ಬೆಂಗಳೂರು: ನನ್ನ ಗುರಿ ಮುಟ್ಟುವವರೆಗೂ ನಾನು ವಿಶ್ರಮಿಸುವುದಿಲ್ಲ. 123 ಗುರಿ ಹೊಂದಿರುವ ನಾನು ಅದನ್ನ ಮುಟ್ಟುವವರೆಗೂ ಈ ಬಾರಿ ಎಚ್ಚರ ತಪ್ಪಲ್ಲ. ಕೊನೆ ದಿನದವರೆಗೂ ಪ್ರಚಾರ ಮಾಡ್ತೀನಿ, ಮಾಡ್ತನೇ ಇರ್ತೀನಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (H D Kumaraswamy) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಾಂಗ್ರೆಸ್-ಬಿಜೆಪಿ (Congress- BJP) ಯಿಂದ ಅನೇಕರು ಜೆಡಿಎಸ್ ಸಂಪರ್ಕ ಮಾಡಿದ್ದಾರೆ ಎಂಬ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ್ದು . ಅನೇಕ ಜನ ಬಂದು ಚರ್ಚೆ ಮಾಡ್ತಾರೆ. ರಾಜ್ಯದ ನಾಯಕರು 140 ಸೀಟು ಗೆಲ್ಲೋದು ಬೇರೆ. ಆದರೆ ರಾಷ್ಟ್ರದ ನಾಯಕರ ಪರಿಸ್ಥಿತಿ ಏನು ಇದೆ ಅಂತ ನನಗೆ ಗೊತ್ತಿದೆ. ಎರಡು ಪಕ್ಷಗಳು 75 ಸ್ಥಾನ ಕ್ರಾಸ್ ಮಾಡಲ್ಲ ಅಂತ ಇವತ್ತು ಅಧಿಕಾರಿಗಳು ಚರ್ಚೆ ಮಾಡ್ತಿದ್ದಾರೆ ಎಂದರು.
ಗ್ರೌಂಡ್ ರಿಯಾಲಿಟಿ ನನಗೆ ಗೊತ್ತಿದೆ. ಜೆಡಿಎಸ್ (JDS) ಮುಗಿಸಿದ್ದೇವೆ ಅಂತಾರೆ. 140-150 ಅಂತ ಇಬ್ಬರು ಹೇಳ್ತಿದ್ದಾರೆ. ಒಳಗೆ ಬೇರೆಯದ್ದೇ ಇದೆ. ನನ್ನ ಗುರಿ 123 ಅದರ ಗುರಿ ಇಟ್ಟುಕೊಂಡು ನಾವು ಹೋಗ್ತಿದ್ದೇವೆ. ಅದನ್ನ ಸಾಧಿಸುತ್ತೇವೆ. ಏಪ್ರಿಲ್ 10ವರೆಗೆ ಪಂಚರತ್ನ ಯಾತ್ರೆ ಮುಂದುವರಿಯುತ್ತೆ. 123 ಗುರಿ ಮುಟ್ಟಿಸೋಕೆ ಜನ ತೀರ್ಮಾನ ಮಾಡಿದ್ದಾರೆ ಎಂದು ಹೆಚ್.ಡಿ .ಕೆ ಹೇಳಿದರು.
ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್-ಬಿಜೆಪಿ ಏನೇ ಮಾತನಾಡಬಹುದು. ಅದರೆ ಕೇಂದ್ರದ ನಾಯಕರಿಗೆ ನಮ್ಮ ಬಗ್ಗೆ ಗೊತ್ತಿದೆ. ಹಾಗೆ ಸುಮ್ಮನೆ ಚರ್ಚೆ ಮಾಡಿದ್ದೇವೆ ಅಷ್ಟೆ. ಯಾರ ಜೊತೆ ಮಾಡಿದ್ದೇವೆ ಅಂತ ಬೇಕಿಲ್ಲ. ಜೆಡಿಎಸ್ ಬೆಳವಣಿಗೆ ಎರಡು ಪಕ್ಷಕ್ಕೆ ಆತಂಕ ಉಂಟು ಮಾಡಿದೆ. ತಳಮಳ ಉಂಟು ಮಾಡಿದೆ ಎಂದು ತಿಳಿಸಿದರು.
ಇದೇ ವೇಳೆ ಯಡಿಯೂರಪ್ಪ (B S Yediyurappa) ಮನೆ ಮೇಲೆ ಕಲ್ಲು ತೂರಾಟ ವಿಚಾರದ ಕುರಿತು ಮಾತನಾಡಿದ ಹೆಚ್.ಡಿ .ಕೆ, ಈ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ಇದರಲ್ಲಿ ಯಾರ ಪಾತ್ರ ಇದೆ. ಯಾರು ಕಲ್ಲು ಹೊಡೆಸಿದ್ರು ಇದು ನನಗೆ ಸಂಬಂಧ ಇಲ್ಲ. ಇಂತಹ ವಾತಾವರಣ ಕ್ರಿಯೇಟ್ ಮಾಡಿರೋರು ಬಿಜೆಪಿ ಅವರು. ಬಿಜೆಪಿ ಅವರೇ ಇದನ್ನ ಸರಿಪಡಿಸಿಕೊಳ್ಳಬೇಕು ಎಂದರು.