ಬೆಂಗಳೂರು: ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಮುಂದಿನ ಚುನಾವಣೆಯಲ್ಲಿ ಮುಖ್ಯಂತ್ರಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡುವುದಾಗಿ ಘೋಷಣೆ ಮಾಡಿರುವುದು ಕೇಳಿ ನನಗೆ ಆಘಾತವಾಗಿದೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಸುದೀಪ್ ನೀಡಿರುವ ಹೇಳಿಕೆಯಿಂದ ನನಗೆ ಆಘಾತ ಹಾಗೂ ನೋವಾಗಿದೆ ಎಂದು ಪ್ರಕಾಶ್ ರಾಜ್ ಅಸಮಾಧಾನ ಹೊರ ಹಾಕಿದ್ದಾರೆ.
ಅದಕ್ಕೂ ಮುನ್ನ ಮಾತನಾಡಿದ್ದ ಪ್ರಕಾಶ್ ರಾಜ್, ಸುದೀಪ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಯನ್ನು ನಿರಾಕರಿಸಿದ್ದರು. ಸುದೀಪ್ ಚುನಾವಣೆಗೆ ಇಳಿಯುತ್ತಾರೆ ಎಂಬುದು ನಕಲಿ ಸುದ್ದಿಯಾಗಿದ್ದು, ನಮ್ಮ ಸುದೀಪ್ ತಮ್ಮನ್ನು ತಾವು ಎಂದಿಗೂ ಮಾರಿಕೊಳ್ಳುವವರಲ್ಲ ಎಂದಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಸುದೀಪ್ ಸಿಎಂ ಬೊಮ್ಮಾಯಿ ಜೊತೆ ಪತ್ರಿಕಾಗೋಷ್ಠಿ ನಡೆಸಿ ಬೊಮ್ಮಾಯಿ ಮಾಮಾ ಪರ ಪ್ರಚಾರ ಮಾಡುವುದಾಗಿ ಹೇಳಿದ್ದರು. ಇದೀಗ ಸುದೀಪ್ ನಡೆಯ ಕುರಿತಾಗಿ ಇದೀಗ ಪ್ರಕಾಶ್ ರಾಜ್ ಅಸಮಾಧಾನ ಹೊರ ಹಾಕಿದ್ದಾರೆ.