ಅಂಗನವಾಡಿ ಕಟ್ಟಡದ ಸುರಕ್ಷತೆ ಹಾಗೂ ಮಕ್ಕಳ ಕ್ಷೇಮ ,ಗುಣಮಟ್ಟದ ಆಹಾರ ಪೂರೈಕೆ ವಿಚಾರವಾಗಿ ವಿಧಾನಪರಿಷತ್ ನಲ್ಲಿ ಬಿಜೆಪಿಯ ಹೇಮಲತಾ ನಾಯಕ್ ಪ್ರಶ್ನೆ ಮಾಡಿದರು.
ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉತ್ತರ ನೀಡಿದ್ದು 30 ವರ್ಷ ಮೇಲ್ಪಟ್ಟ ಅಂಗನವಾಡಿ ಕಟ್ಟಡ ಹಾಗೂ ಶಿಥಿಲಗೊಂಡ ಕಟ್ಟಡಗಳ ನವೀಕರಣಕ್ಕೆ ಅಗತ್ಯ ಕ್ರಮ, ಆ ಹಿನ್ನೆಲೆಯಲ್ಲಿ ಅವುಗಳ ಬಗ್ಗೆ ಜಿಲ್ಲಾವಾರು ಮಾಹಿತಿ ಪಡೆದುಕೊಳ್ಳುತ್ತಿದ್ದೇವೆಸಚಿವರಿಗೆ ಸಭಾಪತಿ ಸೂಚನೆ ಸದಸ್ಯರ ಆರೋಪಿತ ವಿಚಾರಗಳ ಬಗ್ಗೆ ಗಮನ ಹರಿಸಿ ಸ್ಥಳ ಪರಿಶೀಲನೆ ಮಾಡಿ. ಮೊಟ್ಟೆ ಗುಣಮಟ್ಟ ಪರಿಶೀಲನೆ ಮಾಡಿ ಸ್ಥಳೀಯವಾಗಿ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಅವರೇ ಅದನ್ನ ಪರಿಶೀಲನೆ ಮಾಡಿ ಖರೀದಿಸುತ್ತಾರೆ. ಎಂಟು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಮಕ್ಕಳಿಗೆ 8 ರೂ ಪ್ರೋವೈಡ್ ಮಾಡ್ತಿದ್ದಾರೆ. ಅದರಲ್ಲೇ ಎಲ್ಲವನ್ನೂ ಮೇಂಟೇನ್ ಮಾಡ್ತಿದ್ದೇವೆ. ಎಲ್ಲ ಸಮಸ್ಯೆಗಳತ್ತಲೂ ಗಮನ ಹರಿಸುತ್ತೇವೆ ಎಂದು ಹೇಳಿದರು.