ಕೋಲಾರ ಜಿಲ್ಲೆಯ ಮಾಲೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ವಿಚಾರ ಹೈಕಮಾಂಡ್ ಗೆ ಬಿಟ್ಟಿರುವ ವಿಚಾರ ಎಂದು ಮಾಲೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ ಹೂಡಿ ವಿಜಯ್ ಕುಮಾರ್ ಅವರು ಹೇಳಿದರು.
ಮಾಲೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರೊಂದಿಗೆ ಮಾತನಾಡಿದರು, ಹೈಕಮಾಂಡ್ ಏನು ತೀರ್ಮಾನ ಮಾಡುತ್ತೆ ಯಾರಿಗೆ ಟಿಕೇಟ್ ನೀಡಬೇಕು ಯಾರು ಕೆಲಸ ಮಾಡುತ್ತಿದ್ದಾರೆ ನಿಷ್ಟಾವಂತ ಕಾರ್ಯಕರ್ತರು ಯಾರು ಎಂದು ತೀರ್ಮಾನ ಮಾಡುತ್ತಾರೆ.
Video Player
00:00
00:53
ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸವನ್ನು ಹೈಕಮಾಂಡ್ ಮಾಡುತ್ತದೆ. ಮಾಲೂರು ವಿಧಾನ ಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯ ಬಿಜೆಪಿ ಬಾವುಟ ಹಾರಿಸಬೇಕು ಆ ಒಂದು ಕೆಲಸವನ್ನು ಮಾಡಬೇಕು ಹಾಗಾಗಿ ಎಲ್ಲರು ಒಟ್ಟಾಗಿ ಬಿಜೆಪಿ ಪಕ್ಷವನ್ನು ಗೆಲ್ಲಿಸುವ ಕೆಲಸವನ್ನು ಮಾಡುತ್ತೆವೆ ಎಂದು ತಿಳಿಸಿದರು.