ಬಿ.ವೈ.ವಿಜಯೇಂದ್ರನಿಂದ ನನಗೇನೂ ಆಗಬೇಕಾಗಿಲ್ಲ ಎಂದು ಹೇಳುವ ಮೂಲಕ ಮತ್ತೆ ಬಸನಗೌಡ ಪಾಟೀಲ್ ಯತ್ನಾಳ್ ಅವರು vಸಿಡಿಮಿಡಿಗೊಂಡರು,
ಅಪ್ಪ-ಮಕ್ಕಳ ಜೊತೆಗೆ ನಾನು ರಾಜಿಯಾಗಬೇಕಾ? ನನಗೆ ರಾಜಿ ಅವಶ್ಯಕತೆ ಇಲ್ಲ. ಬಿ.ವೈ.ವಿಜಯೇಂದ್ರನಿಂದ ನನಗೇನೂ ಆಗಬೇಕಾಗಿಲ್ಲ. ವಿಜಯೇಂದ್ರ ಜತೆ ನನ್ನದು ಯಾವುದೇ ವ್ಯವಹಾರವಿಲ್ಲ. ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿ ಆಗಬೇಕಷ್ಟೇ. ವಿಜಯೇಂದ್ರ ಅವರ ಉದ್ದೇಶ ಏನು. ವಿ.ಸೋಮಣ್ಣ ಅವರ ಮೇಲೆ ಏನು ಮಾಡಿದ್ದಾರೆ? ವಿಜಯಪುರದಲ್ಲಿ ಏನ್ ಮಾಡಿದ್ದಾರೆ ಎಲ್ಲಾ ಗೊತ್ತು. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸೋಲಿಸುವುದಕ್ಕೆ ಏನು ಮಾಡಿದ್ದಾರೆ. ಇವರ ಎಲ್ಲಾ ಇತಿಹಾಸ ಗೊತ್ತಿದೆ. ಲೋಕಸಭೆ ಚುನಾವಣೆ ಬಳಿಕ ಹೇಳುತ್ತೇನೆ ಎಂದು ಮತ್ತೆ ವಿಜಯೇಂದ್ರ ವಿರುದ್ಧ ಅಟ್ಯಾಕ್ ಮಾಡಿದ್ದಾರೆ.
ಹೆದರಿಕೊಂಡು ಓಡಿ ಹೋಗಿ ರಾಜಿ ಆದ ಅನ್ನಬೇಡಿ. ವಿಜಯೇಂದ್ರಗೂ ಅಂಜಲ್ಲ ಅವರ ಅಪ್ಪನಿಗೂ ಅಂಜಲ್ಲ ಎಂದು ಹೇಳಿದ್ದಾರೆ. ಚುನಾವಣೆಯಲ್ಲಿ ನಾವೇನು ಬೇರೆಯವರಿಗೆ ಓಟ್ ಹಾಕು ಅಂತ ಹೇಳಲ್ಲ. ಅವರನ್ನು ಕೇಳಿ ಯಾರ್ಯಾರಿಗೆ ಓಟ್ ಹಾಕಬೇಡಿ ಅಂತ ಹೇಳಿದ್ದರು. ಸೋಮಣ್ಣನ ಎರಡು ಕಡೆ ನಿಲ್ಲಿಸಿ ಕೆಡವಿದರು. ನನ್ನನ್ನು, ಬೊಮ್ಮಾಯಿಯನ್ನು ಸೋಲಿಸುವುದಕ್ಕೆ ಎಷ್ಟೆಷ್ಟು ದುಡ್ಡು ಕಳಿಸಿದರು ಗೊತ್ತಿದೆ ಎಂದು ಆರೋಪಿಸಿದರು.
