ಹುಬ್ಬಳ್ಳಿ: ಮುಜರಾಯಿ ವಕ್ಫ್ ಎರಡೂ ಒಂದೇ. ನಾವು ಅಲ್ಲಾ ಅಂತೀವಿ, ನೀವು ದೇವರು ಅಂತೀರಿ. ಅಲ್ಲಾ ನಮ್ಮ ನಂಬಿಕೆ, ಜೋಶಿ ಏನಾದರೂ ಹೇಳಲಿ. ನಾನು ಮೊದಲು ಹಿಂದೂಸ್ತಾನಿ. ಆಮೇಲೆ ಮುಸ್ಲಿಂ ಎಂದು ಹುಬ್ಬಳ್ಳಿಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಆಸ್ತಿಗೆ ನಾವು ನೋಟಿಸ್ ಕೊಟ್ಟಿದ್ದೇವೆ.
ಬೇರೆಯವರ ಆಸ್ತಿ ತೆಗೆದುಕೊಳ್ಳಲು ನಾವು ಯಾರು? ರೈತರು ಅನ್ನದಾತರು, ನಾವು ಅವರ ಆಸ್ತಿ ಮುಟ್ಟೋದಕ್ಕೆ ಸಾಧ್ಯನಾ? ವಕ್ಫ್ ಆಸ್ತಿ 1.12 ಲಕ್ಷ ಎಕರೆ ಇದೆ. ನಮ್ಮ ಬಳಿ ದಾಖಲೆ ಇದೆ. ಮುಜರಾಯಿ ವಕ್ಫ್ ಎರಡೂ ಒಂದೇ ಆಗಿದೆ. ನಾವು ಅಲ್ಲಾ ಅಂತೀವಿ, ನೀವು ದೇವರು ಅಂತೀರಿ ಎಂದು ಹೇಳಿದರು.
ಬಿಜೆಪಿಯವರು ಈ ತರಹ ರಾಜಕಾರಣ ಮಾಡಬಾರದು. ರಾಜಕೀಯಕ್ಕೆ ಬಂದು ಜಾತಿ ಮಾಡಿದ್ರೆ ಅವರು ನಾಲಾಯಕ್. ನಾವು ಜಾತಿ ನೋಡಿದ್ರೆ ನಿರ್ನಾಮ ಆಗುತ್ತೇವೆ. ಬಿಜೆಪಿಯವರ ಕಾಲದಲ್ಲಿ ನೋಟಿಸ್ ಕೊಟ್ಟಿದ್ದಾರೆ. ನಾನು ಅದಕ್ಕೆ ದಾಖಲೆ ಕೊಡುತ್ತೇನೆ. ಇದಕ್ಕೆ ಮಾನ್ಯ ಯತ್ನಾಳ್ ಏನು ಹೇಳುತ್ತಾರೆ? ಮುಜರಾಯಿ ಇಲಾಖೆ ಆಸ್ತಿ ಕೂಡಾ ಒತ್ತುವರಿ ಆಗಿದೆ. ಅದನ್ನು ಉಳಿಸೋಣ ನಡೀರಿ. ನನಗೆ ಹಿಂದೂ ಬ್ರದರ್ಸ್ ಮತ ಕೊಟ್ಟಿದ್ದಾರೆ. ನನಗೆ ಎಲ್ಲ ಸಮಾಜ ಒಂದೇ. ಎಲ್ಲ ಸಮಾಜವನ್ನು ಜೊತೆಗೆ ತೆಗೆದುಕೊಂಡು ಹೋಗುವವರೇ ರಾಜಕಾರಣಿ ಎಂದರು.