ಮುಂಬೈ;- ನಾನು ರಾಹುಲ್ ಗಾಂಧಿ ಅವರನ್ನು ಮದುವೆ ಆಗಲು ಸಿದ್ಧಳಿದ್ದೇನೆ. ಆದರೆ ನನ್ನ ಷರತ್ತಿಗೆ ಒಪ್ಪಿಗೆ ನೀಡಬೇಕು ಎಂದು ಬಾಲಿವುಡ್ ನಟಿ ಶೆರ್ಲಿನ್ ಛೋಪ್ರಾ ಹೇಳಿದ್ದಾರೆ.
ತಮ್ಮ ಕುಲನಾಮ ಛೋಪ್ರಾ ಎಂದು ಹಾಕಲು ಸಮ್ಮತಿಸಬೇಕು ಎಂದು ಹೇಳಿದ್ದಾರೆ. ಮುಂಬೈನ ಬಾಂದ್ರಾಬ್ಯಾಂಡ್ಸ್ಟಾಂಡ್ ಬೀಚ್ಗೆ ಇತ್ತೀಚಿಗೆ ಶೆರ್ಲಿನ್ ಛೋಪ್ರ ಬಂದಿದ್ದಾಗ ಪತ್ರಕರ್ತರು ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮದುವೆಯಾಗಲು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಸಿದ್ಧಳಿದ್ದೇನೆ ಎಂದು ಹೇಳಿದ ಅವರು, ಛೋಪ್ರಾ ಎಂಬ ಕುಲನಾಮ ಮುಂದುವರಿಯಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.