ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡದಲ್ಲಿ ಕಲ್ಲು ಕಾಣಿಸಿಕೊಳ್ಳುವುದು ಸಾಮಾನ್ಯ ಎನ್ನುವಷ್ಟು ಹಲವರಲ್ಲಿ ಕಾಣಿಸಿಕೊಳ್ಳುತ್ತಿದೆ.
ಬದಲಾಗುತ್ತಿರುವ ಜೀವನ ಶೈಲಿ ಯುವಕರನ್ನೂ ಮೂತ್ರಪಿಂಡ ಸಮಸ್ಯೆಗೆ ಎಡೆ ಮಾಡುತ್ತಿದೆ.
ಮೂತ್ರಪಿಂಡದಲ್ಲಿ ರೂಪಗೊಳ್ಳುವ ಕಲ್ಲುಗಳು ಗಾತ್ರದಲ್ಲಿ ಬದಲಾಗಬಹುದು.
ಕೆಲವು ಈ ಕಲ್ಲುಗಳು ಮರಳಿನ ಕಣದಷ್ಟು ಚಿಕ್ಕದಾಗಿದ್ದರೆ ಇನ್ನೂ ಕೆಲವೊಮ್ಮೆ ಸಣ್ಣ ಕಲ್ಲಿನಂತಿರುತ್ತವೆ.
ಇವು ಕ್ಯಾಲ್ಸಿಯಂ, ಆಕ್ಸಲೇಟ್ ಮತ್ತು ಯೂರಿಕ್ ಆಮ್ಲದಂತಹ ವಿವಿಧ ಖನಿಜಗಳಿಂದ ಸೃಷ್ಟಿಯಾಗುತ್ತವೆ.
ಅಲ್ಲದೇ ಜೆನೆಟಿಕ್ಸ್, ನಿರ್ಜಲೀಕರಣ ಅಥವಾ ಅನಾರೋಗ್ಯಕರ ಆಹಾರ ಪದ್ಧತಿಗಳಿಂದ ಸೃಷ್ಟಿ ಆಗುತ್ತವೆ.
ಈ ಸಮಸ್ಯೆಯನ್ನು ತಡೆಗಟ್ಟಲು ಮತ್ತು ರೋಗಲಕ್ಷಣಗಳನ್ನು ನಿರ್ವಹಿಸಲು ಮೂತ್ರಪಿಂಡದ
ಕಲ್ಲುಗಳನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು ಅವಶ್ಯವಾಗಿದೆ.
ಮೂತ್ರಪಿಂಡದಲ್ಲಿ ಕಲ್ಲು ಸೃಷ್ಟಿಯಾಗುವ ಐದು ಆರಂಭಿಕ ಲಕ್ಷಣಗಳು ಇಲ್ಲಿವೆ ನೋಡಿ
ಬೆನ್ನು ಅಥವಾ ಬದಿಯಲ್ಲಿ ನೋವು: ಮೂತ್ರಪಿಂಡದ ಕಲ್ಲುಗಳ ಸಾಮಾನ್ಯ ಆರಂಭಿಕ ಲಕ್ಷಣವೆಂದರೆ ಪಕ್ಕೆಲುಬುಗಳ
ಕೆಳಗೆ ಹಿಂಭಾಗದಲ್ಲಿ ಅಥವಾ ಬದಿಯಲ್ಲಿ ನೋವು ಕಾಣಿಸಿಕೊಳ್ಳುವುದು.
ಈ ನೋವು ಮಂದ ಅಥವಾ ತೀಕ್ಷ್ಣವಾಗಿರಬಹುದು ಮತ್ತು ಆಗಾಗ್ಗೇ ಬರಬಹುದು ಮತ್ತು ಹೋಗಬಹುದು.
ಮೂತ್ರನಾಳದ ಮೂಲಕ ಕಲ್ಲು ಚಲಿಸುವಾಗ, ನೋವು ಕೆಳ ಹೊಟ್ಟೆ ಅಥವಾ ತೊಡೆಸಂದು ಪ್ರದೇಶಕ್ಕೆ ಬದಲಾಗಬಹುದು.
ನೋವಿನ ತೀವ್ರತೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವ ಸಾಧ್ಯತೆಯೂ ಇದೆ.
ಕೆಲವರು ಸೌಮ್ಯ ಸ್ವಭಾವದ ನೋವು ಅನುಭವಿಸುತ್ತಾರೆ, ಆದರೆ ಇನ್ನು ಕೆಲವರಿಗೆ ಅಸಹನೀಯ ನೋವು ಕಾಣಿಸಿಕೊಳ್ಳುತ್ತದೆ.
ಮೂತ್ರದ ಲಕ್ಷಣಗಳು: ಮೂತ್ರಪಿಂಡದ ಕಲ್ಲುಗಳು ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು ಅಥವಾ ಉರಿ, ಮೂತ್ರ ವಿಸರ್ಜಿನೆ ಪ್ರಮಾಣ ಹೆಚ್ಚಳವಾಗುವುದು.
ಮೂತ್ರದಲ್ಲಿ ದುರ್ವಾಸನೆಯ ಒಳಗೊಂಡಂತೆ ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ ಕಾಣಿಸಿಕೊಳ್ಳಬಹುದು.
ಇನ್ನು ಕೆಲವು ಸಂದರ್ಭದಲ್ಲಿ ಮೂತ್ರದಲ್ಲಿ ರಕ್ತವು ಕಾಣಿಸಿಕೊಳ್ಳಬಹುದು.
ಈ ರೋಗಲಕ್ಷಣಗಳು ಮೂತ್ರನಾಳದ ಸೋಂಕಿನಂತೆಯೇ ಇರಬಹುದು,
ಆದ್ದರಿಂದ ಸರಿಯಾದ ರೋಗನಿರ್ಣಯಕ್ಕಾಗಿ ವೈದ್ಯರನ್ನು ಭೇಟಿ ಮಾಡುವುದು ಮುಖ್ಯ.
ವಾಕರಿಕೆ ಮತ್ತು ವಾಂತಿ: ನೋವು ಮತ್ತು ಮೂತ್ರ ವಿಸರ್ಜನೆಯಲ್ಲಿನ ಬದಲಾವಣೆಗಳ ಜೊತೆಗೆ,
ಮೂತ್ರಪಿಂಡದ ಕಲ್ಲುಗಳು ವಾಕರಿಕೆ ಮತ್ತು ವಾಂತಿಗೆ ಕಾರಣವಾಗಬಹುದು.