ಯಾವುದೇ ಭಾಗದ ಕೆಲಸದಲ್ಲಿ ವ್ಯತ್ಯಯವಾದರೂ ದೇಹದ ಆರೋಗ್ಯದಲ್ಲಿ ಸಮತೋಲನ ತಪ್ಪಿ ಹೋಗುತ್ತದೆ. ಅದರಲ್ಲೂ ತಲೆ ಹಾಗೂ ಮುಂಡವನ್ನು ಸಂಪರ್ಕಿಸುವ ಕುತ್ತಿಗೆಯದ್ದು ಬಹಳ ಮುಖ್ಯವಾದ ಪಾತ್ರವಿರುತ್ತದೆ. ಇತ್ತೀಚಿನ ದಿನಗಳಲ್ಲಿ ಕುತ್ತಿಗೆ ನೋವೆಂದು ಆಸ್ಪತ್ರೆಯ ಕದ ತಟ್ಟುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ವಾಹನ ಓಡಿಸುವವರು, ಹೆಚ್ಚು ಹೊತ್ತು ಕಂಪ್ಯೂಟರ್ ನೋಡುತ್ತಾ ಕೆಲಸ ಮಾಡುವವರು ಆಗಾಗ್ಗೆ ಕುತ್ತಿಗೆ ನೋವಿನಿಂದ ಬಳಲುತ್ತಿರುತ್ತಾರೆ. ನೋವು ಬಂದರೆ ಸಾಕು, ಬೇರಾವುದೇ ಕೆಲಸವನ್ನು ಮಾಡಲು ಕಷ್ಟವಾಗುತ್ತದೆ. ಕುತ್ತಿಗೆ ನೋವಿನಿಂದ ಬಳಲುತ್ತಿರುವ ಕೆಲವರು ಸ್ವಲ್ಪ ಹೊತ್ತು ತಲೆದಿಂಬಿನ ಮೇಲೆ ಕುತ್ತಿಗೆಯಿಟ್ಟು ಮಲಗಿದರೆ ಸಾಕು ಎಂದುಕೊಳ್ಳುತ್ತಾರೆ. ಇನ್ನು ಕೆಲವರು ಬಿಸಿನೀರಿನ ಹವೆಯಿಂದ ಉಪಶಮನ ಪಡೆಯಬಹುದು ಎಂದು ಭಾವಿಸುತ್ತಾರೆ. ಇವೆಲ್ಲವೂ ನೋವನ್ನು ಉಪಶಮನ ಮಾಡುವ ವಿಧಾನಗಳೇ ಹೊರತು ನೋವನ್ನು ಸಂಪೂರ್ಣವಾಗಿ ತೆಗೆದುಹಾಕುವ ಪರಿಹಾರಗಳಲ್ಲ ಎಂಬುದನ್ನು ತಿಳಿಯಬೇಕು.
ಕುತ್ತಿಗೆ ಮೇಲೆ ಏನಾದರೂ ಭಾರವಾದುದುನ್ನು ಹಾಕಿದರೆ ನೋವು ಬರುವ ಸಾಧ್ಯತೆ ಇದೆ. ಅತಿಯಾದ ವ್ಯಾಯಾಮದಿಂದಲೂ ನೋವುಂಟಾಗಬಹುದು. ವಾಹನ ಓಡಿಸುವಾಗ, ನೂಕುನುಗ್ಗಲಿನಲ್ಲಿ, ಭಾರ ಎತ್ತುವಾಗ ಒತ್ತಡದಿಂದ ಕುತ್ತಿಗೆ ನೋವು ಬರುವ ಸಾಧ್ಯತೆ ಹೆಚ್ಚು. ಕುತ್ತಿಗೆಯಲ್ಲಿ ಸೂಕ್ಷ್ಮವಾದ ಸ್ನಾಯುಗಳಿವೆ. ಇವುಗಳು ಒತ್ತಡಕ್ಕೊಳಗಾದಾಗ ಅದು ನೋವುಗೆ ಕಾರಣವಾಗಬಹುದು. ಇವುಗಳಷ್ಟೇ ಅಲ್ಲ, ಕುತ್ತಿಗೆಗೆ ರಕ್ತ ಪೂರೈಕೆ ಸರಿಯಾಗಿ ಆಗದಿದ್ದರೆ, ಕುತ್ತಿಗೆಯಲ್ಲಿನ ಡಿಸ್ಕ್ಗಳು ಮಿಸ್ಪ್ಲೇಸ್ ಆಗುವುದರಿಂದ ಬೆನ್ನು ನೋವಿನ ಸಮಸ್ಯೆ ಎದುರಾಗಬಹುದು ಎನ್ನುತ್ತಾರೆ ಖ್ಯಾತ ಮೂಳೆ ಶಸ್ತ್ರಚಿಕಿತ್ಸಕ ಡಾ. ಮನೋಜ್ ಕುಮಾರ್.
ಪರಿಹಾರ: ಯುಜನತೆಯಲ್ಲಿ ಕತ್ತುನೋವು ಕಾಣಿಸಿಕೊಂಡಲ್ಲಿ ತೆಂಗಿನನೀರು, ಎಲೆಕ್ಟ್ರೋಲೈಟ್ ನೀರು, ಕತ್ತುನೋವಿನ ಹಾಟ್ ಬ್ಯಾಗ್ ಬಳಕೆ ಮಾಡುವುದರಿಂದ ಉಪಶಮನ ಕಂಡುಕೊಳ್ಳಬಹುದು. ಸದಾ ಕಂಪ್ಯೂಟರ್ ಮುಂದೆ ಕುಳಿತು ಹೆಚ್ಚು ಸಮಯ ಕಳೆಯುವವರು ಮತ್ತು ವಾಹನಗಳನ್ನು ಚಲಾಯಿಸುವವರು ನಿಕ್ ಸಪೋರ್ಟ್ ಬ್ಯಾಂಡ್ಗಳನ್ನು ಧರಿಸಿ ಕತ್ತುನೋವು ತಗ್ಗಿಸಬಹುದು.
ಕಂಪ್ಯೂಟರ್ ಮುಂದೆ ಹೆಚ್ಚಿನ ಸಮಯ ಕುಳಿತು ಕೆಲಸ ಮಾಡುವವರು ಪ್ರತಿ 40 ನಿಮಿಷಕ್ಕೆ ಒಂದುಬಾರಿ ವಿಶ್ರಾಂತಿ ಪಡೆಯವುದು ಸೂಕ್ತ. ಹಾಗೆಯೇ ಕಂಪ್ಯೂಟರ್ ಮತ್ತು ಲಾಪ್ಗಳು ಕಣ್ಣಿಗೆ ಸಮಾನವಾಗಿ ಇರುವಂತೆ ಅಡ್ಜಸ್ಟ್ ಮಾಡಿಕೊಳ್ಳುವುದು ಉತ್ತಮ. ಒಂದೇ ಭಂಗಿಯಲ್ಲಿ ಹಚ್ಚಿನ ಸಮಯ ಕುಳಿತುಕೊಳ್ಳುವುದು ಅಥವಾ ಮಲುಗುವುದರಿಂದಲೂ ಇಂತಹ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಈ ಬಗ್ಗೆ ಜಾಗ್ರತೆ ವಹಿಸವುದು ಉತ್ತಮ. ವ್ಯಾಯಾಮದಿಂದಲೂ ಕತ್ತು ನೋವಿನ ಸಮಸ್ಯೆಯನ್ನು ಬಗೆಹರಿಸಬಹುದು.