ದಕ್ಷಿಣದ ಖ್ಯಾತ ನಟ ಶರತ್ ಕುಮಾರ್ ಪುತ್ರಿ ನಟಿ ವರಲಕ್ಷ್ಮಿ ಶಾಕಿಂಗ್ ಸ್ಟೇಟ್ ಮೆಂಟ್ ನೀಡಿದ್ದಾರೆ. ಶಬರಿ ಸಿನಿಮಾದ ಪ್ರಚಾರದಲ್ಲಿ ತೊಡಗಿರುವ ನಟಿ ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಬಿಚ್ಚಿಟ್ಟಿದ್ದಾರೆ. ಬಾಲ್ಯದಲ್ಲಿ ನನ್ನ ಮೇಲೂ ಲೈಂಗಿಕ ದೌರ್ಜನ್ಯ ನಡೆದಿತ್ತು. ಅದನ್ನು ನೆನಪಿಸಿಕೊಂಡರೆ, ಈಗಲೂ ಹಿಂಸೆ ಅನಿಸುತ್ತದೆ ಎಂದಿದ್ದಾರೆ.
ಶಬರಿ ಸಿನಿಮಾದಲ್ಲಿ ತಾಯಿಯು ತನ್ನ ಮಗಳನ್ನು ಹೇಗೆ ಕಾಪಾಡಿಕೊಳ್ಳುತ್ತಾಳೆ ಎನ್ನುವ ಕಥೆಯನ್ನು ಆಧರಿಸಿದೆ. ಈ ಸಮಯದಲ್ಲಿ ವರಲಕ್ಷ್ಮಿ ಲೈಂಗಿಕ ದೌರ್ಜನ್ಯದ ಕುರಿತಾದ ಮಾತುಗಳನ್ನು ಆಡಿದ್ದಾರೆ. ತಮ್ಮ ಜೀವನದಲ್ಲೇ ನಡೆದ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.
ನಾನು ಈ ಹಿಂದೆ ಇಂತಹ ಸಿನಿಮಾ ಮಾಡಿಲ್ಲ. ಈ ಚಿತ್ರದಲ್ಲಿ ನಾನು ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದೇನೆ. ತಾಯಿ ತನ್ನ ಮಗಳನ್ನು ಹೇಗೆ ರಕ್ಷಿಸುತ್ತಾಳೆ ಎಂಬುದು ಈ ಚಿತ್ರದ ಕಥಾವಸ್ತು. ಸೈಕಲಾಜಿಕಲ್ ಥ್ರಿಲ್ಲರ್ ಆಗಿರುವ ಹಲವು ದೃಶ್ಯಗಳು ಈ ಚಿತ್ರದಲ್ಲಿದೆ. ನಾನು ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ. ಇದು ನನ್ನ ಜೀವನದಲ್ಲಿ ಮರೆಯಲಾಗದ ಅಘಾತ. ಇಂತಹ ಘಟನೆ ನಡೆದಾಗ ಅನೇಕರು ತಮ್ಮ ಆಪ್ತರು ಹಾಗೂ ಸಂಬಂಧಕರಿಂದ ಮುಚ್ಚಿಡುತ್ತಾರೆ. ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿದರೆ ಅವರು ನಮ್ಮನ್ನು ನಿರ್ಣಯಿಸುತ್ತಾರೆ. ಅದೇ ಥೆರಪಿಸ್ಟ್ ಇದ್ದಿದ್ದರೆ ನಮ್ಮ ಸಮಸ್ಯೆಯ ಬಗ್ಗೆ ಹೇಳುತ್ತಿದ್ದೇನೆ ಎಂದಿದ್ದಾರೆ.