ಪುರಿಯ ಜಗನ್ನಾಥ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳನ್ನು ಇಂದು ತೆರೆಯಲಾಗಿದೆ. ಚುನಾವಣೆಗೂ ಮುನ್ನ ಬಿಜೆಪಿ ಗೆದ್ದರೆ ದೇವಾಲಯದ ಎಲ್ಲಾ ದ್ವಾರಗಳನ್ನು ಭಕ್ತರಿಗಾಗಿ ತೆರೆಯುವುದಾಗಿ ಹೆಳಿತ್ತು. ಇದೀಗ ನೂತನವಾಗಿ ರಚನೆಯಾದ ಬಿಜೆಪಿ ಸರ್ಕಾರ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯನ್ನು ನೆರವೇರಿಸಿದೆ.
ಬೆಳಗ್ಗೆ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ, ಪುರಿ ಸಂಸದ ಸಂಬಿತ್ ಪಾತ್ರ ಸೇರಿದಂತೆ ಬಿಜೆಪಿಯ ನಾಯಕರು ತೆರಳಿ ದೇವಾಲಯದ ದ್ವಾರಗಳನ್ನು ತೆರೆಯುವ ಮಹತ್ವದ ಕ್ಷಣದಲ್ಲಿ ಭಾಗಿಯಾಗಿದ್ದರು.
ಮಾಂಝಿ ಅವರು ಬುಧವಾರದ ತಮ್ಮ ಮೊದಲ ಕ್ಯಾಬಿನೆಟ್ ಸಭೆಯಲ್ಲಿ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಮುಚ್ಚಲ್ಪಟ್ಟಿರುವ ಪವಿತ್ರ ದೇಗುಲದ ಎಲ್ಲಾ ದ್ವಾರಗಳನ್ನು ಭಕ್ತರಿಗಾಗಿ ಮತ್ತೆ ತೆರೆಯುವ ಪ್ರಸ್ತಾಪವನ್ನು ಅನುಮೋದಿಸಿದರು. ಅಲ್ಲದೇ 12ನೇ ಶತಮಾನದ ಈ ದೇಗುಲದ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ 500 ಕೋಟಿ ರೂ. ಮೌಲ್ಯದ ಕಾರ್ಪಸ್ ನಿಧಿಯನ್ನು ಸ್ಥಾಪಿಸುವುದಾಗಿ ಕ್ಯಾಬಿನೆಟ್
ಪುರಿಯ ಜಗನ್ನಾಥ ದೇವಾಲಯದಲ್ಲಿ ನಾಲ್ಕು ದ್ವಾರಗಳಿವೆ. ಅವುಗಳೆಂದರೆ ಸಿಂಹದ್ವಾರ, ಅಶ್ವದ್ವಾರ, ವ್ಯಾಘ್ರದ್ವಾರ, ಮತ್ತು ಹಸ್ತಿದ್ವಾರ. ಈ ದ್ವಾರಗಳು ದೇವಾಲಯದ ನಾಲ್ಕು ಬದಿಗಳಲ್ಲಿದೆ. ಕೋವಿಡ್ ಹರಡುತ್ತಿದ್ದ ಸಮಯದಲ್ಲಿ ಈ ಬಾಗಿಲುಗಳನ್ನು ಮುಚ್ಚಲಾಗಿತ್ತು. ನಂತರ, ಭಕ್ತರಿಗೆ ಸಿಂಹದ್ವಾರದ ಮೂಲಕ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಇದರಿಂದಾಗಿ ಭಾರೀ ಜನದಟ್ಟಣೆಯಿಂದ ಭಕ್ತರು ಸಂಕಷ್ಟಪಡುವಂತಾಗಿತ್ತು. ಈ ಎಲ್ಲಾ ದ್ವಾರಗಳನ್ನು ತೆರೆಯುವುದು ಬಿಜೆಪಿಯ ದೊಡ್ಡ ಚುನಾವಣಾ ಭರವಸೆಗಳಲ್ಲಿ ಒಂದಾಗಿತ್ತು.