ಮೀಸಲಾತಿಯ ಕಾರಣದಿಂದಾಗಿ ಬಾಂಗ್ಲಾದೇಶದಲ್ಲಿ ಶುರುವಾದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದು 500ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಘಟನೆಯ ಬಳಿಕ ಪ್ರಧಾನಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಬಂದಿದ್ದಾರೆ. ಈ ಮಧ್ಯೆ ಬಾಂಗ್ಲಾದೇಶದಲ್ಲಿ ಅರಾಜಕತೆ ಸೃಷ್ಟಿಯಾಗಲು ಅಮೆರಿಕಾ ಷಡ್ಯಂತ್ರ ಕಾರಣ ಅಂತ ಹಸೀನಾ ಆರೋಪ ಮಾಡಿದ್ದಾರೆ.
ಪ್ರಧಾನಿ ಸ್ಥಾನದಿಂದ ಕೆಳಗಿಳಿದಿರುವ, ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ, ಅಮೆರಿಕ ವಿರುದ್ಧ ದೊಡ್ಡ ಆರೋಪ ಮಾಡಿದ್ದಾರೆ. ಬಾಂಗ್ಲಾದಲ್ಲಿ ಅರಾಜಕತೆ ಸೃಷ್ಟಿಯಾಗಲು ಹಾಗೂ ಪ್ರಧಾನಿ ಸ್ಥಾನದಿಂದ ತಾವು ಕೆಳಗಿಳಿಯಲು ಅಮೆರಿಕಾ ಷಡ್ಯಂತ್ರವೇ ಕಾರಣ ಎಂದಿದ್ದಾರೆ.
ಎಕನಾಮಿಕ್ ಟೈಮ್ಸ್ಗೆ ಪ್ರತಿಕ್ರಿಯಿಸಿರೋ ಶೇಕ್ ಹಸೀನಾ, ನಾನು ಸೇಂಟ್ ಮಾರ್ಟಿನ್ ದ್ವೀಪವನ್ನು ಬಿಟ್ಟುಕೊಟ್ಟಿದ್ದರೆ ಮತ್ತು ಬಂಗಾಳಕೊಲ್ಲಿಯ ಮೇಲೆ ಅಮೆರಿಕದ ಹಿಡಿತಕ್ಕೆ ಅವಕಾಶ ನೀಡಿದ್ದರೇ ನಾನು ಅಧಿಕಾರದಲ್ಲಿ ಉಳಿಯಬಹುದಿತ್ತು ಎಂದಿದ್ದಾರೆ. ಜೊತೆಗೆ . ನಾನು ದೇಶದಲ್ಲಿಯೇ ಉಳಿದಿದ್ದರೇ ಮತ್ತಷ್ಟು ಹಿಂಸಾಚಾರ ನಡೆಯುತ್ತಿತ್ತು. ಆದ್ದರಿಂದ ರಾಜೀನಾಮೆ ನೀಡಿದೆ ಎಂದು ಶೇಖ್ ಹಸೀನಾ ದೇಶದ ಜನರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಬಾಂಗ್ಲಾ ಸಂಸತ್ನಲ್ಲೂ ಅಮೆರಿಕಾ ಷಡ್ಯಂತ್ರದ ಬಗ್ಗೆ ಶೇಕ್ ಹಸೀನಾ ಪರೋಕ್ಷವಾಗಿ ಮಾತನಾಡಿದ್ದರು. ಬಾಂಗ್ಲಾದ ದಕ್ಷಿಣ ಭಾಗದಲ್ಲಿರುವ ಸೇಂಟ್ ಮಾರ್ಟಿನ್ ದ್ವೀಪದಲ್ಲಿ ಅಮೆರಿಕಾ ಸೇನಾ ನಿರ್ಮಿಸಲು ಈ ದ್ವೀಪವನ್ನ ಕೇಳಿತ್ತೇನ್ನಲಾಗಿದೆ. ಆದ್ರೆ ಶೇಖ್ ಹಸೀನಾ ದ್ವೀಪವನ್ನು ಅಮರಿಕಾಕ್ಕೆ ನೀಡಲು ಸಮ್ಮತಿಸರಲಿಲ್ಲ, ಇದೇ ಕಾರಣಕ್ಕೆ ತಮ್ಮ ಸರ್ಕಾರದ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ ಎಂದು ಶೇಖ್ ಹಸೀನಾ ಆರೋಪ ಮಾಡಿದ್ದಾರೆ . ದ್ವೀಪದಲ್ಲಿ ಸೇನಾ ನೆಲೆ ನಿರ್ಮಿಸುವ ಮೂಲಕ ಬಂಗಾಳಕೊಲ್ಲಿಯಲ್ಲಿ ಪಾರುಪತ್ಯಕ್ಕಾಗಿ ಅಮೆರಿಕಾ ಹವಣಿಸಿದೆ ಎನ್ನಲಾಗ್ತಿದ್ದು, ಇದೇ ಕಾರಣಕ್ಕೆ ಶೇಕ್ ಹಸೀನಾ ಅಧಿಕಾರ ಕಳೆದುಕೊಳ್ಳುವಂತಾಯಿತು ಎಂದು ಹೇಳಲಾಗ್ತಿದೆ.