ಬಹುಭಾಷಾ ನಟಿ ವರಲಕ್ಷ್ಮಿ ಶರತ್ಕುಮಾರ್ ಕಳೆದ ಮಾರ್ಚ್ ನಲ್ಲಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ವರಲಕ್ಷ್ಮಿ ಮದುವೆಯಾಗುತ್ತಿರುವ ಹುಡುಗ ನಿಕೋಲಯ್ ಸಚ್ದೇವ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಜನರು ನೆಗೆಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ಹಾಗಂತ ಅದಕ್ಕೆಲ್ಲ ವರಲಕ್ಷ್ಮಿ ಅವರು ಬೇಸರ ಮಾಡಿಕೊಂಡಿಲ್ಲ. ತಮ್ಮ ಭಾವಿ ಪತಿ ಸುಂದರವಾಗಿಯೇ ಇದ್ದಾರೆ ಎಂದು ನಟಿ ಪ್ರತಿಕ್ರಿಯಿಸಿದ್ದಾರೆ.
ಮುಂಬೈನಲ್ಲಿ ಗ್ಯಾಲರಿಸ್ಟ್ ಆಗಿರುವ ಹಾಗೂ ಪವರ್ ಲಿಫ್ಟರ್ ಆಗಿ ಗುರುತಿಸಿಕೊಂಡಿರುವ ನಿಕೋಲಯ್ ಸಚ್ ದೇವ್ ಜೊತೆ ವರಲಕ್ಷ್ಮಿ ಶರತ್ ಕುಮಾರ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ನಿಶ್ವಿತಾರ್ಥದ ಬಳಿಕ ಅವರು ಕೆಲವು ಫೋಟೋಗಳನ್ನು ಹಂಚಿಕೊಂಡರು. ಆ ಫೋಟೋದಲ್ಲಿ ನಿಕೋಲಯ್ ಸಚ್ದೇವ್ ಅವರನ್ನು ನೋಡಿ ಅನೇಕರು ಟ್ರೋಲ್ ಮಾಡಿದ್ದಾರೆ. ಆದರೆ ಅವುಗಳಿಗೆಲ್ಲ ವರಲಕ್ಷ್ಮೀ ಶರತ್ಕುಮಾರ್ ತಲೆ ಕೆಡಿಸಿಕೊಂಡಿಲ್ಲ.
ನಿಕೋಲಯ್ ಸಚ್ದೇವ್ ಅವರಿಗೆ ಈಗಾಗಲೇ ಮದುವೆ ಆಗಿ, ವಿಚ್ಛೇದನ ಕೂಡ ಆಗಿದೆ. ಇದೀಗ ವರಲಕ್ಷ್ಮಿ ಶರತ್ ಕುಮಾರ್ ಜೊತೆ ಎರಡನೇ ಮದುವೆ ಆಗಲು ಸಜ್ಜಾಗಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ವರಲಕ್ಷ್ಮಿ ಮಾತನಾಡಿದ್ದಾರೆ. ‘ನನ್ನ ತಂದೆ ಕೂಡ 2ನೇ ಮದುವೆ ಆದರು. ಅದರಲ್ಲಿ ಯಾವ ತಪ್ಪೂ ಇಲ್ಲ. ನಿಕ್ ಬಗ್ಗೆ ಜನರು ಮಾತಾಡುವುದನ್ನು ನಾನು ಕೇಳಿದ್ದೇನೆ. ನನ್ನ ಕಣ್ಣಿಗೆ ಅವರು ಹ್ಯಾಂಡ್ಸಮ್ ಆಗಿದ್ದಾರೆ. ನಮ್ಮ ಸಂಬಂಧದ ಬಗ್ಗೆ ನೆಗೆಟಿವ್ ಕಮೆಂಟ್ ಮಾಡುವವರ ಬಗ್ಗೆ ನಾನು ಕೇರ್ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.
‘ಬೇರೆಯವರಿಗೆ ನಾನು ಯಾಕೆ ಉತ್ತರ ಕೊಡಬೇಕು? ಮೊದಲಿನಿಂದಲೂ ನಾನು ಅದನ್ನು ಅವಾಯ್ಡ್ ಮಾಡಿಕೊಂಡು ಬಂದಿದ್ದೇನೆ. ನಿಕ್ ತಂದೆ-ತಾಯಿ ಒಂದು ಆರ್ಟ್ ಗ್ಯಾಲರಿ ನಡೆಸುತ್ತಾರೆ. ನಿಕ್ ಮತ್ತು ಅವರ ಪುತ್ರಿ ಪವರ್ ಲಿಫ್ಟಿಂಗ್ನಲ್ಲಿ ಬಂಗಾರದ ಪದಕ ಗೆದ್ದಿದ್ದಾರೆ. ಅವರ ಮಾಜಿ ಪತ್ನಿ ಜೊತೆಗೂ ನಾನು ಆತ್ಮೀಯವಾಗಿ ಇದ್ದೇನೆ. ಅವರು ಒಳ್ಳೆಯ ವ್ಯಕ್ತಿ. ಎಲ್ಲವೂ ಚೆನ್ನಾಗಿದೆ’ ಎಂದಿದ್ದಾರೆ ವರಲಕ್ಷ್ಮಿ.