ಮೈಸೂರು : ಅವಕಾಶವಾದಿ ರಾಜಕಾರಣಿ ಎಂಬ ಜೆಡಿಎಸ್ ನಾಯಕರ ಆರೋಪಕ್ಕೆ ಮರಿತಿಬ್ಬೇಗೌಡ ತಿರುಗೇಟು ನೀಡಿದ್ದಾರೆ. ‘ ಪಕ್ಷ ಉಳಿಸಿಕೊಳ್ಳಲಿಕ್ಕೆ ಜೆಡಿಎಸ್ ನವರು ಮುಂದಾಗಿದ್ದಾರೆ. ತಮ್ಮ ಉಳಿವಿಗೋಸ್ಕರ ಪಕ್ಷವನ್ನ ಬಿಜೆಪಿಯವರ ಬಳಿ ಅಡವಿಟ್ಟಿದ್ದಾರೆ. ನಾನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪಕ್ಷ ಸೇರ್ಪಡೆಯಾಗಿಲ್ಲ.
ಪದವೀಧರ ಕ್ಷೇತ್ರದ ಚುನಾವಣೆ ವೇಳೆಯೇ ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದೆ’ ಎಂದರು.
‘ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತಾ ನಿರೀಕ್ಷೆ ಸಹಾ ಮಾಡಿರಲಿಲ್ಲ. ಕಾಂಗ್ರೆಸ್ ಪಕ್ಷ ಸೇರುವಾಗಲು ನಾನು ಯಾವುದೇ ಷರತ್ತು ಹಾಕಿಲ್ಲ. ಪಕ್ಷ ಏನೇ ಜವಾಬ್ದಾರಿ ನೀಡಿದರು ಮಾಡುತ್ತೇನೆ. ಇಬ್ಬರು ಮೂರ್ಖರು ಸೇರಿ ಓರ್ವ ಸಮರ್ಥ ಅಭ್ಯರ್ಥಿಯನ್ನು ಸೋಲಿಸುವುದೇ ಪ್ರಜಾಪ್ರಭುತ್ವ. ಈ ಮಾತನ್ನ ವಾಜಪೇಯಿಯವರು ಹೇಳಿದ್ದಾರೆ ಈ ಮಾತು ನನಗೂ ಅನ್ವಯವಾಗುತ್ತದೆ’ ಎಂದು ಮರಿತಿಬ್ಬೇಗೌಡ ಹೇಳಿಕೆ ನೀಡಿದ್ದಾರೆ.