ಉಸಿರುಗಟ್ಟುವುದು
ಸಣ್ಣ-ಪುಟ್ಟ ಕೆಲಸ ಮಾಡುವಾಗ, ಮೆಟ್ಟುಲು ಹತ್ತುವಾಗ, ಎಷ್ಟೋ ವರ್ಷಗಳಿಂದ ಮಾಡುತ್ತಿರುವ ಮಾಮೂಲಿ ವಾಕಿಂಗ್ನಲ್ಲೂ ಮೇಲುಸಿರು ಬರುತ್ತಿದೆ ಎಂದಾದರೆ ಮುಂಬರುವ ಅಪಾಯದ ಸೂಚನೆಯಿದು. ಅಂದರೆ ಹೃದಯಾಘಾತ ಆಗಿಯೇ ಬಿಡುತ್ತದೆ ಎಂದಲ್ಲ, ಆದರೆ ಹೃದಯದ ಆರೋಗ್ಯ ಚೆನ್ನಾಗಿಲ್ಲ ಎಂಬುದು ಸ್ಪಷ್ಟ
ತಲೆ ಸುತ್ತುವುದು
ನೀರು, ಆಹಾರ ಎಲ್ಲರೂ ಕಾಲಕಾಲಕ್ಕೆ ಹೊಟ್ಟೆ ಸೇರುತ್ತಿದ್ದರೂ ನಿಲ್ಲದ ಸುಸ್ತು, ಆಯಾಸ, ಉಸಿರು ಕಟ್ಟುವುದು, ತಲೆ ಸುತ್ತುವುದು ಮುಂತಾದ ಲಕ್ಷಣಗಳು ಪದೇಪದೆ ಕಾಣುತ್ತಿವೆ ಎಂದರೆ ಇದು ನಿರ್ಲಕ್ಷ್ಯ ಮಾಡುವ ವಿಷಯವಲ್ಲ. ಹೃದಯಕ್ಕೆ ಹರಿಯುವ ರಕ್ತದ ಪ್ರಮಾಣ ಕಡಿಮೆಯಾದರೆ, ದೊರೆಯುವ ಆಮ್ಲಜನಕದಲ್ಲಿ ಕೊರತೆಯಾದರೆ ಇಂಥ ಸೂಚನೆಗಳು ಕಾಣುತ್ತವೆ.
ಹೀಗೆನ್ನುತ್ತಿದ್ದಂತೆ ನಿನ್ನೆ ತಿಂದದ್ದು ಯಾವುದೋ ಸರಿಯಾಗಲಿಲ್ಲ ಎಂದೇ ಭಾವಿಸಿ, ಅದಕ್ಕೆ ಔಷಧಿ ಮಾಡುತ್ತೇವೆ. ಅದಿಲ್ಲದಿದ್ದರೆ, ಆಸಿಡಿಟಿ ತೊಂದರೆಯಿದ್ದರೆ ಸಹ ಇಂಥದ್ದೇ ಲಕ್ಷಣಗಳು ಕಾಣಬಹುದು. ಆದರೆ ಇವೆಲ್ಲ ಹುಳಿತೇಗು, ಎದೆಯುರಿಯ ಪ್ರಕೋಪಗಳು ಎಂದು ಸುಮ್ಮನಿರಬೇಡಿ. ರಕ್ತಸಂಚಾರ ಕಡಿಮೆ ಆದಾಗಲೂ ಇಂಥ ಸೂಚನೆಗಳು ಕಾಣುತ್ತವೆ.
ಬೆವರು
ಸೆಕೆಯಲ್ಲಿ ಬೆವರುವುದು ಸಹಜ. ಮಹಿಳೆಯರಿಗೆ ಋತುಬಂಧದ ಕಾಲದಲ್ಲಿ ವಿಪರೀತ ಬೆವರುವುದೂ ಸ್ವಾಭಾವಿಕ. ಆದರೆ ಕಾಲ ಯಾವುದೇ ಆದರೂ ಬೆವರುತ್ತಿದ್ದೀರಿ ಎಂದಾದರೆ ವೈದ್ಯರಲ್ಲಿಗೆ ಹೋಗಬೇಕು ಎಂದೇ ಅರ್ಥ. ದೇಹಕ್ಕೆ ಅಪಾಯವಾದಾಗ ಫ್ಲೈಟ್-ಫೈಟ್ ಹಂತಕ್ಕೆ ದೇಹ ತನ್ನನ್ನು ತಾನು ದೂಡಿಕೊಳ್ಳುವ ಸೂಚನೆಯಾಗಿ ಈ ಅತಿಯಾದ ಬೆವರು ಕಾಣುತ್ತದೆ.
ಸಣ್ಣ-ಪುಟ್ಟ ಕೆಲಸ ಮಾಡುವಾಗ, ಮೆಟ್ಟುಲು ಹತ್ತುವಾಗ, ಎಷ್ಟೋ ವರ್ಷಗಳಿಂದ ಮಾಡುತ್ತಿರುವ ಮಾಮೂಲಿ ವಾಕಿಂಗ್ನಲ್ಲೂ ಮೇಲುಸಿರು ಬರುತ್ತಿದೆ ಎಂದಾದರೆ ಮುಂಬರುವ ಅಪಾಯದ ಸೂಚನೆಯಿದು. ಅಂದರೆ ಹೃದಯಾಘಾತ ಆಗಿಯೇ ಬಿಡುತ್ತದೆ ಎಂದಲ್ಲ, ಆದರೆ ಹೃದಯದ ಆರೋಗ್ಯ ಚೆನ್ನಾಗಿಲ್ಲ ಎಂಬುದು ಸ್ಪಷ್ಟ.
ನೋವು
ಹೀಗೆನ್ನುತ್ತಿದ್ದಂತೆ ಎದೆನೋವೇ ಬರಬೇಕೆಂದಿಲ್ಲ. ಬೆನ್ನು, ಭುಜ, ತೋಳು, ಕುತ್ತಿಗೆ, ದವಡೆಯಲ್ಲೂ ನೋವು ಕಾಣುತ್ತಿದೆ ಎಂದಾದರೆ ಖಂಡಿತಕ್ಕೂ ಏನೋ ಸರಿಯಿಲ್ಲ ಎಂಬುದು ಸ್ಪಷ್ಟ. ಹೆಚ್ಚಿನ ಸಾರಿ ರಕ್ತನಾಳಗಳಲ್ಲಿ ಜಮೆಯಾಗಿರುವ ಕೊಬ್ಬಿನಿಂದಾಗಿ ಪರಿಚಲನೆಯಲ್ಲಿ ತೊಂದರೆಯಾಗಿ ಬರುವಂಥ ತೊಂದರೆಗಳಿವು. ವೇಗಸ್ ನರವು ಹೃದಯದಿಂದ ಮೆದುಳು, ಎದೆ, ಕುತ್ತಿಗೆ, ಕಿಬ್ಬೊಟ್ಟೆ ಮುಂತಾದ ಹಲವೆಡೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹಾಗಾಗಿ ಹೃದಯದಲ್ಲಿ ಆಗುವಂಥ ತೊಂದರೆಗಳನ್ನು ಇತರ ಭಾಗಗಳಿಗೆ ನೋವಿನ ಮೂಲಕ ಸೂಚನೆ ನೀಡುತ್ತದೆ.
ಎದೆಯಲ್ಲಿ ಬಿಗಿ, ಒತ್ತಡ
ಎದೆಯಲ್ಲಿ ಒತ್ತಡದ ಅನುಭವ, ಏನೋ ಹಿಂಡಿದಂತೆ, ಬಿಗಿದಂತೆ ಭಾಸವಾಗುವುದು, ನೋವು ಮುಂತಾದವೆಲ್ಲ ಆರಂಭದಲ್ಲಿ ಕಾಣುತ್ತವೆ. ಇಂಥವು ಏನೇ ಕಂಡರೂ ಹೃದಯ ತಜ್ಞರಲ್ಲೇ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ. ಈ ಬಗ್ಗೆ ಉದಾಸೀನ ಸಲ್ಲದು.