ಮಲಯಾಳಂ ಸಿನಿಮಾ ರಂಗದ ಖ್ಯಾತ ನಟಿ ನವ್ಯಾ ನಾಯರ್ ಬೇಸರ ಹೊರ ಹಾಕಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಆಗಮಿಸಿದ್ದ ನಟಿ ಫ್ಯಾಮಿಲಿ ಬಗ್ಗೆ ತಪ್ಪಾದ ಮಾಹಿತಿ ನೀಡಿದ್ದ ಆಯೋಜಕರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ನಿಮಗೆ ಒಂದು ವಿಚಾರವನ್ನು ಹೇಳಲು ಬಯಸುತ್ತೇನೆ. ನಾನಿಲ್ಲಿರುವ ಬುಕ್ಲೆಟ್ ಅನ್ನು ನೋಡಿದೆ. ಅದರಲ್ಲಿ ನನಗೆ ಇಬ್ಬರೂ ಮಕ್ಕಳಿದ್ದಾರೆ ಎಂದು ಬರೆಯಲಾಗಿದೆ. ಈ ಬಗ್ಗೆ ನನ್ನ ಕುಟುಂಬ ಚಿಂತಿಸುವುದಿಲ್ಲವೇ ಎಂದು ನಟಿ ಆಯೋಜಕರ ಮಾಡಿರುವ ಯಡವಟ್ಟಿನ ಬಗ್ಗೆ ಖಡಕ್ ಆಗಿ ಪ್ರಶ್ನೆ ಮಾಡಿದ್ದಾರೆ.
ನನಗಿರುವುದು ಒಬ್ಬನೇ ಮಗ. ನೀವು ಯಮಿಕಾ ಎಂದು ಮಗಳಿದ್ದಾಳೆ ಎಂದು ಬರೆದಿದ್ದೀರಿ. ಜನರು ನನ್ನ ಬಗ್ಗೆ ತಪ್ಪು ತಿಳಿದುಕೊಳ್ಳುವುದಿಲ್ಲವೇ. ವಿಕಿಪಿಡಿಯಾದಲ್ಲಿ ಮಾಹಿತಿ ಲಭ್ಯವಿದೆ. ಈ ರೀತಿ ಬರೆಯುವಾಗ ವಿಚಾರ ಅರಿತು ಬರೆಯಬೇಕು ಎಂದು ಆಯೋಜಕರನ್ನು ನಟಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅದಷ್ಟೇ ಅಲ್ಲ, ತಾವು ನಟಿಸದೇ ಇರುವ ಸಿನಿಮಾಗಳ ಹೆಸರು ಹಾಕಿರೋದ್ದಕ್ಕೆ ನಟಿ ಬೇಸರ ವ್ಯಕ್ತಪಡಿಸಿದ್ದಾರೆ.