ದಾವಣಗೆರೆ: ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದಲ್ಲಿ ಶಿಸ್ತು ಸಮಿತಿ ಅಧ್ಯಕ್ಷರು ಯಾರೆಂದೇ ಗೊತ್ತಿಲ್ಲ. ಅಲ್ಲದೆ, ನಾನು ಯಾವುದೇ ರೀತಿಯಲ್ಲೂ ತಪ್ಪು ಮಾತನಾಡಿಲ್ಲ. ನಮ್ಮೆಲ್ಲ ಕಾರ್ಯಕರ್ತರು ಮಾತನಾಡುತ್ತಿರುವುದನ್ನೇ ಹೇಳಿದ್ದೇನೆ ಅಷ್ಟೆಎಂದರು. ನನ್ನ ಮಾತುಗಳನ್ನು ಕೇಳಿ, ನಾನು ಹೇಳಿದ್ದನ್ನು ನೋಡಿ ಪಕ್ಷದ ನಾಯಕರೇ ನನಗೆ ಕರೆ ಮಾಡಿ, ನೀವು ಮಾತನಾಡಿದ್ದು ಸರಿಯಾಗಿದೆ ಎನ್ನುತ್ತಿದ್ದಾರೆ ಎಂದು ಹೇಳಿದ(Renukacharya) ರೇಣುಕಾಚಾರ್ಯ,
ನಮ್ಮ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ (yadiyurappa)ವಿರುದ್ಧ ಮಾತನಾಡಿದವರಿಗೆ ಮಾತ್ರ ಪಕ್ಷದಲ್ಲಿ ರಾಜ ಮರ್ಯಾದೆನಾ ಎಂದು ಮುಖಂಡರ ವಿರುದ್ಧ ಅಸಮಾಧಾನ ಹೊರಹಾಕಿದರು. ಪಕ್ಷದಲ್ಲಿ 11 ಮಂದಿಗೆ ನೋಟಿಸ್ ಕೊಟ್ಟಿರುವುದಾಗಿ ಹೇಳಿದ್ದಾರೆ. ಆದರೆ, ನನಗೆ ನೀಡಿದ್ದ ನೋಟಿಸ್ವೊಂದನ್ನು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಾರೆ. ನಾನು ಯಾವುದೇ ಕಾರಣಕ್ಕೂ ಇಂಥ ನೋಟಿಸ್ಗೆ ಉತ್ತರ ಕೊಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಸೇರಲ್ಲ: ಹಿರಿಯರಾದ ಕಾಂಗ್ರೆಸ್ ನಾಯಕ, ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರ ಜೊತೆಗೆ ರಾಜಕೀಯ ಹೊರತುಪಡಿಸಿ ಉತ್ತಮ ಒಡನಾಟವಿದೆ. ನಾನು ಈಗಲೂ ನಮ್ಮ ಪಕ್ಷದಲ್ಲೇ ಇದ್ದೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ. ನಮ್ಮ ಪಕ್ಷವೇ ನನಗೆ ಎಲ್ಲವನ್ನೂ ಕೊಟ್ಟಿದೆ ಎಂದು ರೇಣುಕಾಚಾರ್ಯ ಇದೇ ವೇಳೆ ಸ್ಪಷ್ಟಪಡಿಸಿದರು.