ಬಿಗ್ ಬಾಸ್ ನಲ್ಲಿ ಪ್ರೀತಿಸಿ ಮದುವೆಯಾಗಿದ್ದ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆಯಾದ ನಾಲ್ಕೇ ವರ್ಷಕ್ಕೆ ಡಿವೋರ್ಸ್ ಪಡೆದುಕೊಂಡಿದ್ದಾರೆ. ಈ ಬಗ್ಗೆ ಸಾಕಷ್ಟು ಮಂದಿ ಅಸಮಾಧಾನ ಹೊರ ಹಾಕಿದ್ದಾರ. ಅಂತೆಯೇ ವಿಷಯ ತಿಳಿದ ನಟ ಹಾಗೂ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಇಬ್ಬರನ್ನು ಒಂದು ಮಾಡುವೆ ಅದಿದ್ದರು. ಆದರೆ ಈಗ ಪ್ರಥಮ್ ಆಕ್ರೋಶ ಹೊರ ಹಾಕಿದ್ದಾರೆ.
ಚಂದನ್ ಶೆಟ್ಟಿ ಮತ್ತು ನಿವೇದಿತಾ ಸಂಸಾರದಲ್ಲಿ ನೀವೇಕೆ ಮೂಗು ತೂರಿಸುತ್ತಿದ್ದೀರಾ? ಎಂದಿದ್ದ ನೆಟ್ಟಿಗರು, ಅವರಿಬ್ಬರ ವಿಚಾರವನ್ನು ತಮ್ಮ ಜನಪ್ರಿಯತೆಗೆ ಸಿನಿಮಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದರಿಂದ ಸಿಟ್ಟಾಗಿರುವ ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಸಿಟ್ಟಿಗೆದ್ದಿದ್ದಾರೆ.
ಚಂದನ್ ಶೆಟ್ಟಿ ನನ್ನ ಮದುವೆಗೆ ಬಂದಿದ್ರು, ಅವ್ರ ವಿಚಾರದಲ್ಲಿ ಸಂಧಾನ ಮಾಡೋಣ ಅಂತ ಶಕ್ತಿಮೀರಿ ಪ್ರಯತ್ನಿಸಿದೆ. ಹಾಳಾದ ಕೆಲವು ಯೂಟ್ಯೂಟ್ ವಿಡಿಯೋ ನಾನ್ ಹೇಳಿದ್ದಕ್ಕೆ ಏನೇನೋ ಶೀರ್ಷಿಕೆ ಹಾಕಿವೆ. ಇಲ್ಲಿಗೆ ನಿಲ್ಲಿಸಿ, ನನಗೂ ಇದಕ್ಕೂ ಇನ್ಮೇಲೆ ಸಂಬಂಧವಿಲ್ಲ, ನಾನು ಯಾವ ಸಂಧಾನಕ್ಕೂ ಹೋಗಲ್ಲ. ಥೂ ನಿಮ್ ಜನ್ಮಕ್ಕೆ. ಏನೇನೋ ಹಾಕ್ತೀರಲ್ರೋ ಹಾಳಾದವರೇ ಎಂದು ಬರೆದುಕೊಂಡಿದ್ದಾರೆ.
ಚಂದನ್-ನಿವೇದಿತಾ ಡಿವೋರ್ಸ್ ಬಗ್ಗೆ ಮಾತನಾಡಿದ್ದ ಪ್ರಥಮ್, ಇಬ್ಬರೂ ಬೇರ್ಪಟ್ಟ ಮಾತ್ರಕ್ಕೆ ಅವರಿಬ್ಬರೂ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಆಗ್ತಾರಾ? ಒಂದು ಶೋ ಮುಖ್ಯನಾ ಜೀವನ ಮುಖ್ಯನಾ ಎಂದು ಯೋಚನೆ ಮಾಡಿದರೆ ಜೀವನವೇ ಮುಖ್ಯ, ಚೆನ್ನಾಗಿ ಬದುಕಬೇಕು. ಕೆರಿಯರ್ ಬಗ್ಗೆ ಯೋಚಿಸದೆ ಇಬ್ಬರು ಮದುವೆ ಆಗಿಲ್ಲ. ಎಲ್ಲವನ್ನು ಯೋಚಿಸಿಯೇ ಅವರು ಮದುವೆ ಆಗಿದ್ದಾರೆ. ಸುಂದರವಾದ ಬದುಕು, ಇಬ್ಬರು ಚೆನ್ನಾಗಿ ಬದುಕುಬೇಕು ಎಂದಿದ್ದರು.
ಇನ್ನೂ ಧ್ರುವ ಅವರ ಮಾತನ್ನು ಚಂದನ್ ಕೇಳುತ್ತಾರೆ. ನಿವೇದಿತಾ-ಚಂದನ್ ವಿಚ್ಛೇದನ ವಿಚಾರದಲ್ಲಿ ಧ್ರುವ ಸರ್ಜಾ ಮಧ್ಯಸ್ಥಿಕೆ ವಹಿಸಲಿ. ಚಂದನ್ಗೆ ಒಳ್ಳೆಯದಾಗಲಿ ಎಂದು ಧ್ರುವ `ಪೊಗರು’ ಸಿನೆಮಾದಲ್ಲಿ ಅವಕಾಶ ಕೊಟ್ಟರು. ಪ್ರೀತಿ ಇದ್ದರೆ ಚಂದನ್, ಧ್ರುವ ಮಾತನ್ನು ಕೇಳುತ್ತಾರೆ. ಮಿಲನಾ ಸಿನಿಮಾದಲ್ಲಿ ವಿಚ್ಛೇದನ ಬಳಿಕವೂ ಒಂದಾಗಲ್ವಾ? ಇಚ್ಛಾಶಕ್ತಿ ಬೇರಾವುದು ದೊಡ್ಡದಲ್ಲ. ನಾನು ಮಿಲನಾ ಫಿಲ್ಮ್ ಕ್ಲೈಮ್ಯಾಕ್ಸ್ ಕಟ್ ಮಾಡಿ ಚಂದನ್ಗೆ ಕಳುಹಿಸುತ್ತೇನೆ. ಅದನ್ನು ನೋಡಿಯಾದರೂ ಚಂದನ್ ಮನಸ್ಸು ಬದಲಾಗಲಿ ಎಂದು ಪ್ರಥಮ್ ಹೇಳಿದ್ದರು.