ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬ ಪದ ಆಗಾಗ ಕೇಳಿ ಬರುತ್ತಿರುತ್ತದೆ. ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ಬಗ್ಗೆ ಈಗಾಗಲೇ ಹಲವು ನಾಯಕಿಯರು ಓಪನ್ ಆಗಿ ಮಾತನಾಡಿದ್ದಾರೆ. ಇದೀಗ ಈ ಬಗ್ಗೆ ಕಾಲಿವುಡ್ ನಾಯಕಿ ಪ್ರತಿಕ್ರಿಯಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಕಾಲಿವುಡ್ ನಾಯಕಿ ಗಾಯತ್ರಿ ರೆಮಾ, ನಿರ್ದೇಶಕರು ಮತ್ತು ನಿರ್ಮಾಪಕರು ನೇರವಾಗಿ ನಾಯಕಿಯರೊಂದಿಗೆ ಮಾತನಾಡುತ್ತಾರೆ. ಅವರು ಆಫರ್ಗಳನ್ನು ಬಯಸಿದರೆ, ಅಡ್ಜೆಸ್ಟ್ ಮೆಂಟ್ ಮಾಡಿಕೊಳ್ಳಲು ಓಕೆ ಅಂದರೆ ಮಾತ್ರ ಸಿನಿಮಾದಲ್ಲಿ ಅವಕಾಶ ಸಿಗುತ್ತದೆ ಎಂದಿದ್ದಾರೆ.
ಅಡ್ಜಸ್ಟಮೆಂಟ್ ಬೇಡ ಎನ್ನುವ ಕಾರಣಕ್ಕೆ ಸಿನಿಮಾ ಅವಕಾಶಗಳು ಸಿಗುತ್ತಿಲ್ಲ. ಈ ಕ್ರಮದಲ್ಲಿ ನಿರ್ದೇಶಕರೊಬ್ಬರು ಕಮಿಟ್ ಮೆಂಟ್ ಕೇಳಿದ್ದರು. ‘ನಟಿಸಲು ಹೇಳಿದರೂ ಪರವಾಗಿಲ್ಲ, ನನ್ನ ಜೊತೆ ಮಲಗಲು ಹೇಳಿದರೆ ಹೇಗೆ’ ಎಂದು ಅಸಹನೆ ವ್ಯಕ್ತಪಡಿಸಿದ ಗಾಯತ್ರಿ ರೇಮಾ, ಹೀರೋ ಸಿದ್ಧಾರ್ಥ್ ಎಂದರೆ ನನಗೆ ತುಂಬಾ ಇಷ್ಟ.. ಅವರ ಜೊತೆ ನಟಿಸುವ ಅವಕಾಶ ಸಿಕ್ಕರೆ.. ಹಾಸಿಗೆ ಹಂಚಿಕೊಳ್ಳಲು ಸಿದ್ಧ ಎಂದು ಓಪನ್ ಆಗಿ ಹೇಳಿದ್ದಾರೆ.
ವಿಮಾನ ನಿಲ್ದಾಣದ ಬಳಿ ಶೂಟಿಂಗ್ ನಡೆಯುತ್ತಿತ್ತು. ನನಗೆ ಇದ್ದಕ್ಕಿದ್ದಂತೆ ಪಿರಿಯಡ್ಸ್ ಆಯ್ತೂ. ನಾನು ತಕ್ಷಣ ಮ್ಯಾನೇಜರ್ ಬಳಿ ಹೋಗಿ ಇಲ್ಲಿ ಯಾವುದಾದರು ಸ್ನಾನಗೃಹವಿದೆಯೇ ಎಂದು ಕೇಳಿದೆ. ಇಲ್ಲ ಎಂದರು. ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿದೆ. ನಂತರ ನಟಿ ಕ್ಯಾರವಾನ್ ಬಳಸಲು ಹೇಳಿದರು. ನಾನು ಹೋದೆ. ಆದರೆ ನಾಯಕಿಯ ತಾಯಿ ಆವೇಶದಿಂದ ಬಂದು ಒಳಗೆ ಬಂದಿದ್ದು ಏಕೆ ಎಂದು ಅನುಮಾನದಿಂದ ನೋಡಿದಳು. ಆಗ ತುಂಬಾ ನೋವಾಯಿತು ಎಂದಿದ್ದಾರೆ. ಗಾಯತ್ರಿ ಅವರು ಮಂಗಳಾಪುರಂ, ಡೋರ, ಕಾಸು ಮೇಲಿನ ಕಾಸು, ಮೋಹಿನಿ, ವಾ ವರಲಂ ವಾ ಚಿತ್ರಗಳಲ್ಲಿ ನಟಿಸಿದ್ದಾರೆ.