ರಾಜಾಜಿನಗರ ವಿಧಾನಸಭಾ ಕ್ಷೇತ್ರ: ದಯಾನಂದನಗರ ವಾರ್ಡ್ ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಬಹು ಉಪಯೋಗಿ ಕಟ್ಟಡ, ಶ್ರೀ ಮುತ್ತು ಪ್ರಧಾನಮಂತ್ರಿ ಜನ ಔಷಧಿ ಕೇಂದ್ರ ಹಾಗೂ ಮಾರಿಯಮ್ಮ ದೇವಸ್ಥಾನ ನವೀಕರಣ ಹಾಗೂ ಹೆಬ್ಬಾಗಿಲು ಉದ್ಘಾಟನೆ ಕಾರ್ಯಕ್ರಮ. ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು, ಮಂಡಲ ಬಿಜೆಪಿ ಅಧ್ಯಕ್ಷರಾದ ರಾಘವೇಂದ್ರರಾವ್, ಪತ್ರಕರ್ತರಾದ ಶ್ರೀಮತಿ ಸಾವಿತ್ರಿ ಸುರೇಶ್ ಕುಮಾರ್, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮುನಿರಾಜು, ಶ್ರೀಮತಿ ಶಕೀಲ ಮುನಿರಾಜುರವರು, ಉಪಮಹಾಪೌರರಾದ ರಂಗಣ್ಣರವರು, ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಸಂಜಯ್ ಕುಮಾರ್,
ಅಂತರಾಷ್ಟ್ರಿಯ ಬಾಡಿ ಬಿಲ್ಡರ್ ಪಾನಿಪುರಿ ಕಿಟ್ಟಿರವರು ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ದೀಪಾ ಬೆಳಗಿಸಿ ಉದ್ಘಾಟನೆ ನೇರವೆರಿಸಿದರು. ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ದಯಾನಂದನಗರ ವಾರ್ಡ್ ಆರ್ಥಿಕವಾಗಿ ಹಿಂದುಳಿದ ಮತ್ತು ಕೂಲಿಕಾರ್ಮಿಕರು ಹೆಚ್ಚಿನ ಜನಸಂಖ್ಯೆಯಲ್ಲಿ ವಾಸವಿದ್ದಾರೆ ಇಲ್ಲಿನ ನಿವಾಸಿಗಳಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ ನೀಡುವ ದಿನವಾಗಿದೆ .ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ರವರು ದೇಶದ ಅಮೂಲ್ಯರತ್ನ ರವರ ಸವಿಸ್ಮರಣೆಯಲ್ಲಿ 10ಯೋಜನೆಗಳು ದಯಾನಂದನಗರ ವಾರ್ಡ್ ನಲ್ಲಿ ಆನುಷ್ಠಾನಗೊಳಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದವರಿಗೆ ಮದುವೆ ಮಾಡಬೇಕೆಂದರೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ ಸಾಲ ಮಾಡಿ ಮದುವೆ ಮಾಡುವ ಪರಿಸ್ಥಿತಿ ಬರುತ್ತದೆ . ಅದ್ದರಿಂದ ಕಡಿಮೆ ವೆಚ್ಚದಲ್ಲಿ ಮದುವೆ ಮಾಡಲು ಅನುಕೂಲವಾಗಲಿ ಎಂದು ಸಮುದಾಯ ಭವನ ನಿರ್ಮಿಸಲಾಗಿದೆ.
ನನ್ನ ಮದುವೆ ಅತ್ಯಂತ ಕಡಿಮೆ ಎಂದರೆ 160ರೂಪಾಯಿ ವೆಚ್ಚದಲ್ಲಿ ಮದುವೆಯಾಗಿ ಚನ್ನಾಗಿದ್ದೇನೆ, ಸರಳತೆಯಿಂದ ಮದುವೆ ಮಾಡಿಕೊಳ್ಳಿ. ಬಿಜೆಪಿ ನುಡಿದಂತೆ ನಡೆಯುವ ಪಕ್ಷವಾಗಿದೆ, ಜನರಿಗೆ ಕೊಟ್ಟ ಭರವಸೆ ಈಡೇರಿಸಿದ ತೃಪ್ತಿ ಇದೆ. ಪ್ರಧಾನಮಂತ್ರಿ ನರೇಂದ್ರಮೋದಿರವರ ನೇತೃತ್ವದಲ್ಲಿ ಭಾರತ ದೇಶ ಭವ್ಯ ಭವಿಷ್ಯದತ್ತ ಸಾಗುತ್ತಿದೆ.ಐದು ವರ್ಷ ನಿಮ್ಮ ಸೇವೆ ಮಾಡಿದ್ದೇವೆ ಕೂಲಿ ಕೊಡುವ ಸಮಯ ಬಂದಿದೆ ಎಂದು ಹೇಳಿದರು.