ಹುಬ್ಬಳ್ಳಿ: ನಾನು ಮೂಲತಃ ಕಾರ್ಮಿಕರ ಹಿನ್ನಲೆಯಲ್ಲಿ ಬಂದಿದ್ದೇನೆ. ನನಗೆ ವಾಜಪೇಯಿ ಕಾಲದಲ್ಲಿ ಅವಕಾಶ ಮಾಡೋ ಅವಕಾಶ ಸಿಕ್ಕಿತ್ತು. ನಾನು ವಿಧಾನ ಪರಿಷತ್ ಗೆ ಬಂದಾಗ,ಸರ್ಕಾರ ನೌಕರರು ಇದ್ದಾರೆ,ಖಾಸಗಿ ನೌಕರರು ಇದಾರೆ. ಬೇರೆ ಬೇರೆ ಎಲ್ಲ ಇಲಾಖೆ ಕಾರ್ಮಿಕರ ಧ್ವನಿಯಾಗಿ ಕೆಲಸ ಮಾಡಿದ್ದೇನೆ. ನನ್ನ ಕೆಲವೊಂದು ಹೋರಾಟಕ್ಕೆ ಜಯ ಸಿಕ್ಕಿಲ್ಲ. ಈಗಲೂ ಕೂಡ ಟಿಕೆಟ್ ಕೇಳಿದ್ದೆ ಸಿಕ್ಕಿಲ್ಲ. ನಾನು ಯಾರ ಮೇಲೆಯೂ ಆರೋಪ ಮಾಡಲ್ಲ. ಆದರೆ ಕೆಲವೊಂದಿಷ್ಟು ಜನರು ಮೋದಿ ಹೆಸರನ್ನು ದುರ್ಬಳಿಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಯನೂರು ಮಂಜುನಾಥ ಹೇಳಿದರು.
ರಾಜೀನಾಮೆ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಮ್ಮದೇ ಸರ್ಕಾರ ಇದ್ದಾಗಲೂ ಕಾರ್ಮಿಕರ ಧ್ವನಿಯಾಗಿ ನಿಲ್ಲೋಕೆ ಯಾವದೇ ಸಂಕೋಚ ಇರಲಿಲ್ಲ. ಹಲವಾರು ಹೋರಾಟ ನಾನು ಮಾಡಿದ್ದೇನೆ. ಅತಿಥಿ ಉಪನ್ಯಾಸಕರು,ಪೌರ ಕಾರ್ಮಿಕರ ಖಾಯಂಗಾಗಿ ನಾನು ಹೋರಾಟ ಮಾಡಿದ್ದೇನೆ. ಎನ್.ಪಿ.ಎಸ್ ಹಾಗೂ ಓಪಿಎಸ್ ಹೋರಾಟದಲ್ಲಿ ಭಾಗಿಯಾಗಿದ್ದೇನೆ ಎಂದರು.ನಾನು ಕೆಲ ಹೋರಾಟಗಳಲ್ಲಿ ಯಶಸ್ಸು ಪಡೆಯೋಕೆ ಆಗಲಿಲ್ಲ.
ನಾನು ರಾಜ್ಯದ ಮೊದಲ ಬಾರಿ ಪೊಲೀಸರ ಧ್ವನಿ ಎತ್ತಿದ್ದೆ. ವಿಧಾನಸಭೆಗೆ ನಾನು ಟಿಕೆಟ್ ಕೇಳಿದ್ದೆ. ನನ್ನ ಪಕ್ಷದಲ್ಲಿ ಕೊಡಲಿಲ್ಲ. ಶಿವಮೊಗ್ಗ, ಮಾನ್ವಿಗೆ ಇನ್ನೂ ಟಿಕೆಟ್ ಘೋಷಣೆ ಮಾಡಿಲ್ಲ ಈ ಹಿನ್ನೆಲೆಯಲ್ಲಿ ರಾಜೀನಾಮೆ ಘೋಷಣೆ ಮಾಡಿದ್ದೇನೆ ಎಂದು ಅವರು ಹೇಳಿದರು. ಶಿವಮೊಗ್ಗದಲ್ಲಿ ಕೊಲೆ ಸುಲಿಗೆ ಆಗುತ್ತಿವೆ. ಶಿವಮೊಗ್ಗ ಅಶಾಂತ ನಗರ, ಹೀಗಾಗಿ ಅಲ್ಲಿ ಯಾರೂ ಬಂಡವಾಳ ಹಾಕೋಕೆ ಬರಲ್ಲ. ನಮ್ಮ ಜಿಲ್ಲೆಯಲ್ಲಿ ಮಹಾನ್ ನಾಯಕರು ಇದ್ದಾರೆ. ಶಿವಮೊಗ್ಗದಲ್ಲಿ ಶಾಂತಿ ಕೆಟ್ಟಿದೆ. ಶಾಂತಿ ತರಬೇಕಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಬಡವರ ಕುಟುಂಬ ರಕ್ಷಣೆ ಮಾಡಬೇಕಿದೆ. ನನ್ನ ಪಕ್ಷದಲ್ಲಿ ಅವಕಾಶ ಸಿಕ್ಕಿಲ್ಲ,ನನ್ನ ನಿಲವು ಕೇಳಿ ಕುಮಾರಸ್ವಾಮಿ ಬಿ ಪಾರಂ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದ, ನಾನು ನಾಳೆ ನಾಮಪತ್ರ ಸಲ್ಲಿಸುತ್ತೇನೆ ಎಂದ ಅವರು, ನಾನು ಆಯ್ಕೆಯಾಗ್ತೀನಿ ಅನ್ನೋ ನಂಬಿಕೆ ಇದೆ,ಹಾಗಾಗಿ ರಾಜೀನಾಮೆ ಕೊಟ್ಟಿದ್ದೇನೆ. ನಾನು ಶಿವಮೊಗ್ಗದಲ್ಲಿ ಪ್ತವಾಹದ ವಿರುದ್ದ ಈಜುತ್ತೇನೆ ಅನಸತ್ತದೆ. ವಿದ್ಯಾರ್ಥಿಯಿದ್ದಾಗಲೇ ನಾನು ಜೈಲಿನಲ್ಲಿದೆ. 31 ಕೇಸ್ ನನ್ನ ಮೇಲಿವೆ. ನಾಳೆ ಸಮ್ಮಿಶ್ರ ಸರ್ಕಾರ ಬಂದು ಯಾರ್ಯಾರ ಜೊತೆ ಆಗ್ತಾರೆ ಗೊತ್ತಿಲ್ಲ. ನಾನು ಆತ್ಮತೃಪ್ತಿಗೆ ರಾಜಕಾರಣ ಮಾಡ್ತೀನಿ ಎಂದು ಅವರು ಸ್ಪಷ್ಟ ಪಡಿಸಿದರು.