ಬೆಂಗಳೂರು: ಈ ಬಾರಿ ನಡೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನಾನು ಸೋಲುತ್ತೇನೆಂಬ ನಿರೀಕ್ಷೆ ನನಗಿರಲಿಲ್ಲ, ಅದರೆ ನಾನು ಸೋತರೂ ನನ್ನ ಕಾರ್ಯಕರ್ತರು ಸೋಲಬಾರದು ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಅಧಿಕಾರದಲ್ಲಿದ್ದಾಗ ಸಾಕಷ್ಟು ಅಭಿವೃದ್ಧಿ ಹಾಗೂ ಕೆಲಸ ಕಾರ್ಯಗಳನ್ನು ಮಾಡಿದ್ದೇವೆ. ಅದನ್ನು ನೆನಪಿನಲ್ಲಿಟ್ಟುಕೊಂಡು ಮತ ಹಾಕುತ್ತಾರೆಂಬ ನಿರೀಕ್ಷೆಯಲ್ಲಿದ್ದೆ. ಆದರೆ ಅವರ ನಿರ್ಣಯವೇ ಬೇರೆ ರೀತಿ ಪರಿವರ್ತನೆಯಾಗಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರಕಾರದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 5 ಕೆಜಿ ಅಕ್ಕಿ ಜತೆಗೆ ಖರೀದಿ ಕಲ್ಯಾಣ ಯೋಜನೆ ಅಡಿ ಉಚಿತವಾಗಿ ಇನ್ನು 5 ಕೆಜಿ ಅಕ್ಕಿಯನ್ನು ಕೊಟ್ಟಿದ್ದೇವೆ. ಆದರೆ ಕಾಂಗ್ರೆಸ್ ಸರಕಾರವು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ ಮಾತನ್ನು ನಂಬಿದ್ದೀರಾ. ಆದರೆ ಸತತ ಎರಡೂವರೆ ವರ್ಷ ನಮ್ಮ ಸರಕಾರ 10 ಕೆಜಿ ಅಕ್ಕಿಯನ್ನು ಕೊಟ್ಟಿದೆ. ಅದರೆ ನೀವು ಯಾಕೆ ನಮ್ಮ ಮೇಲೆ ನಂಬಿಕೆ ಇಡಲಿಲ್ಲ ಎಂದು ಪ್ರಶ್ನಿಸಿದರು.
ಕೋವಿಡ್ ಸಮಯದಲ್ಲಿ ನನ್ನ ಕ್ಷೇತ್ರ ಜನತೆಗೆ ಯಾವುದೇ ರೀತಿ ತೊಂದರೆಯಾಗಬಾರದೆಂದು ಎರಡು ಬಾರಿ ಕೋವಿಡ್ ಬಂದಾಗಲೂ ಪ್ರತಿ ಮನೆಗೆ ದಿನಸಿ ಕಿಟ್ಗಳನ್ನು ಜಾತಿ, ಪಕ್ಷ ಭೇದವಿಲ್ಲದೆ ವಿತರಣೆ ಮಾಡಿದ್ದೇವೆ ಎಂದರು.