ಬಾಲಿವುಡ್ ಬ್ಯೂಟಿ ನಟಿ ಆಲಿಯಾ ಭಟ್ ಸದ್ಯ ಸಿನಿಮಾಗಳ ಜೊತೆಗೆ ಮುದ್ದಾದ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ ಮುದ್ದು ಮಗಳು ರಹಾ ಜೊತೆ ಕಾಣಿಸಿಕೊಳ್ಳುವ ನಟಿ ಆಲಿಯಾ ಭಟ್ ಇದೀಗ ತಾವು ಮಾಡಿರೋ ತಪ್ಪನ್ನು ಮಗಳಿಗೆ ಮಾಡೋಕೆ ಬಿಡಲ್ಲ ಎಂದಿದ್ದಾರೆ.
‘ನಾನು ಹಾಲಿವುಡ್ನ ಹಾರ್ಟ್ ಆಫ ಸ್ಟೋನ್ ಸಿನಿಮಾ ಶೂಟಿಂಗ್ಗಾಗಿ ಲಂಡನ್ನಲ್ಲಿ ಇದ್ದೆ. ನಾನು ಮೂರು ದಿನ ನಿದ್ದೆ ಮಾಡಿರಲಿಲ್ಲ. ನಾನು ಒಳ್ಳೆಯ ಮಗಳಲ್ಲ ಎನ್ನುವ ಭಾವನೆ ನನ್ನನ್ನು ಕಾಡುತ್ತಿತ್ತು’ ಎಂದಿದ್ದಾರೆ ಆಲಿಯಾ ಭಟ್. ಮಗಳನ್ನು 20 ವರ್ಷದವರೆಗೆ ಮನೆಯಿಂದ ಹೊರಗೆ ಹೋಗಿ ಬೇರೆ ಕಡೆ ಸೆಟಲ್ ಆಗೋಕೆ ಬಿಡಲ್ಲ ಎಂಬರ್ಥದಲ್ಲೂ ಆಲಿಯಾ ಮಾತನಾಡಿದ್ದಾರೆ.
‘ನಾನು ಮನೆಯಿಂದ ಹೊರಗೆ ಹೋದಾಗ ನನಗೆ 23 ವರ್ಷ. ಶೂಟಿಂಗ್ ಕಾರಣದಿಂದ ಮನೆಯಿಂದ ದೂರವೇ ಇರುತ್ತಿದ್ದೆ. ಯಾವ ನಗರ ಅನ್ನೋದು ಕೂಡ ನನಗೆ ಗೊತ್ತಿರುತ್ತಿರಲಿಲ್ಲ. ನಾನು ಮನೆಯನ್ನು ಬೇಗ ತೊರೆದೆ ಎಂದು ನನಗೆ ಅನಿಸೋಕೆ ಆರಂಭವಾಯಿತು. ಇದನ್ನು ನನ್ನ ಮಗಳಿಗೆ ಆಗೋಕೆ ಬಿಡಲ್ಲ’ ಎಂದು ಆಲಿಯಾ ಹೇಳಿದ್ದಾರೆ.
‘ನಾನು ಭವಿಷ್ಯದ ಬಗ್ಗೆ ಆಲೋಚಿಸುವ ವ್ಯಕ್ತಿ. ಆದರೆ, ರಾಹಾ ವಿಚಾರದಲ್ಲಿ ಹಾಗಾಗುತ್ತಿಲ್ಲ. ರಹಾಗೆ ಕೆಳಗೆ ಬೀಳಲು ಅವಕಾಶವೇ ಕೊಡದೆ ಇದ್ದರೆ ಅವಳಿಗೆ ಹೇಗೆ ಎದ್ದೇಳಬೇಕು ಎಂಬುದೇ ಗೊತ್ತಾಗುವುದಿಲ್ಲ ಎಂದು ನನ್ನ ತಂದೆ ಯಾವಾಗಲೂ ನನಗೆ ಹೇಳುತ್ತಾ ಇರುತ್ತಾರೆ’ ಎಂದು ಆಲಿಯಾ ಹೇಳಿದ್ದಾರೆ.
ಮದುವೆಯಾದ ಬಳಿಕ ಎರಡು ವರ್ಷ ಸಿನಿಮಾ ರಂಗದಿಂದ ದೂರವಿದ್ದ ಆಲಿಯಾ ಇದೀಗ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಸದ್ಯ ಆಲಿಯಾ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಸಿನಿಮಾದಲ್ಲಿ ನಟಿಸಿದ್ದು ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.