ಬಾಲಿವುಡ್ ಬ್ಯೂಟಿ ಮಲೈಕಾ ಅರೋರಾ ಸದಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ ತಂದೆಯನ್ನು ಕಳೆದುಕೊಂಡಿರೋ ಮಲೈಕಾ ಇದೀಗ ತಮ್ಮ ಬ್ರೇಕ್ ಅಪ್ ಬಗ್ಗೆ ಮಾತನಾಡಿದ್ದಾರೆ. ಅರ್ಜುನ್ ಕಪೂರ್ ಜೊತೆಗಿನ ಬ್ರೇಕಪ್ ವಿಚಾರವಾಗಿ ಭಾರೀ ಟೀಕೆ, ಟ್ರೋಲ್ ಮಾಡುವವರಿಗೆ ನಟಿ ತಿರುಗೇಟು ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಲೈಕಾ ಮೊದಲ ಬಾರಿಗೆ ಅರ್ಜುನ್ ಕಪೂರ್ ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದಿದ್ದಾರೆ. ನಾನು ತೆಗೆದುಕೊಂಡಿರುವ ನಿರ್ಧಾರಕ್ಕೆ ಯಾವುದೇ ವಿಷಾದವಿಲ್ಲದೇ ಬದುಕುತ್ತೇನೆ ಹೊರತು ಕೊರಗುವುದಿಲ್ಲ. ಇಂದು ಏನಾದರೂ ಕಲಿತಿದ್ದೀನಿ ಎಂದಾದರೆ ಅದಕ್ಕೆ ಜೀವನದುದ್ದಕ್ಕೂ ನಾನು ಪಡೆದ ಅನುಭವಗಳೇ ಕಾರಣ. ಇದೆಲ್ಲದರಿಂದಲೇ ಇಂದು ಒಂದೊಳ್ಳೆಯ ಜೀವನವನ್ನು ರೂಪಿಸಿಕೊಂಡಿದ್ದೇನೆ ಎಂದಿದ್ದಾರೆ.
ನಾನು ನೋವಿನಿಂದ ಹೊರಬರಲು ಕರೀನಾ ಕಪೂರ್ ಖಾನ್, ಕರೀಷ್ಮಾ ಕಪೂರ್ ಮತ್ತು ಸಹೋದರಿ ಅಮೃತಾ ಅರೋರಾ ಅವರೆಲ್ಲರ ಪಾತ್ರ ಸಾಕಷ್ಟಿದೆ. ಅವರಿಲ್ಲದೆ ನಾನಿಲ್ಲ. ಇಲ್ಲಿಯವರೆಗೂ ನಾನು ಕೈಗೊಂಡ ನಿರ್ಧಾರ ನನ್ನ ಜೀವನವನ್ನು ಉತ್ತಮವಾಗಿ ರೂಪಿಸಿದೆ. ಈ ವಿಷಯದಲ್ಲಿ ನನಗೆ ಯಾವುದೇ ಪಶ್ಚಾತ್ತಾಪ ಇಲ್ಲ ಎಂದು ಟೀಕಿಸುವವರಿಗೆ ಖಡಕ್ ಆಗಿ ಉತ್ತರಿಸಿದ್ದಾರೆ ಮಲೈಕಾ.