PrajatvkannadaPrajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

Shilpa Shetty: ಸತ್ಯವತಿಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟ ನಟಿ ಶಿಲ್ಪಾ ಶೆಟ್ಟಿ

March 22, 2023

ತಮಿಳುನಾಡಿನ ಪಟಾಕಿ ಗೋದಾಮಿನಲ್ಲಿ ಭಾರಿ ಸ್ಫೋಟ: 7 ನಿಧನ

March 22, 2023

ಕೋವಿಡ್ ಪ್ರಕರಣ ಸಂಖೆ ಹೆಚ್ಚಳ: ಮೋದಿಯಿಂದ ಉನ್ನತ ಮಟ್ಟದ ಸಭೆ

March 22, 2023
Facebook Twitter Instagram
Thursday, March 23
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
PrajatvkannadaPrajatvkannada
Home » V.Somanna: ನಾನು ಕಾಂಗ್ರೆಸ್‌ ಸೇರ್ತಿನಿ ಅಂತ ಎಲ್ಲಿಯೂ ಹೇಳಿಲ್ಲ ಎಂದು ಕಣ್ಣೀರಿಟ್ಟ ಸಚಿವ ವಿ. ಸೋಮಣ್ಣ
ಬೆಂಗಳೂರು Prajatv KannadaBy Prajatv KannadaMarch 14, 2023

V.Somanna: ನಾನು ಕಾಂಗ್ರೆಸ್‌ ಸೇರ್ತಿನಿ ಅಂತ ಎಲ್ಲಿಯೂ ಹೇಳಿಲ್ಲ ಎಂದು ಕಣ್ಣೀರಿಟ್ಟ ಸಚಿವ ವಿ. ಸೋಮಣ್ಣ

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ಬೆಂಗಳೂರು: ಸಚಿವ ವಿ. ಸೋಮಣ್ಣ ತನ್ನ ರಾಜಕೀಯ ಜೀವನವನ್ನ ನೆನೆದು ಕಣ್ಣೀರಿಟ್ಟರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಜೊತೆ ಇದ್ದ ಫೋಟೋ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಬೆಂಗಳೂರಿಗೆ ಬಂದು 56 ವರ್ಷ ಆಗಿದೆ. ನನ್ನ ಜೀವನವನ್ನ ನಾನೇ ಕಟ್ಟಿಕೊಂಡಿದ್ದೇನೆ, ಇನ್ನೊಬ್ಬರನ್ನ ತೇಜೋವಧೆ ಮಾಡುವುದು ಒಳ್ಳೆಯದಲ್ಲ, ಸಂಜೆ ಕಾಲೇಜಿನಲ್ಲಿ ಓದಿದ್ದೇನೆ, ಕಸ್ತೂರಿ ಮಾತ್ರೆ ಮಾರಿದ್ದೇನೆ. ಆರು- ಎಂಟು ಅಡಿ ರೂಮಿನಲ್ಲಿ ಜೀವನ ಮಾಡಿವನು. ಎಂಟು ವರ್ಷ ವಠಾರದಲ್ಲಿ ಇದ್ದವನು.

ಕರ್ತವ್ಯವನ್ನೇ ದೇವರು ಎಂದು ನಂಬಿದವನು ನಾನು, ಸ್ವಾಭಿಮಾನಕ್ಕೆ ಧಕ್ಕೆ ಆದಾಗ ನಾನು ಯಾರಿಗೂ ಬಗ್ಗಿದವನು ಅಲ್ಲ, ಜಗ್ಗಿದವು ಅಲ್ಲ. ನನ್ನ ಜೀವನ ನಾನೇ ರೂಪಿಸಿಕೊಂಡವನು ನಾನು. ಕಳೆದ 8-10 ದಿನಗಳಿಂದ ಏನು ಎಲ್ಲರೂ ಮಜಾ ತಗೋತಾ ಇದ್ದೀರಲ್ಲ, ಇದು ಒಳ್ಳೆಯದಲ್ಲ, ನಾನು ಪಿಗ್ನಿ ಕಲೆಕ್ಟ್‌ ಮಾಡಿದ್ದೇನೆ, ನಾನು ಅಂದು ಹಿಂತಿರುಗಿ ನೋಡಿದವನು ಅಲ್ಲ. ನಾನು ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರ ಸ್ವಾಮಿಗಳು, ಸಿದ್ದಗಂಗೆಯ ಶ್ರೀ ಶಿವಕುಮಾರ್‌ ಸ್ವಾಮೀಜಿಗಳು ನನಗೆ ಮಾರ್ಗದರ್ಶನದಲ್ಲಿ ಬೆಳೆದವನು ನಾನು, ಒಬ್ಬರನ್ನ ಅನವಶ್ಯಕವಾಗಿ ತೋಜೋವಧೆ ಮಾಡಬೇಡಿ ಎಂದು ಕಣ್ಣೀರಿಟ್ಟರು.

ನನ್ನ ಕರ್ತವ್ಯವನ್ನ ನಾನು ಮರೆತಿಲ್ಲ, ಎಲ್ಲಾ ಬೈ ಎಲೆಕ್ಷನ್‌ ಅನ್ನ ಗೆದ್ದಿದ್ದೇವೆ. ಚನ್ನಪಟ್ಟಣ, ಕಡೂರು, ದೇವದುರ್ಗ, ಬಸವ ಕಲ್ಯಾಣ, ಹೊಸಪೇಟೆ, ಕೊಪ್ಪಳ, ಸಿಂಧಗಿ, ಚಿಂಚೋಳಿವರೆಗೂ ಎಲ್ಲಾ ಬೈ ಎಲೆಕ್ಷನ್‌ ನನಗೆ ಕೊಟ್ಟರು. ನಾನು ಪಕ್ಷಕ್ಕೆ ಒಬ್ಬ ನಿಷ್ಠನಾಗಿ ನನ್ನದೇ ಆದಂತಹ ದುಡಿಮೆಯನ್ನ ಮಾಡಿಕೊಂಡು ಕೆಲಸ ಮಾಡಿದ್ದೇನೆ. ನಾನು ಯಾವ ಪಕ್ಷದಲ್ಲಿ ಇರುತ್ತೇನೋ ಆ ಪಕ್ಷವನ್ನ ತಾಯಿಯಾಗಿ ಸ್ವೀಕಾರ ಮಾಡಿದ್ದೇನೆ.

ನನಗೆ ಡಬ್ಬಲ್‌ ಸ್ಟಾಂಡರ್ಡ್‌ ಗೊತ್ತಿಲ್ಲ, ಇನ್ನೊಬ್ಬರ ಆಗೆ ಇಲ್ಲೊಂದು ಹೇಳೋದು, ಅಲ್ಲೊಂದು ಹೇಳೋದು ಗೊತ್ತಿಲ್ಲ. ನನಗೆ ಈ ಇಬ್ಬರು ಗುರುಗಳು ಸಂಸ್ಕಾರ ಕೊಟ್ಟಿದ್ದರಿಂದ, ನಾನು ಯಾವುದೇ ಕೆಲಸ ಮಾಡಿದರು ನನಗೆ ಅವರು ಹತ್ತಾರು ಬಾರಿ ನೆನಪಿಗೆ ಬರುತ್ತಾರೆ. ಹಾಗಾಗಿ ನಾನು ಕಠಿಣವಾಗಿ ಮಾತನಾಡುತ್ತೇನೆ ಎಂದು ತುಪ್ಪ ಸುರಿದು ನನ್ನನ್ನ ಖಳನಾಯಕನಾಗಿ ಮಾಡಿದ್ದೀರಿ, ನಾನು ಎಂದಾದರು ಕೂಡಾ ಬಿಜೆಪಿ ಬಿಡುತ್ತೇನೆ ಎಂದು ಹೇಳಿದ್ದೇನಾ ಎಂದು ಪ್ರಶ್ನೆ ಮಾಧ್ಯಮದವರಿಗೆ ಪ್ರಶ್ನೆ ಮಾಡಿದರು.

ಅದ್ಯಾವುದೋ ಶಿವಕುಮಾರ್‌ ಜೊತೆಗಿನ ಫೋಟೋ ತೋರಿಸುತ್ತೀರಾ, ನಾನೊಬ್ಬ ಮಂತ್ರಿ ರೀ, ಯಾವುದೋ ಕಾಲದಲ್ಲಿ ಅವನ ಜೊತೆಯಲ್ಲಿ ಫ್ಲೈಟ್‌ನಲ್ಲಿ ಬಂದಿದ್ದೇ, ಶಿವಕುಮಾರ್‌ ನನ್ನ ಊರಿನ ಐದಾರು ಕಿಲೋ ಮೀಟರ್‌ ದೂರದಲ್ಲಿ ಇರುವ ಹಳ್ಳಿಯಲ್ಲಿರುವವರು, ಸಿದ್ದರಾಮಯ್ಯ ನಾನು ಒಟ್ಟಿಗೆ ಮಂತ್ರಿಯಾಗಿ ಜೊತೆಯಲ್ಲಿ ಕೆಲಸ ಮಾಡಿದವರು. ಈ ರೀತಿ ನೀವು ಮಾಧ್ಯಮದವರಾದರೆ ಗೌರವಸ್ಥರಾದವರು ಹೇಗಪ್ಪ ಬದುಕಬೇಕು ಎಂದು ನೀವೇ ತೀರ್ಮಾನ ಮಾಡಿ ಎಂದು ಪ್ರಶ್ನೆ ಮಾಡಿದರು. ಫೋಟೋ ಬಗ್ಗೆ ನನಗೆ ಸ್ಪಷ್ಟತೆ ಕೊಡುವ ಅವಶ್ಯಕತೆ ಎನಿದೆ. ಇದನ್ನ ಸೃಷ್ಟಿ ಮಾಡುತ್ತಿರುವ ಪುಣ್ಯಾತ್ಮ ಯಾರೆಂದು ನಿಮಗೆ ಗೊತ್ತಿದೆ. ಆ ಪುಣ್ಯಾತ್ಮ ಮಾಡುವುದಕ್ಕೆ ನಾನ್ಯಾಕೆ ಬರಬೇಕು ಎಂದು ಪ್ರಶ್ನೆ ಮಾಡಿದರು.

 

Share. Facebook Twitter WhatsApp Pinterest LinkedIn Tumblr Telegram Email

Related Posts

HDK: ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟಕ್ಕೆ H.D.ಕುಮಾರಸ್ವಾಮಿ ವ್ಯಂಗ್ಯ!

March 22, 2023

ಚುನಾವಣಾ ಗಿಮಿಕ್: ಬಿಜೆಪಿ ಶಾಸಕನಿಂದ ಮುಸ್ಲಿಂ ಟೋಪಿ ಧರಿಸಿ ಮಸೀದಿ ನಿರ್ಮಾಣಕ್ಕೆ ಭೂಮಿಪೂಜೆ

March 22, 2023

ಶಾರ್ಟ್ ಸರ್ಕ್ಯೂಟ್ : ಲಾರಿಗೆ ಕೆಇಬಿ ಲೈನ್ ತಗಲಿ ಡ್ರೈವರ್ ಸಾವು

March 22, 2023

ಅಪಾರ್ಟ್ ಮೆಂಟ್ ನಲ್ಲಿ ವಾಸಿಸುವ ಜನರೇ ಹುಷಾರ್: ಶೂ ಕಳ್ಳರ ಹಾವಳಿ- cctv Footage

March 22, 2023

Liver Transplant: ನಗರ ಪ್ರದೇಶದಲ್ಲಿ ವಾಸಿಸುವ ಜನರು ನೋಡಲೇಬೇಕಾದ ಸ್ಟೋರಿ : ಇತ್ತ ನೋಡಿ

March 22, 2023

Ugadi price Shock: ಯುಗಾದಿ ಹಬ್ಬಕ್ಕೆ ಜನರಿಗೆ ಶಾಕ್ – ಹೂವು, ಹಣ್ಣಿನ ಬೆಲೆ ದುಪ್ಪಟ್ಟು….

March 22, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.