ಮುಂಬೈ: ವಿವಿಧ ಬಗೆಯ ಕಾಸ್ಟ್ಯೂಮ್ ನಿಂದಾಗಿಯೇ ಗಮನ ಸೆಳೆಯುತ್ತಿರುವ ಮಾಜಿ ಬಿಗ್ ಬಾಸ್ ಸ್ಪರ್ಧಿ, ನಟಿ ಉರ್ಫಿ ಜಾವೇದ್ ಇದೀಗ ನೆಟ್ಟಿಗರ ವಿರುದ್ಧ ಸಿಡಿದಿದ್ದಾರೆ.
ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, `ಏಕೆ ತುಂಡು ಉಡುಗೆಗಳನ್ನು ಧರಿಸುತ್ತೀರಿ?’ ಎಂಬ ನೆಟ್ಟಿಗರ ಪ್ರಶ್ನೆಗೆ ಖಡಕ್ಕಾಗಿ ಉತ್ತರ ನೀಡಿದ್ದಾರೆ.
ನನ್ನ ಬಳಿ ತೋರಿಸೋಕೆ ಏನೂ ಇಲ್ಲ. ಅಲ್ಲದೇ ನಾನೇನು ನನ್ನ ಖಾಸಗಿ ಭಾಗಗಳನ್ನ ಪ್ರದರ್ಶನ ಮಾಡ್ತಿಲ್ಲ. ಲೈಂಗಿಕ ಪ್ರಚೋದನೆಗೆ ಒಳಪಡಿಸುತ್ತಿಲ್ಲ. ನೀವೇಕೆ ವರಿ ಮಾಡ್ತೀರಿ? ಏನು ಕಾಣುತ್ತದೆಯೋ, ಅದಕ್ಕೆ ಸಂಬಂಧಿಸಿದ ವೀಡಿಯೋ, ಫೋಟೋಗಳು ಮಾರಾಟವಾಗುತ್ತಿದೆ ಅಷ್ಟೇ ಎಂದು ಹೇಳಿದ್ದಾರೆ.
ನನಗೆ ಫ್ಯಾಷನ್ ಬಗ್ಗೆ ಅಷ್ಟು ಜ್ಞಾನ ಇರಲಿಲ್ಲ. ಏನನ್ನ ಧರಿಸಬೇಕು ಅನ್ನೋದು ಮಾತ್ರ ಗೊತ್ತಿತ್ತು. ಆದ್ರೆ ನಾನು ತುಂಡು ಉಡುಗೆಗಳನ್ನ ಧರಿಸೋದಕ್ಕೆ ನನ್ನ ತಂದೆ ಅನುಮತಿಸುವುದಿಲ್ಲ ಎಂದು ಬಹಳ ಕಷ್ಟದಿಂದ ಮನೆಬಿಟ್ಟು ಬಂದಿದ್ದೇನೆ. ನಾನು ಯಾವಾಗಲೂ ಅತ್ಯುತ್ತಮವಾಗಿ ಕಾಣಲು ಬಯಸುತ್ತೇನೆ. ವಿಭಿನ್ನವಾಗಿ ಕಾಣಲು ಬಯಸುತ್ತೇನೆ. ಆದ್ದರಿಂದ ಪಾರ್ಟಿಗೆ ಹೋದಾಗ ಎಲ್ಲರೂ ನನ್ನತ್ತ ತಿರುಗಿ ನೋಡ್ತಾರೆ ಎಂದು ಊರ್ಫಿ ಹೇಳಿಕೊಂಡಿದ್ದಾರೆ.