ಬೆಂಗಳೂರು: ಬಿಜೆಪಿ ಲೋಕಸಭೆ ಟಿಕೆಟ್ ಕೈತಪ್ಪಿದ್ದರಿಂದ ನನಗೆ ನೋವಾಗಿದೆ ನನಗೆ ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂದಿರುವುದು ಸತ್ಯ ಆದ್ರೆ ಕಾಂಗ್ರೆಸ್ ಪಕ್ಷಕ್ಕೆ ಸೇರುವುದಿಲ್ಲ ಎಂದು ಡಿವಿಎಸ್ ಸ್ಪಷ್ಟನ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಸೇರುವುದಿಲ್ಲ ಎಂದು ತಿಳಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ನಿಮ್ಮ ಮುಂದಿನ ನಡೆ ಏನು ಎಂಬುದನ್ನು ಹಲವರು ಕೇಳಿದ್ದಾರೆ ಬಿಜೆಪಿ ಶುದ್ದೀಕರಣದ ಕಡೆಗೆ ನನ್ನ ನಡೆ ಎಂದ ಸದಾನಂದಗೌಡ ಬಿಜೆಪಿಯಲ್ಲೇ ಇದ್ದು ಪಕ್ಷ ಶುದ್ದೀಕರಣ ಮಾಡುತ್ತೇನೆಂದ ಡಿವಿಎಸ್
ಎಲ್ಲಿ ನಿಂತೂ ಗೆಲ್ಲಿಸುತ್ತೇವೆಂದು ಕಾಂಗ್ರೆಸ್ಸಿನವರು ಹೇಳಿದ್ದಾರೆ ನನಗೆ ಟಿಕೆಟ್ ತಪ್ಪಿಸಿದವರು ಪಶ್ಚಾತ್ತಾಪ ಪಡುತ್ತಾರೆ ಸಿಎಂ ಆಗಿ, ಕೇಂದ್ರ ಸಚಿವನಾಗಿ ನನ್ನ ಕೆಲಸ ತೃಪ್ತಿ ತಂದಿದೆ ನಾನೇನೂ ಮಾಡಿಲ್ಲ ಎಂದು ಹೇಳಿದವರಿಗೆ ಇದೇ ನನ್ನ ಉತ್ತರ ಎಂದು ಹೇಳಿದರು.
‘ಸಹಿಸಿಕೊಳ್ಳೋರಿಗೆ ತಾಳ್ಮೆಯಿದ್ರೆ, ದುಃಖ ಕೊಟ್ಟವರು ಇದ್ದೂ ಸತ್ತಂತೆ’ ಕರ್ನಾಟಕದಲ್ಲಿ ಮತ್ತೆ ಮೋದಿ ಪರ ವಾತಾವರಣ ಸೃಷ್ಟಿಯಾಗಬೇಕು. ಮತ್ತೊಮ್ಮೆ ನರೇಂದ್ರ ಮೋದಿಯೇ ಪ್ರಧಾನಿ ಆಗಬೇಕು
ಮೋದಿ ಪ್ರಧಾನಿಯಾಗಲು ಬಿಜೆಪಿ ಜನಪರವಾದ ಪಕ್ಷವಾಗಬೇಕು ಬೆಂಗಳೂರಿನಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಹೇಳಿಕೆ ಪಕ್ಷದ ಜವಾಬ್ದಾರಿ ವಹಿಸಿಕೊಂಡವರು ಸ್ವಾರ್ಥಿಗಳಾಗಿದ್ದಾರೆ ಎಲ್ಲವೂ ನಮ್ಮವರಿಗೆ, ಕುಟುಂಬಸ್ಥರು ಚೇಲಾಗಳಿಗೆ ಸಿಗಬೇಕು ಎಲ್ಲವೂ ನಾವು ಹಾಗೂ ನಮ್ಮವರಿಗೆ ಸಿಗಬೇಕು ಎಂಬ ಸ್ವಾರ್ಥ ಬಿಜೆಪಿಯ ಕಾರ್ಯಕರ್ತರಿಗೆ ಯಾವುದೇ ಅವಕಾಶ ಕೊಡುತ್ತಿಲ್ಲ B.S.ಯಡಿಯೂರಪ್ಪ ವಿರುದ್ಧ D.V.ಸದಾನಂದಗೌಡ ಪರೋಕ್ಷ ವಾಗ್ದಾಳಿ