ಸೀತಾ ರಾಮಂ ಸಿನಿಮಾದ ಬಳಿಕ ನಟಿ ಮೃಣಾಲ್ ಠಾಕೂರ್ ಸಖತ್ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿರುವ ನಟಿಯನ್ನು ಡಿ-ಗ್ಲಾಮ್ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಬಯಸುತ್ತಾರೆ. ಹಸಿಬಿಸಿ ದೃಶ್ಯಗಳಲ್ಲಿ ನಟಿಸಲು ಸ್ವತಃ ಮೃಣಾಲ್ ಠಾಕೂರ್ ಗೆ ಇಷ್ಟವಿಲ್ಲ. ಈ ಬಗ್ಗೆ ನಟಿ ಪ್ರತಿಕ್ರಿಯಿಸಿದ್ದಾರೆ.
ಕಿಸ್ಸಿಂಗ್ ಅಥವಾ ಬೆಡ್ರೂಮ್ ದೃಶ್ಯಗಳಲ್ಲಿ ನಟಿಸಲು ಮೃಣಾಲ್ ಠಾಕೂರ್ ಹಿಂದೇಟು ಹಾಕುತ್ತಾರೆ. ಆ ರೀತಿಯ ಸೀನ್ಗಳು ಅವರಿಗೆ ಇಷ್ಟ ಇಲ್ಲ ಎಂಬುದು ಒಂದು ಕಾರಣ. ಪೋಷಕರು ಅನುಮತಿ ನೀಡುವುದಿಲ್ಲ ಎಂಬುದು ಮತ್ತೊಂದು ಕಾರಣ. ಹೌದು, ಅಂಥ ದೃಶ್ಯಗಳು ಇರುವ ಸಿನಿಮಾಗಳನ್ನು ಒಪ್ಪಿಕೊಳ್ಳಲು ಮೃಣಾಲ್ ಠಾಕೂರ್ ಅವರ ತಂದೆ-ತಾಯಿ ಅನುಮತಿ ನೀಡುವುದಿಲ್ಲ. ಆ ವಿಚಾರವನ್ನು ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೇ, ಇಂಥ ಸೀನ್ನಲ್ಲಿ ನಟಿಸುವಾಗ ಭಯ ಆಗುತ್ತಿತ್ತು ಎಂದು ಕೂಡ ಅವರು ಹೇಳಿದ್ದಾರೆ.
ಸಿನಿಮಾದಲ್ಲಿ ಕಿಸ್ಸಿಂಗ್ ದೃಶ್ಯ ಇದೆ ಎಂಬ ಕಾರಣಕ್ಕೆ ಮೃಣಾಲ್ ಠಾಕೂರ್ ಅವರು ಅನೇಕ ಆಫರ್ಗಳನ್ನು ಮಿಸ್ ಮಾಡಿಕೊಂಡಿದ್ದು ಉಂಟು. ಆದರೆ ಎಲ್ಲಿಯವರೆಗೂ ಅವಕಾಶಗಳನ್ನು ಕೈ ಚೆಲ್ಲಲು ಸಾಧ್ಯ. ಈಗ ಅವರು ತಮ್ಮ ಪೋಷಕರಿಗೆ ಈ ವಿಚಾರವನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ. ಸಿನಿಮಾಗೆ ಅಂಥ ದೃಶ್ಯ ಅಗತ್ಯವಿದೆ ಎಂದಾದರೆ ಅದನ್ನು ಮಾಡುವುದು ಅನಿವಾರ್ಯ ಎಂದು ಮೃಣಾಲ್ ಠಾಕೂರ್ ತಿಳಿಸಿ ಹೇಳಿದ್ದಾರಂತೆ.
ಮೃಣಾಲ್ ಠಾಕೂರ್ ಅವರು ಮೊದಲು ನಟಿಸಿದ್ದು ಮರಾಠಿ ಚಿತ್ರದಲ್ಲಿ. ಆ ಬಳಿಕ ಅವರಿಗೆ ಬಾಲಿವುಡ್ನಲ್ಲಿ ನಟಿಸುವ ಅವಕಾಶ ಸಿಕ್ಕಿತು. ‘ಸೂಪರ್ 30’ ಸಿನಿಮಾದಲ್ಲಿ ಅವರು ಹೃತಿಕ್ ರೋಷನ್ಗೆ ಜೋಡಿಯಾಗಿ ಅಭಿನಯಿಸಿದ ಬಳಿಕ ಜನಪ್ರಿಯತೆ ಹೆಚ್ಚಾಯಿತು. ಆ ಬಳಿಕ ನಟಿಸಿದ ‘ಸೀತಾ ರಾಮಂ’ ಸಿನಿಮಾ ಸೂಪರ್ ಹಿಟ್ ಆಯಿತು. ಅಲ್ಲದೆ ಇತ್ತೀಚೆಗೆ ವಿಜಯ್ ದೇವರಕೊಂಡ ಜೊತೆ ನಟಿಸಿದ್ದ ಫ್ಯಾಮಿಲಿ ಮ್ಯಾನ್ ಸಿನಿಮಾ ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.