ಬೆಂಗಳೂರು: ಮುಖ್ಯಮಂತ್ರಿಗಳ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ಮಗ ಯತೀಂದ್ರ ಸಿದ್ದರಾಮಯ್ಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂಬ ಮಾಜಿ ಸಿಎಂ ಎಚ್ .ಡಿ.ಕುಮಾರಸ್ವಾಮಿ ಆರೋಪಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಚುನಾವಣೆಯಲ್ಲಿ ಕಡಿಮೆ ಸ್ಥಾನ ಗೆದ್ದಿದ್ದಕ್ಕೆ ಕುಮಾರಸ್ವಾಮಿ ಹತಾಷರಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ಮಾಡುತ್ತಿರುವ ಆರೋಪಗಳೆಲ್ಲ ಸತ್ಯಕ್ಕೆ ದೂರ, ಲಂಚುಗಳಿತನದಿಂದ ತಮ್ಮ ಸರ್ಕಾರ ಬಹಳ ದೂರ ಎಂದು ಶಿವಕುಮಾರ್ ಹೇಳಿದರು.
ಭ್ರಷ್ಟಾಚಾರ ನಡೆದಿರುವ ಬಗ್ಗೆ ಕುಮಾರಸ್ವಾಮಿಯವರಲ್ಲಿ ದಾಖಲೆ, ಪುರಾವೆಗಳಿದ್ದರೆ ಸರ್ಕಾರವೇ ರಚಿಸಿದ ಲೋಕಾಯುಕ್ತ ಇದೆ, ಅಲ್ಲಿಗೆ ಹೋಗಿ ದೂರು ಸಲ್ಲಿಸಲಿ ಎಂದು ಹೇಳಿದರು.