ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ನಾನು ಶ್ರಮಿಸುತ್ತೇನೆ ಎಂದು ಮಾಜಿ ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನನಗೆ ಪಕ್ಷದ ದೊಡ್ಡ ಬೆಂಬಲ ಇತ್ತು. ನನ್ನ ತಾಯಿ ಸಹ ಜಿಲ್ಲಾ ಪಂಚಾಯಿತಿಗೆ ಚುನಾವಣೆಗೆ ನಿಲ್ಲುವಾಗ ಕಾಂಗ್ರೆಸ್ನಿಂದ ನಿಲ್ಲುತ್ತೇನೆ ಎಂದಿದ್ದರು. ಅಂದು ಅವರನ್ನು ನಾನು ಮತ್ತು ನನ್ನ ಅಣ್ಣ ಸೇರಿ ಗೆಲ್ಲಿಸಿಕೊಂಡಿದ್ದೆವು. ನಾನು ಪಕ್ಷಕ್ಕೆ ಪ್ರಾಮಾಣಿಕವಾಗಿ ಇದ್ದೆ. 1997ರಲ್ಲಿ ನನಗೆ ಡಿಕೆಶಿ ಟಿಕೆಟ್ ಕೊಡಿಸಿದರು. ಅನಿವಾರ್ಯವಾಗಿ ಜಾತಿ ಲೆಕ್ಕಾಚಾರದ ಹಿನ್ನೆಲೆ 2013ರಲ್ಲಿ ನನ್ನನ್ನು ಸೋಲಿಸುವ ಕಾರ್ಯ ಆಯಿತು.
ಕಾಂಗ್ರೆಸ್ ರಾಜ್ಯ ನಾಯಕರು ನನ್ನನ್ನು ಮನೆ ಬಾಗಿಲಿಗೆ ಕರೆಸಿ ಟಿಕೆಟ್ ಕೊಡಿಸಿದ್ದರು. ಕಾಂಗ್ರೆಸ್ ಎಲ್ಲಾ ರಾಜ್ಯ ನಾಯಕರ ಪ್ರೀತಿ ನನ್ನ ಮೇಲಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಉತ್ತಮ ಕನಸುಗಾರರು. ಡಿಕೆಶಿ ಹಾಗೂ ಸಿದ್ದರಾಮಯ್ಯ ಕಾಂಗ್ರೆಸ್ ಕಟ್ಟಲು ಶ್ರಮಿಸಿದ್ದಾರೆ. ನಾನು ಕಳೆದುಕೊಂಡಿದ್ದ ಜಾಗಕ್ಕೆ ವಾಪಸ್ ಬಂದು ಹುಡುಕಿ ಗೌರವ ಪಡೆದಿದ್ದೇನೆ. ನನಗೆ ಆಶೀರ್ವಾದ ಮಾಡಿದರೆ ಇಡೀ ಚಿತ್ರದುರ್ಗ ಜಿಲ್ಲೆ ಜತೆ ಬಳ್ಳಾರಿ ಜಿಲ್ಲೆಯಲ್ಲೂ ಓಡಾಡಿ ಕೆಲಸ ಮಾಡುತ್ತೇನೆ. ಕೂಡ್ಲಗಿ ಕ್ಷೇತ್ರದ ಕಾರ್ಯಕರ್ತರಿಗೆ ಕರೆ ಕೊಟ್ಟ ಅವರು, ನಾನು ಅಲ್ಲಿ ಬಿಜೆಪಿ ಶಾಸಕನಾಗಿದ್ದೆ. ಅಲ್ಲಿ ಕೆಲಸ ಮಾಡಿದ್ದೆ. ಇದೀಗ ಅಲ್ಲಿ ಮತ್ತೆ ಕಾಂಗ್ರೆಸ್ ಅಲ್ಲಿಯೇ ಅಧಿಕಾರಕ್ಕೆ ಬರಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.