ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿ ರಚಿಸಿರುವಂತೆ ಕನ್ನಡ ಚಿತ್ರರಂಗದಲ್ಲೂ ಅಂಥದ್ದೆ ಸಮಿತಿ ರಚನೆಗೆ ಸಾಕಷ್ಟು ಮಂದಿ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ಪರ ವಿರೋಧಗಳು ಚರ್ಚೆ ಶುರುವಾಗಿದೆ. ಕನ್ನಡ ಚಿತ್ರರಂಗದಲ್ಲಿ ಕಮಿಟಿ ರಚಿಸುವ ಬಗ್ಗೆ ಸೆ.16ರಂದು ಸಭೆ ಕೂಡ ನಡೆಯಿತು. ಸ್ಯಾಂಡಲ್ವುಡ್ ನಲ್ಲೂ ನಟಿಯರ ರಕ್ಷಣೆಗೆ ಸಮಿತಿ ರಚನೆ ಆಗ್ಬೇಕು ಎಂದು ಅನೇಕರು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಸ್ಯಾಂಡಲ್ವುಡ್ ನಟಿಯರ ರಕ್ಷಣೆಗೆ ಕಮಿಟಿ ರಚನೆ ಆಗ್ಬೇಕು ಎನ್ನುವ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಉಪೇಂದ್ರ, ಅದು ತುಂಬಾ ಪರ್ಸನಲ್ ವಿಚಾರ ಪಬ್ಲಿಕ್ ಮ್ಯಾಟರಲ್ಲ. ಏನೇನಾಗಿದೆ, ಏನಾಗಿಲ್ಲ ಅನ್ನೋದು ಅವರಿಗಷ್ಟೇ ಗೊತ್ತಿರುತ್ತೆ. ಈಗೇನೋ ಒಂದು ಕಮಿಟಿ ಮಾಡಿ ಅಲ್ಲಿ ಹೇಳಿಕೊಳ್ಳಬೇಕು ಅಂತಿದ್ದಾರೆ ಎಂದು ಉಪೇಂದ್ರ ಹೇಳಿದ್ದಾರೆ.
ಆದ್ರೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅಲ್ ರೆಡಿ ಅರ್ಟಿಸ್ಟ್ ಅಸೋಸಿಯೇಷನ್ ಇದೆ. ಚೇಂಬರ್ ಇದೆ ಅಂತ ಕೆಲವರು ವಾದ ಮಾಡ್ತಿದ್ದಾರೆ. ಕಮಿಟಿ ಬರುತ್ತಾ? ಮುಂದೇನಾಗುತ್ತೆ ಅನ್ನೋದು ನನಗೂ ಗೊತ್ತಿಲ್ಲ. ಅನುಕೂಲವಾಗುತ್ತೆ. ಅವಶ್ಯಕತೆ ಇದೆ ಅಂದ್ರೆ ಸಮಿತಿ ರಚನೆ ಆಗಲಿ ಅನ್ನೋದು ನನ್ನ ಅಭಿಪ್ರಾಯ ಎಂದು ಉಪೇಂದ್ರ ಹೇಳಿದ್ರು.
ಈ ಬಗ್ಗೆ ಒಂದು ವಿಚಾರ ಹೇಳಲು ಇಷ್ಟಪಡುತ್ತೇನೆ. ಏನೇ ಆದ್ರೂ ಡೈರೆಕ್ಟ್ ಆಗಿ ಎಕ್ಸ್ಪ್ರೆಸ್ ಮಾಡ್ಬೇಕು. ಆ ಕ್ಷಣದಲ್ಲೇ ರೆಬೆಲ್ ಆಗೋದು ಒಳ್ಳೆಯದು. ತುಂಬಾ ದಿನ ಆದ್ರೆ, ಸಮಸ್ಯೆಗೆ ಉತ್ತಮ ಪರಿಹಾರ ಸಿಗಲ್ಲ. ವಿಚಾರಗಳು ಕೂಡ ಸುಳ್ಳ-ನಿಜನಾ ಎನ್ನುವ ಪ್ರಶ್ನೆ ಮೂಡಿ ಎಲ್ಲರನ್ನು ಗೊಂದಲಕ್ಕೆ ತಳ್ಳುತ್ತೆ ಎಂದು ನಟ ಉಪೇಂದ್ರ ಹೇಳಿದ್ರು.
ನಾನು ಹೆಣ್ಣು ಮಕ್ಕಳಿಗೆ ಏನ್ ಹೇಳ್ತಿನಿ ಅಂದ್ರೆ ಏನೇ ಆದ್ರೂ ಡೈರೆಕ್ಟ್ ಆಗಿ ಹೇಳಿಬಿಡಿ. ನನಗೆ ಇಷ್ಟವಿಲ್ಲ. ಪ್ಲೀಸ್ ಕಾಲ್ ಮಾಡ್ಬೇಡಿ ಅಂತ ಹೇಳಿ. ನೀವು ಹೇಳಿದ್ರು ಸುಮ್ಮನಾಗದಿದ್ರೆ ಕಮ್ ಔಟ್ ಆಗಿ, ಹೊರಗೆ ಹೇಳಿಕೊಳ್ಳಿ. ನೀವು ಹೇಳಿಕೊಂಡಾಗಲೇ ಮತ್ತೊಬ್ಬರಿಗೆ ಮಾದರಿ ಆಗೋದು. ಕಿರುಕುಳ ಅನ್ನೋ ಪ್ರಶ್ನೆ ಬಂದಾಗ ಹೆಣ್ಣು ಮಕ್ಕಳು ಹೊರಗೆ ಬರಲೇಬೇಕು. ಹೆಣ್ಣು ಮಕ್ಕಳು ಕಾಂಪ್ರಮೈಸ್ ಆಗಿಬಿಟ್ರೆ ತಪ್ಪು ಯಾರದ್ದು ಎನ್ನುವ ಪ್ರಶ್ನೆ ಮೂಡುತ್ತೆ. ಈ ರೀತಿ ಆಗಬಾರದು ಎಂದು ಉಪೇಂದ್ರ ಹೇಳಿದ್ದಾರೆ.