ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಿ ಹನುಮಂತ ಹೊರ ಹೊಮ್ಮಿದ್ದಾರೆ. ಟ್ರೋಪಿ ಗೆದ್ದ ಸಂಭ್ರಮದಲ್ಲಿ ಖುಷಿ ಹಂಚಿಕೊಂಡ ಹನುಮಂತ ಇದೇ ವೇಳೆ ತಮ್ಮ ಸಂಗಾತಿಯ ಬಗ್ಗೆಯೂ ಮಾತನಾಡಿದ್ದಾರೆ. ನಾನು ಬಿಗ್ ಬಾಸ್ ಗೆದ್ದಿದ್ದು ನಮ್ ಹುಡುಗಿಗೆ ಖುಷಿಯಿದೆ ಎಂದಿದ್ದಾರೆ.
ಉತ್ತರಕರ್ನಾಟಕದ ಕಡೆ ನಾನು ಮೊದಲು ಬಿಗ್ ಬಾಸ್ ಗೆದ್ದಿದ್ದು ಅಂತ ತಿಳಿದು ಖುಷಿಯಾಯ್ತು. ನಾನು ಗೆದ್ದಿದ್ದಕ್ಕೆ ಊರಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸಿದ್ದಾರೆ ಎಂದು ಹನುಮಂತ ಖುಷಿ ಹಂಚಿಕೊಂಡಿದ್ದಾರೆ.
ನಾನು ಬಿಗ್ ಬಾಸ್ ಗೆದ್ದಿರೋದು ನೋಡಿ ನಮ್ ಹುಡುಗಿ ಬಹಳ ಖುಷಿಪಟ್ಟಳು. ನಮ್ ಹುಡುಗಿ ಅಳಾಕತ್ತಿದ್ಲು ನಾನೇ ಸಮಾಧಾನ ಮಾಡಿದೆ ಎಂದರು. ಆಗ ತ್ರಿವಿಕ್ರಮ್ ಮಾತನಾಡಿ ಕಾಸು ತಂದಿದ್ದೀನಿ, ಮದುವೆಯಾಗುತ್ತೀನಿ. ತಲೆ ಕೆಡಿಸಿಕೊಳ್ಳಬೇಡ ಅಂತ ಹನುಮಂತಗೆ ಕಾಲೆಳೆದಿದ್ದಾರೆ.
‘ಬಿಗ್ ಬಾಸ್’ ಶೋ ಗೆದ್ದ 50 ಲಕ್ಷ ರೂ.ನಲ್ಲಿ ಮನೆ ಕಟ್ಟಿಸುತ್ತೇನೆ. ಜೊತೆ ಮದುವೆ ಆಗುತ್ತೇನೆ. ನಮಗೆ ತಗಡಿನ ಮನೆಯಿದೆ ಅದನ್ನು ತೆಗೆಯಿಸಿ, ಸ್ಲ್ಯಾಬ್ ಮನೆ ಕಟ್ಟಿಸುತ್ತೇನೆ ಎಂದು ಹನುಮಂತ ಹೇಳಿದರು.