ದಾವಣಗೆರೆ: ದಾವಣಗೆರೆಯಲ್ಲಿ ಭಗವಾಧ್ವಜ ತೆಗೆದು ಹಸಿರು ಧ್ವಜ ಹಾರಿಸಿದ್ದಾರೆ. ಸತೀಶ್ ಪೂಜಾರಿ ಬಂಧಿಸಿ ವಂಶವೃಕ್ಷ ಕೇಳ್ತಾರೆ. ಹಿಂದುಗಳ ಮೇಲೆ ಯಾವಾಗಲೂ ದೌರ್ಜನ್ಯ ಮಾಡ್ತಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು. ಇತ್ತೀಚಿಗೆ ಗಲಾಟೆ ಹಿಂದಿಗಿಂತ ಹೆಚ್ಚಾಗಿ ನಡೆಯುತ್ತಿದೆ.
ಎಲ್ಲ ಭಾಗಗಳಲ್ಲಿ ಗಲಾಟೆ ಹೆಚ್ಚಾಗಿ ಆಗ್ತಾ ಇದೆ. ನಾಗಮಂಗಲದಲ್ಲಿ ಪ್ರಚೋದನೆ ಬಂದಿದ್ದು ಮುಸ್ಲಿಮರಿಂದ. ಕೇಸ್ A1 ರಿಂದ 32 ವರೆಗೂ ಹಿಂದೂಗಳ ಮೇಲೆ ಕೇಸ್ ಮಾಡಿದ್ದಾರೆ.
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ನೈತಿಕ ಸ್ಥೈರ್ಯ ಕೊಡಲು ಈ ರೀತಿ ಮಾಡಿದ್ದಾರೆ. ಸಿದ್ದರಾಮಯ್ಯ ನಿಷೇಧಿತ ಸಂಘಟನೆಯವರ ಮೇಲಿನ ಕೇಸ್ ವಾಪಸ್ ಪಡೆದ ನಂತರ ಹಿಂದೂಗಳ ಹತ್ಯೆ ನಡೆಯಿತು. ಈದ್ ಮೆರವಣಿಗೆ ಮಾಡಿದ್ರೆ, ರಸ್ತೆಯಲ್ಲಿ ನಮಾಜ್ ಮಾಡಿದ್ರೆ ಮೈಕ್ ಹಚ್ಚಲು ಯಾವುದೇ ಅನುಮತಿ ಇಲ್ಲ. ಆದರೆ ಹಿಂದೂಗಳ ಹಬ್ಬ ಮಾಡೋದಕ್ಕೆ ಅನುಮತಿ ಬೇಕು ಇದ್ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ಯಾದಗಿರಿಯ ಶಹಾಪುರಕ್ಕೆ ಗಣೇಶ ಮೆರವಣಿಗೆಗೆ ಹೋಗಿದ್ದೆ. ಅಣ್ವಸ್ತ್ರ ಮಾಡಿರೋ ಹಿಂದೂಗಳಿಗೆ ಪೆಟ್ರೋಲ್ ಬಾಂಬ್ ಮಾಡೋಕೆ ಬರಲ್ವಾ ಅಂದೆ. ಅದಕ್ಕೆ ನನ್ನ ಮೇಲೆ ಪ್ರಕರಣ ದಾಖಲಿಸಿ ನಮ್ಮ ಮನೆಗೆ ಪೊಲೀಸರು ಬಂದಿದ್ದಾರೆ. ಈ ಎಲ್ಲ ಘಟನೆ ನೋಡ್ರಿದೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ತಾಲಿಬಾನ್ ಸರ್ಕಾರ ಇದೆ ಅನ್ಸುತ್ತೆ. ದಾವಣಗೆರೆಯಲ್ಲಿ ಎರಡು ಎಫ್ ಐಆರ್ ಮುಸ್ಲಿಂ ಮೇಲೆ ಹಾಕಿದ್ದಾರೆ. ಹಿಂದೂಗಳ ಮೇಲೆ ಮೂರು FIR ಹಾಕಿದ್ದಾರೆ ಈ ರೀತಿ ಯಾಕೆ ಮಾಡ್ತೀರಾ? ಎಂದು ವಾಗ್ದಾಳಿ ನಡೆಸಿದರು.