಾಹಿತಿ ತಿಳಿಯಲಿದೆ ಎಂದರು.