ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 19 ಮಂದಿಯನ್ನು ಬಂಧಿಸಿರೋ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆಯ ವೇಳೆ ಸಾಷಕ್ಟು ಮಾಹಿತಿಗಳು ಹೊರ ಬೀಳುತ್ತಿದೆ. ಇದೇ ವೇಳೆ ಖಾಕಿ ಪಡೆ ಹಾಸ್ಯ ನಟ ಚಿಕ್ಕಣ್ಣ ಅವರಿಗೂ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿದ್ದು ಬಳಿಕ ವಿಚಾರಣೆ ನಡೆಸಿದ್ದಾರೆ.
ಸ್ಟೋನಿ ಬ್ರೂಕ್ ಗೆ ಹೋಗಿದ್ದ ಬಗ್ಗೆ ವಿಚಾರಣೆಯ ವೇಳೆ, ನನ್ನನ್ನು ದರ್ಶನ್ ಅವರು ಊಟಕ್ಕೆ ಕರೆದಿದ್ದರು. ಹೀಗಾಗಿ ಊಟಕ್ಕೆ ಹೋಗಿದ್ದೇನೆ. ಇದು ಬಿಟ್ಟು ಬೇರೆ ಯಾವುದರ ಬಗ್ಗೆಯೂ ನನಗೆ ಮಾಹಿತಿ ಇಲ್ಲ ಎಂದು ಚಿಕ್ಕಣ್ಣ ಪೊಲೀಸರ ಮುಂದೆ ಹೇಳಿದ್ದಾರೆ.
ಊಟ ಮಾಡಿಕೊಂಡು ನಾನು ಅಲ್ಲಿಂದ ಹೊರಟೆ. ಅಲ್ಲಿ ಏನಾಯ್ತು ಅನ್ನೋದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ರೇಣುಕಾಸ್ವಾಮಿ ಬಗ್ಗೆ ಯಾವುದೇ ವಿಚಾರದ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಟಿವಿಗಳಲ್ಲಿ ಬಂದ ಮೇಲೆಯೇ ನಂಗೆ ಈ ವಿಚಾರದ ಬಗ್ಗೆ ಗೊತ್ತಾಯ್ತು. ಹೀಗಾಗಿ ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.
ನಾನು ದರ್ಶನ್ ಅವರ ಸ್ನೇಹಿತ. ಹೀಗಾಗಿ ಸಾಮಾನ್ಯವಾಗಿ ಊಟಕ್ಕೆ ಸೇರುತ್ತಿರುತ್ತೇವೆ. ಅವತ್ತು ಕೂಡ ನನ್ನ ಊಟಕ್ಕೆ ಕರೆದಿದ್ದರು ನಾನು ಹೋಗಿದ್ದೆ ಅಷ್ಟೇ ಎಂದು ಚಿಕ್ಕಣ್ಣ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.