ಹಬ್ಬಗಳು ಮಾತ್ರವಲ್ಲದೇ ಸಮಾರಂಭಗಳಲ್ಲೂ ಹೆಚ್ಚಾಗಿ ನಾವು ಕಾಣುವುದು ಚೆಂಡುಹೂವಿನ ಅಲಂಕಾರವೇ. ಅದರ್ಥ ಚೆಂಡು ಹೂಗಳಿಗೆ ವರ್ಷ ಪೂರ್ತಿ ಬೇಡಿಕೆ ಇದ್ದೇ ಇರುತ್ತದೆ. ಬೆಲೆ ಕೂಡಾ ಉತ್ತಮವಾಗಿಯೇ ಸಿಗುತ್ತದೆ. ಆಫ್ರಿಕನ್ ಮ್ಯಾರಿಗೋಲ್ಡ್ ಎನ್ನುವ ತಳಿಯ ಚೆಂಡುಹೂವನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ಭಾಗದ ರೈತರು ಹೆಚ್ಚಾಗಿ ಬೆಳೆಯುತ್ತಾರೆ.
ಇದು ಉತ್ತಮ ಇಳುವರಿ ನೀಡುತ್ತದೆ. ಅಲ್ಲದೇ ಚೆಂಡು ಹೂ ಚಳಿಗಾಲದ ಬೆಳೆ, ಹಾಗಾಗಿ ಹಬ್ಬದ ಸಂದರ್ಭಗಳಿಗೆ ಸರಿಯಾಗಿ ಬರುತ್ತದೆ.
ಜುಲೈ ತಿಂಗಳ ಮೊದಲ 15 ದಿನಗಳಲ್ಲಿ ಬಿತ್ತನೆ ಮಾಡುವ ತಳಿ ಇದು. ಆದರೆ ಅತೀ ಹೆಚ್ಚು ಇಳುವರಿ ಬರುವುದು ಮಾತ್ರ ಸೆಪ್ಟೆಂಬರ್ ತಿಂಗಳಲ್ಲಿ ಬಿತ್ತನೆ ಮಾಡಿದ ಬೆಳೆಗೆ. ಚೆನ್ನಾಗಿ ಬಿಸಿಲು ಬೀಳುವ ಪ್ರದೇಶದಲ್ಲಿ ಚೆಂಡು ಹೂ ಅದ್ಭುತ ಇಳುವರಿ ನೀಡುತ್ತದೆ. ನೆರಳಿನಲ್ಲಿ ಬೆಳೆದರೆ ಗಿಡವೇನೋ ಸೊಂಪಾಗಿ ಬರುತ್ತದೆ, ಆದರೆ ಹೂಗಳು ಕಡಿಮೆ.ಈ ತಳಿಯ ಚೆಂಡು ಹೂವಿನ ಹೆಸರು ಪೂಸಾ ಬಸಂತಿ. ಮೊದಲು ನೋಡಿದ ಕೇಸರಿ ಬಣ್ಣದ ಹೂವಿನ ಹೆಸರು ಪೂಸಾ ಆರೆಂಜ್. ಕಡುಗೆಂಪು ಬಣ್ಣದ ಪೂಸಾ ಬಸಂತಿ 135ರಿಂದ 145 ದಿನಗಳಲ್ಲಿ ಹೂವರಳಿಸುತ್ತದೆ. ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್ ಇರೋ ಇವುಗಳನ್ನು ದಸರಾ ಸಂದರ್ಭಕ್ಕಾಗಿ ಜುಲೈ ತಿಂಗಳಲ್ಲಿ ಬಿತ್ತನೆ ಮಾಡುತ್ತಾರೆ.
ಮೊದಲು ನೋವು ಸೂಕ್ತವಾದ ಮಣ್ಣು ಆಯ್ಕೆ ಮಾಡಬೇಕು
ಮಣ್ಣಿನ pH 6.5 ರಿಂದ 7.5 ಇರಬೇಕು, ಅತಿಯಾದ ಆಮ್ಲೀಯ ಅಥವಾ ಲವಣಯುಕ್ತ ಮಣ್ಣು ಚೆಣಡು ಹೂವಿನ ಕೃಷಿಗೆ ಒಳ್ಳೆಯದಲ್ಲ. ಮಣ್ಣು ಫಲವತ್ತತೆಯಿಂದ ಕೂಡಿರಬೇಕು.
ನೀವು ಬಿತ್ತನೆಗೆ ಮಣ್ಣು ಹೇಗೆ ಸಿದ್ಧ ಮಾಡಬೇಕು
ಭೂಮಿಯನ್ನು ಉಳುಮೆ ಮಾಡಿ ಒಳ್ಳೆಯ ಹದ ಮಾಡಬೇಕು, ನೀವು ಉಳುಮೆ ಮಾಡಿದ ಮೇಲೆ ಮಣ್ಣಿಗೆ ಸ್ವಲ್ಪ ಸೆಗಣಿ ಕೊಬ್ಬರ ಹಾಕಿ ಕೊಟ್ಟರೆ ಇನ್ನೂ ಒಳ್ಳೆಯದು. ಫಲವತ್ತತೆ ಚೆನ್ನಾಗಿರುವ ಮಣ್ಣಿನಲ್ಲಿ ಬೆಳೆ ಕೂಡ ಚೆನ್ನಾಗಿ ಬೆಳೆಯುತ್ತದೆ.
ನೀರು ಎಷ್ಟು ಬೇಕು?
ಗಿಡ ನೆಟ್ಟು ಸ್ವಲಪ್ ದೊಡ್ಡದಾಗುವವರೆಗೆ ನೀರು ಬೇಕು, ಆದರೆ ಗದ್ದೆಯಾದರೆ ನೀರು ನಿಲ್ಲದಂತೆ ಜಾಗ್ರತೆವಹಿಸಿ, ತುಂಬಾ ಬಿಸಿಲು ಇದ್ದಾಗ ನೀರು ಕೊಟ್ಟರೆ ಒಳ್ಳೆಯದು.
ಚಳಿಗಾಲದಲ್ಲಿ ಬೆಳೆಯುವುದಾದರೆ ಚೆಂಡು ಹೂವಿನ ಗಿಡಗಳಿಗೆ 8ರಿಂದ 10 ದಿನ, ಬೇಸಿಗೆಯಲ್ಲಾದರೆ 5ರಿಂದ 7 ದಿನ ನೀರುಣಿಸಬೇಕು. ಮಳೆ ಬರುತ್ತಿದ್ದರೆ ನೋಡಿಕೊಂಡು ನೀರುಣಿಸಬೇಕು. ಚೆನ್ನಾಗಿ ನೀರು, ಗೊಬ್ಬರ ಹಾಕಿದರೆ ಖರ್ಚಾದ ಹಣದೊಂದಿಗೆ ಲಕ್ಷಗಟ್ಟಲೆ ಲಾಭ ಖಂಡಿತಾ.ಚೆಂಡು ಹೂ ನೈಸರ್ಗಿಕವಾಗಿಯೇ ಕ್ರಿಮಿಕೀಟಗಳ ಹಾವಳಿಯಿಂದ ದೂರ ಇರುತ್ತದೆ.
ಹೂವು ಬಿಡಲು ಎಷ್ಟು ಸಮಯಬೇಕು
ಚೆಂಡು ಹೂವು 2-5ರಿಂದ 3 ತಿಂಗಳಿಗೆ ಬರುತ್ತದೆ, ಫ್ರೆಂಚ್ ಚೆಂಡು ಹೂವು ಒಂದೂವರೆ ವರ್ಷಕ್ಕೆ ಬರುತ್ತದೆ. ಚೆಂಡು ಹೂವು ಕೀಳುವ ಮುನ್ನ ನೀರು ಹಾಕಿ ನಂತರ ಕೀಳಬೇಕು, ಸಂಜೆ ಅಥವಾ ಬೆಳಗ್ಗೆ ಹೂವು ಕೀಳಿ ನಂತರ ಅದನ್ನು ಬುಟ್ಟಿಯಲ್ಲಿ ಅತವಾ ಗೋಣಿ ಚೀಲದಲ್ಲಿ
ಹಾಕಿ ಮಾರುಕಟ್ಟೆಗೆ ಸಾಗಿಸಿ, ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಹಾಕಬೇಡಿ.
ಅನೇಕ ಬೇರೆ ಬೆಳೆಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುವಾಗ ಚೆಂಡುಹೂವಿನ ರಸ ಅಥವಾ ಕಷಾಯವನ್ನು ಕ್ರಿಮಿನಾಶಕವಾಗಿ ಬಳಸುತ್ತಾರೆ. ಅಷ್ಟೊಂದು ಶಕ್ತಿಯುತವಾಗಿರುವ ಚೆಂಡು ಹೂವಿಗೆ ಕ್ರಿಮಿನಾಶಕ ಹೆಚ್ಚಾಗಿ ಬೇಕಾಗಲ್ಲ. ಕೇವಲ ಒಂದೇ ಒಂದು ಎಕರೆಯಲ್ಲಿ ಚೆಂಡು ಹೂವನ್ನು ಬೆಳೆದು ವರ್ಷಕ್ಕೆ ಮೂರು ಬೆಳೆ ತೆಗೆಯುತ್ತಾರೆ ಅನೇಕ ರೈತರು.