ಬೆಂಗಳೂರು: ಪಕ್ಷಾಂತರ ಮಾಡುವವರು ಚುನಾವಣೆಗೆ ನಿಲ್ಲಬಾರದು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಕ್ಷಾಂತರ ಅನ್ನುವುದು ಪವಿತ್ರ ಕಾರ್ಯ ಆಗಿದೆ. ಹೋದ ಚುನಾವಣೆಯಲ್ಲಿ ಆದ ಪಕ್ಷಾಂತರ ತದನಂತರ ಆದ ಪಕ್ಷಾಂತರ, ಚುನಾವಣಾ ಬಂದ ಮೇಲೆ ಪಕ್ಷಾಂತರ ಕ್ಕೆ ಎಲ್ಲರೂ ಬಾಗಿಲು ತೆಗಿದಿದ್ದಾರೆ. ಪಕ್ಷಾಂತರವನ್ನು ನಾವು ಬೆಂಬಲಿಸಿದರೆ ಪ್ರಜಾಪ್ರಭುತ್ವ ಕೆಟ್ಟು ಹೋಗುತ್ತೆ. ಈ ಬಿಜೆಪಿ ಸರ್ಕಾರ ಬಂದಿದ್ದು ಪಕ್ಷಾಂತರದಿಂದಲೇ. ಈಗಾ ಮತ್ತೆ ಪಕ್ಷಂತಾರಕ್ಕೆ ಗರಿಗೆದರಿತ್ತಾಯಿದಾರೆ. ಎಲ್ಲಾ ಪಕ್ಷದವರು ಯಾರ ಬೇಕಾದ್ರು ಬರಬಹುದು ಎಂದು ಹೇಳುತ್ತಿದ್ದಾರೆ.
ಹೀಗಾಗಿಯೇ ಪಕ್ಷಾಂತರ ನಿಷೇಧ ಕಾಯ್ದೆಯನ್ನ ತಿದ್ದುಪಡಿ ಮಾಡಿ ತರಲೆಬೇಕು. ಪಕ್ಷಾಂತರ ಮಾಡುವವರು ಚುನಾವಣಾಗೆ ನಿಲ್ಲಬಾರದು ಎಂದು ಹೇಳಿದರು. ಇನ್ನೂ ಯಡಿಯೂರಪ್ಪ ಅವರನ್ನ ಮುಲೆ ಗುಂಪು ಮಾಡಬೇಕು ಎಂದು ಬಿಜೆಪಿ ಹೈಕಮಾಂಡ್ ಮಾಡುತ್ತಿದ್ದಾರೆ. ಯಡಿಯೂರಪ್ಪ ಇಲ್ಲ ಅಂದ್ರೆ ಚುನಾವಣೆ ಆಗೋದಿಲ್ಲ ಅನ್ನುವ ಹಾಗೆ ಇತ್ತು. ಆದರೆ ಇವತ್ತು ಬಿಜೆಪಿಯಲ್ಲಿ ಜೆಪಿ ನಡ್ಡಾ,ಅಮಿತ್ ಶಾ ,ಪ್ರಧಾನಿ ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ. ಈ ಹಿನ್ನೆಲೆ ಯಡಿಯೂರಪ್ಪ ಇಲ್ಲ ಅಂದ್ರೂನೂ ನಾವೆ ಚುನಾವಣಾ ಮಾಡುತ್ತೇವೆ ಎಂದು ತೋರ್ಪಡಿಸುತ್ತಿದ್ದಾರೆ ಎಂದರು. ಇನ್ನೂ ಈ ಬಾರಿ ಚಾಮರಾಜನಗರ ಯ ಸ್ಪರ್ಧೆ ಮಾಡುತ್ತೇನೆ ಎಂದ ವಾಟಾಳ್ ನಾಗಾರಾಜ್ ಹೇಳಿದ್ದಾರೆ.