ಬೊಮ್ಮನಹಳ್ಳಿ: ರಾಜ್ಯದಲ್ಲಿ ಚುನಾವಣೆ ಬಿರುಸುಗೊಂಡಿದೆ (Karnataka Election)ನಾಮಪತ್ರ ವಾಪಸ್ಸ್ ಪಡೆಯಲು ಕೊನೆದಿನವಾಗಿದ್ದ ಒಂದಷ್ಟು ಜನ ತಮ್ಮ ಉಮೇದುವಾರಿಕೆ ಹಿಂಪಡೆದು ಸ್ಪರ್ಧೆ ಇಂದ ಹಿಂದೆ ಸರಿದಿದ್ದಾರೆ. ಕಣದಲ್ಲಿ ಉಳಿದಿರುವ ಹುರಿಯಾಳುಗಳು ಎಡೆಬಿಡದೆ ಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತ ಬೊಮ್ಮನಹಳ್ಳಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ ನಾರಾಯಣರಾಜು ಇಬ್ಬಲೂರಿನ ದೊಡ್ಡಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಧಿಕೃತವಾಗಿ ಪ್ರಚಾರ ಶುರು ಮಾಡಿದ್ರು. ಸಂಜೆ ಹೊಂಗಸಂದ್ರ ಬಳಿಯ ಲಕ್ಷ್ಮೀಲೇಔಟ್ ನಲ್ಲಿ ಜೆಡಿಎಸ್ ವಾರ್ಡ್ ಕಚೇರಿ ತೆರದು ಪ್ರಚಾರ ಮಾಡಿದರು. ಈ ವೇಳೆ ಮಾತನಾಡಿದ ಅವರು ನಾನು ಬೇರೆ ಪಕ್ಷದವರ ರೀತಿ ನಾಮಪತ್ರ ಸಲ್ಲಿಸುವ ವೇಳೆ ದುಡ್ಡುಕೊಟ್ಟು ಸಾವಿರಾರು ಜನರನ್ನು ಸೇರಿಸಬಹುದಿತ್ತು.
ಆದ್ರೆ ಅಲ್ಲಿ ಸುಮ್ಮನೆ ಖರ್ಚಾಗುವ ಲಕ್ಷಾಂತರ ರೂಪಾಯಿ ಬಡವರ ಮನೆಕಟ್ಟಲು ನೆರವಾಗ್ಲಿ. ಬಡ ಮಕ್ಕಳ ವಿದ್ಯಾಬ್ಯಾಸದ ಫೀಜ್ ಕಟ್ಟೋಕ್ಕೆ ಬಳಸ ಬಹುದು ಎಂದು ಯಾವುದೇ ಅಬ್ಬರ ಆಡಂಬರ ಇಲ್ಲದೆ ನಾಲ್ಕೇ ಜನರ ಜೊತೆ ಹೋಗಿ ನಾಮಪತ್ರ ಸಲ್ಲಿಸಿ ಬಂದೆ . ಅಂತ ಹಣ ಮುಂದಿನ ದಿನಗಳಲ್ಲಿ ನಾನು ನನ್ನ ಕ್ಷೇತ್ರದ ಬಡಜನರಿಗೆ ಖರ್ಚು ಮಾಡುತಗತೇನೆ ಎಂದರು. ಹಾಗೇ ಇವತ್ತು ನಮ್ಮನ್ನು ಎ ಟೀಂ ಬಿ ಟೀಂ ಅಂತ ಯಾರು ಹೇಳ್ತಿದ್ದಾರೋ ಅವರಿಗೆ ಮುಂದಿನ ದಿನಗಳಲ್ಲಿ ಉತ್ತರ ಕೊಡುತ್ತೇನೆ ಎಂದು ಕಾಂಗ್ರೆಸ್ ಹಾಗು ಬಿಜೆಪಿ ಅಭ್ಯರ್ಥಿ ಗಳಿಗೆ ತಿರುಗೇಟು ನೀಡಿದರು..