ಬೆಂಗಳೂರು ;- ಸಂವಿಧಾನ ಇಲ್ಲದಿದ್ದರೆ ನಾನು ಎಮ್ಮೆ ಕಾಯುತ್ತಿರುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಬರೆದಿದ್ದರೆ ನಾನು ಇಂದು ಮುಖ್ಯಮಂತ್ರಿ ಆಗುತ್ತಿರಲಿಲ್ಲ.
ಸಂವಿಧಾನ ಇಲ್ಲದಿದ್ದರೆ ನಾನು ಎಮ್ಮೆ ಕಾಯುತ್ತಿರುತ್ತಿದೆ. ಸಚಿವ ಶಿವರಾಜ್ ತಂಗಡಗಿ ಅವರು ಕಲ್ಲು ಒಡೆಯುತ್ತಿದ್ದರು ಎಂದರು.
ನಾವು ಮನುಷ್ಯರಾಗಿ ಬದುಕಿ ಸಮಾಜದಲ್ಲಿ ಪರಿವರ್ತನೆ ತರಬೇಕು. ಬಸವಣ್ಣನವರು ಕೆಳವರ್ಗದ ಜನರ ಪರವಾಗಿ ಕೆಲಸ ಮಾಡಿದ್ದರು. ಅಸಮಾನತೆ ಇದ್ದರೆ ಸಮಾಜದಲ್ಲಿ ಸಾಮರಸ್ಯ ಇರುವುದಿಲ್ಲ. ಹೀಗಾಗಿ ಬಸವಣ್ಣ ಅನುಭವ ಮಂಟಪ ನಿರ್ಮಾಣ ಮಾಡಿದರು ಎಂದರು.