ಪ್ರತಿದಿನ ಒಂದಲ್ಲ ಒಂದು ಸಮಸ್ಯೆಯಿಂದ ನಾವು ಬಳಲುವಂತಹ ಸ್ಥಿತಿ ಬಂದಿದೆ. ಅದಕ್ಕಾಗಿ ನಾವು ರಾತ್ರಿ ಹೊತ್ತು ಕೆಲವೊಂದು ಕೆಲಸಗಳನ್ನು ಮಾಡೋ ಮೂಲಕ ರೋಗಗಳಿಂದ ದೂರ ಉಳಿಯಬೇಕು.
ಬ್ಯುಸಿ ಜೀವನದಲ್ಲಿ, ಪ್ರತಿಯೊಬ್ಬರೂ ಒಂದಲ್ಲ ಒಂದು ರೋಗಗಳಿಂದ ತೊಂದರೆಗೀಡಾಗಿದ್ದಾರೆ. ಕೆಲವರಿಗೆ ಮಧುಮೇಹ, ಕೆಲವರಿಗೆ ಹೃದ್ರೋಗ, ಮತ್ತು ಕೆಲವರು ಬೊಜ್ಜಿನಿಂದ ತೊಂದರೆಗೀಡಾಗಿದ್ದಾರೆ. ವಾಸ್ತವವಾಗಿ, ನಮ್ಮ ಜೀವನಶೈಲಿ ಮತ್ತು ಅಭ್ಯಾಸಗಳು ಆರೋಗ್ಯ ಹದಗೆಡಲು ಕಾರಣ.
ನೀವು ಸಹ ಆರೋಗ್ಯಕರ ಜೀವನ ನಡೆಸಲು ಬಯಸಿದರೆ, ತಜ್ಞರು ಹೇಳಿದ ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸಿ. ರೋಗ ಮುಕ್ತ ಜೀವನ ನಡೆಸಲು ಯಾವ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ.
*ಫೋನ್ ನಿಂದ ದೂರ
*ಬಾಯಿಯ ನೈರ್ಮಲ್ಯ
ನೀವು ಮಲಗುವ ಮೊದಲು ನಿಮ್ಮನ್ನು ತಿಳಿದುಕೊಳ್ಳೋದು ಮುಖ್ಯ. ಮಲಗುವ ಮೊದಲು ನೀವು ದಿನಚರಿ ಬರೆಯಬಹುದು. ಇದು ನಿಮ್ಮ ಆಲೋಚನೆಗಳನ್ನು ನಿಮ್ಮ ಮನಸ್ಸಿನಿಂದ ಹೊರಹಾಕಲು ಸಹಾಯ ಮಾಡುತ್ತದೆ. ನೀವು ಪ್ರತಿದಿನ ಡೈರಿಯಲ್ಲಿ ಮೂರು ವಿಷಯಗಳನ್ನು ಬರೆಯಬೇಕು. ಉದಾಹರಣೆಗೆ ನಿಮಗೆ ಹೇಗನಿಸುತ್ತಿದೆ? ನಾಳೆಯ ನಿಮ್ಮ ಗುರಿ ಏನು? ಇದಲ್ಲದೆ, ನೀವು ಮಾಡಿದ ಎಲ್ಲವನ್ನೂ ಬರೆಯಿರಿ. ಇದು ನಿಮಗೆ ತುಂಬಾ ಶಾಂತ ಮತ್ತು ಆರಾಮದಾಯಕ ಭಾವನೆ ನೀಡುತ್ತದೆ.
ನಿಮ್ಮನ್ನು ಪ್ಯಾಂಪರ್ ಮಾಡಿ.
ಮಲಗುವ ಮೊದಲು ನಿಮ್ಮನ್ನು ನೀವು ಮುದ್ದಿಸೋದನ್ನು ಮರೆಯಬೇಡಿ. ಪ್ರತಿದಿನ ದೇಸಿ ತುಪ್ಪದಿಂದ ಹಿಮ್ಮಡಿಯನ್ನು ಮಸಾಜ್ ಮಾಡಿ. ಇದು ರಕ್ತ ಪರಿಚಲನೆಯನ್ನು ಸರಿಪಡಿಸುತ್ತದೆ. ಮನಸ್ಸು ಶಾಂತವಾಗಿರುತ್ತದೆ ಮತ್ತು ಹಿಮ್ಮಡಿ ಬಿರುಕು ಬಿಡುವ ಸಾಧ್ಯತೆಗಳು ಕಡಿಮೆ.