ಯಾವಾಗಲೂ ನನಗೆ ಸುಸ್ತಾಗುತ್ತದೆ, ಯಾವ ಕೆಲಸವನ್ನು ಮಾಡಲು ಆಗುವುದಿಲ್ಲ ಎನ್ನುವವರು ತಮ್ಮ ಆಹಾರ ಪದ್ಧತಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ.
ಮನುಷ್ಯನಿಗೆ ತನ್ನ ದೈಹಿಕ ಕಾರ್ಯ ಚಟುವಟಿಕೆ ಸೇರಿದಂತೆ ದಿನನಿತ್ಯದ ಕಾರ್ಯ ಚಟುವಟಿಕೆಗಳನ್ನು ಪೂರೈಸಿಕೊಳ್ಳಲು ದೇಹದ ಪ್ರತಿಯೊಂದು ಭಾಗಕ್ಕೂ ಶಕ್ತಿ ಹಾಗೂ ಚೈತನ್ಯದ ಅಗತ್ಯವಿದೆ.
ನಮ್ಮಲ್ಲಿ ಅನೇಕರು ಆಯಾಸ, ಸುಸ್ತು ಹಾಗೂ ನಿಶ್ಯಕ್ತಿಯಿಂದ ಬಳಲುತ್ತಾರೆ. ಚಿಕ್ಕ ಪುಟ್ಟ ಕೆಲಸ ಮಾಡಿದರೂ ಹೆಚ್ಚು ಆಯಾಸಗೊಳ್ಳುತ್ತಾರೆ. ಯಾವಾಗಲೂ ಶಕ್ತಿಯ ಕೊರತೆಯನ್ನು ಅನುಭವಿಸುತ್ತಾರೆ. ಇದಕ್ಕೆ ಕಾರಣ ವಿವಿಧ ಆರೋಗ್ಯ ಸಮಸ್ಯೆಗಳು ಅಥವಾ ದೈಹಿಕ ಚಟುವಟಿಕೆಯ ಕೊರತೆಯಾಗಿರಬಹುದು. ಆದರೆ ನಮ್ಮ ಜೀವನಶೈಲಿ ಹಾಗೂ ಕೆಲವೊಂದು ಆಹಾರಗಳನ್ನು ಸೇವಿಸುವುದರಿಂದ ನಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.
ನೀರು ಕುಡಿಯುವುದನ್ನು ಮರೆಯದಿರಿ!
ನಿರ್ಜಲೀಕರಣದ ಸಮಸ್ಯೆಯಿಂದಲೂ ಕೂಡ ಬಳಲಿಕೆ, ಸುಸ್ತು ಕಾಣಿಸಿ ಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ದಿನಕ್ಕೆ 2 ರಿಂದ 3 ಲೀಟರ್ ನೀರನ್ನು ಸೇವಿಸಿ.
ಬೇಯಿಸಿದ ಮೊಟ್ಟೆ
ನಮಗೆಲ್ಲಾ ಗೊತ್ತೇ ಇರುವ ಹಾಗೆ, ಮೊಟ್ಟೆಯಲ್ಲಿ ಕಂಡು ಬರುವ ಅಧಿಕ ಪ್ರಮಾಣದ ಪ್ರೋಟೀನ್, ಆರೋಗ್ಯಕಾರಿ ಕೊಬ್ಬಿನಾಂಶ ಗಳು ಹಾಗೂ ದೇಹಕ್ಕೆ ಬೇಕಾಗುವ ವಿಟಮಿನ್ಸ್ ಗಳು ಹಾಗೂ ಖನಿಜಾಂಶಗಳು, ಕಂಡು ಬರುವುದರಿಂದ, ದೇಹವು ಶಕ್ತಿಯನ್ನು ಉತ್ಪಾದಿಸಲು ನೆರವಾಗುತ್ತದೆ.
ಬಾಳೆಹಣ್ಣು ಸೇವನೆ ಮಾಡಿ..
ಬಾಳೆ ಹಣ್ಣಿನಲ್ಲಿ ಹಲವಾರು ಬಗೆಯ ವಿಟಮಿನ್ಸ್ ಗಳು, ಪೊಟ್ಯಾ ಸಿಯಮ್, ಅಂಶಗಳು ಯಥೇಚ್ಛವಾಗಿ ಕಂಡು ಬರುತ್ತದೆ. ಹೀಗಾಗಿ ಊಟದ ಬಳಿಕ ಬಾಳೆಹಣ್ಣನ್ನು ಸೇವನೆ ಮಾಡಿದರೆ, ದೇಹವನ್ನು ಶಕ್ತಿಯುತವಾಗಿ ಇರಿಸಿಕೊಳ್ಳಬಹುದು.
ಪ್ರೋಟೀನ್ ಅಂಶ ಇರುವ ಆಹಾರಗಳನ್ನು ಹೆಚ್ಚು ಸೇವನೆ ಮಾಡಿ
ಪ್ರೋಟೀನ್ ಭರಿತ ಆಹಾರಗಳಾದ ಡ್ರೈ ಫ್ರೂಟ್ಸ್, ಪನ್ನೀರ್, ಚೀಸ್ , ಮೊಳಕೆ ಭರಿಸಿದ ಕಾಳುಗಳು ಇಂತಹ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡಿ.
ತಾಜಾ ಹಣ್ಣುಗಳನ್ನು ಸೇವಿಸಿ
ವಿಟಮಿನ್ ಸಿ ಅಂಶ ಹೆಚ್ಚಾಗಿ ಕಂಡು ಬರುವಂತಹ ಹಣ್ಣು ಗಳಾದ ಸೀಬೆಹಣ್ಣು, ಸೇಬು, ಕಿತ್ತಳೆ, ಮೊಸಂಬಿಯಂತಹ ಹಣ್ಣು ಗಳನ್ನ ಸೇವನೆ ಮಾಡಿ, ಇಲ್ಲಾಂದ್ರೆ ಇದರಿಂದ ಮಾಡಿದ ಜ್ಯೂಸ್ ಅನ್ನು ಕುಡಿಯಿರಿ.
ಬೀಜಗಳು
ಅಧಿಕ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ನೆನೆಸಿಟ್ಟ ಬಾದಾಮಿ ಬೀಜಗಳು, ವಾಲ್ ನಟ್ಸ್, ಕುಂಬಳಕಾಯಿ ಬೀಜಗಳು, ಸೂರ್ಯಕಾಂತಿ ಬೀಜಗಳು, ಚಿಯಾ ಬೀಜಗಳು, ಅಗಸೆಬೀಜಗಳು ಇವುಗಳನ್ನೆಲ್ಲಾ ಸೇವನೆ ಮಾಡಿ…