ಬೆಂಗಳೂರು ;- ಯಾರು ಬೇಕಾದರೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಪೇಕ್ಷೆ ಪಡಬಹುದು, ನಿರ್ಧಾರ ಹೈಕಮಾಂಡ್ನದ್ದು ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಪೇಕ್ಷೆ ಪಡೋದು ತಪ್ಪಲ್ಲ. ಆದರೆ ಯಾರು ಸೂಕ್ತ ಎಂದು ಪಕ್ಷ ತೀರ್ಮಾನ ಮಾಡುತ್ತದೆ. ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಪೇಕ್ಷೆ ಪಟ್ಟಿಲ್ಲ. ಸದ್ಯಕ್ಕೆ ನಾನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೇನೆ. ಮುಂದಿನದನ್ನು ಪಕ್ಷ ತೀರ್ಮಾನಿಸಲಿದೆ ಎಂದರು.
ಇನ್ನೂ ಜನರಿಗೆ ಆಶ್ವಾಸನೆ ಕೊಟ್ಟಿದ್ದು ಕಾಂಗ್ರೆಸ್ ಪಾರ್ಟಿ. ಕೇಂದ್ರ ಸರ್ಕಾರ ಈಗಾಗಲೇ 5 ಕೆಜಿ ಅಕ್ಕಿ ಉಚಿತವಾಗಿ ಕೊಡುತ್ತಿದೆ. ಕೇಂದ್ರ ಸರ್ಕಾರ ಕೊಡುವ 5 ಕೆಜಿ ಅಕ್ಕಿ ಬಿಟ್ಟು, 10 ಕೆಜಿ ಅಕ್ಕಿ ಕೊಡಬೇಕು. ಜುಲೈ 1 ರಿಂದಲೇ ಅಕ್ಕಿ ಕೊಡುತ್ತೇವೆ ಅಂತಾ ಹೇಳಿದ್ದರು. ಇನ್ನು ಐದು ದಿನಗಳಲ್ಲಿ ಭತ್ತ ಬೆಳೆದಾದರೂ ಕೊಡಲಿ. ಎಲ್ಲಿಂದಲಾದರೂ ತಂದು ಕೊಡಲಿ. ಯಾವ ವಿಶ್ವಾಸದ ಮೇಲೆ ಹೇಳಿದ್ದರೋ ಅದೇ ಮಾತಲ್ಲಿ ಕೊಡಲಿ ಎಂದು ಸಿ.ಟಿ. ರವಿ ಆಗ್ರಹಿಸಿದರು.